ರಸ್ತೆ ಅಪಘಾತ ಓರ್ವ ಸಾವು

0
45

ಬೆಳಗಾವಿ : ದ್ವಿಚಕ್ರ ವಾಹನಕ್ಕೆ ಸರಕು ಸಾಗಿಸುವ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿವೊರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ಇಲ್ಲಿನ ನೆಹರು ನಗರದ ಬಸವಣ ಮಂದಿರದ ಹತ್ತಿರ ನಡೆದಿದರ.
ರಾಮದುರ್ಗ ತಾಲೂಕಿನ ಕಲ್ಮಡಿ ಗ್ರಾಮದ ಮುರಳಿ ಗೋಪಾಲ ಪಮ್ಮಾರ (32) ಮೃತವ್ಯಕ್ತಿ. ಈತ ಸಾರಿಗೆ ಬಸ್ ಚಾಲಕ ಕಂ ನಿರ್ವಾಹನಾಗಿ ಕಾರ್ಯನಿರ್ವಹಿಸುತ್ತಿದ್ದ. ಎಂದಿನಂತೆ ಕರ್ತವ್ಯ ಮುಗಿಸಿ ವಾಸವಾಗಿದ್ದ ಕಂಗ್ರಾಳಿ ಗ್ರಾಮದ ಕಡೆಗೆ ದ್ವಿಚಕ್ರ ವಾಹನದ ಮೇಲೆ ತೆರಳುತ್ತಿದ್ದ ಸಂದರ್ಭದಲ್ಲಿ ಸರಕು ಸಾಗಿಸುವ ಟೆಂಪೆÇ ಡಿಕ್ಕಿ ಹೊಡೆದಿದೆ. ಈ ಘಟನೆಯಿಂದಾಗಿ ದ್ವಿಚಕ್ರ ವಾಹನ ಸವಾರನಿಗೆ ಗಂಭೀರ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಘಟನೆ ನಡೆಯುತ್ತಿದ್ದಂತೆ ಟೆಂಪೆÇೀ ಚಾಲಕ ಸ್ಥಳದಲ್ಲಿಯೆ ವಾಹನ ಬಿಟ್ಟು ಪರಾರಿಯಾಗಿದ್ದಾನೆ.
ಈ ಕುರಿತು ಉತ್ತರ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...