ರಮೇಶ ಜಾರಕಿಹೋಳಿ ಮಾತಿನಲ್ಲಿ ಬದಲಾವಣೆ ಮಾಡಿಕೊಳ್ಳಲಿ:ಸಹೋದರನಿಗೆ ಸಲಹೆ ನೀಡಿದ ಸತೀಶ ಜಾರಕಿಹೊಳಿ

0
50

ರಮೇಶ ಜಾರಕಿಹೋಳಿ ಮಾತಿನಲ್ಲಿ ಬದಲಾವಣೆ ಮಾಡಿಕೊಳ್ಳಲಿ:ಸಹೋದರನಿಗೆ ಸಲಹೆ ನೀಡಿದ ಸತೀಶ ಜಾರಕಿಹೊಳಿ

ಕನ್ನಡಮ್ಮ ಸುದ್ದಿ-ಬೆಳಗಾವಿ: ಲಕ್ಷ್ಮಿ ಹೆಬ್ಬಾಳಕರ್ ಸತೀಶ ಜಾರಕಿಹೋಳಿ ಕಾಲ ಕಸಕ್ಕೂ ಸಮವಲ್ಲ ಎಂಬ ಹೇಳಿಕೆ ನೀಡಿದ್ದ ಸಚಿವ ರಮೇಶ ಜಾರಕಿಹೊಳಿ ಮಾತಿನಲ್ಲಿ ಬದಲಾವಣೆ ಮಾಡಿಕೊಳ್ಳಲಿ ಎಂದು ಶಾಸಕ ಸತೀಶ ಜಾರಕಿಹೋಳಿ ಸಲಹೆ ನೀಡಿದ್ದಾರೆ .

ಇಂದು ನಗರದಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಅವರು ರಮೇಶ ಜಾರಕಿಹೋಳಿ ಈ ಹಿಂದಿ ನನಗೂ ಬಹಳ ಸಲ ಬೈದಿದ್ದರು .ಆದರೆ ನಾನು ಇದನ್ನು ದೊಡ್ಡದು ಮಾಡಿಲ್ಲ,ಆದರೆ ಲಕ್ಷ್ಮಿ ಹೆಬ್ಬಾಳಕರ್ ದೊಡ್ಡದು ಮಾಡುವುದು ಸರಿಯಲ್ಲ.ರಮೇಶ ಜಾರಕಿಹೋಳಿ ಎಲ್ಲರನ್ನು ಬೈಯುತ್ತಾರೆ .ಮಾತಿನಲ್ಲಿ ಬದಲಾವಣೆ ಮಾಡಿಕೊಳ್ಳಲಿ ಎಂದರು .

ಇಂದು ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ ಕರೆದಿರುವ ಸಭೆಗೆ ನಾನು ಹೋಗುವುದಿಲ್ಲ,ರಮೇಶ ಜಾರಕಿಹೋಳಿ ಹೋಗುತ್ತಾರೆ ನನಗೆ ಪೂರ್ವ ನಿಗದಿ ಕಾರ್ಯಕ್ರಮಗಳಿವೆ ಎಂದು ತಿಳಿಸಿದರು .

loading...