ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಐಹೊಳೆ ಚಾಲನೆ

0
35

ರಾಯಬಾಗ 13: ತಾಲೂಕಿನ ನಿಪನಾಳ ಗ್ರಾಮದಲ್ಲಿ ಲೋಕೊಪಯೋಗಿ ಇಲಾಖೆಯ ಟಿಎಸ್‌ಪಿ ಯೋಜನೆಯಡಿ ಮಂಜೂರಾದ ರೂ.60 ಲಕ್ಷ ವೆಚ್ಚದಲ್ಲಿ ನಿಪನಾಳ ಗ್ರಾಮದಿಂದ ಗೊಡಚಿ ತೋಟದವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಡಿ.ಎಮ್‌.ಐಹೊಳೆ ಅವರು ಶನಿವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಅಭಿವೃದ್ಧಿಯತ್ತ ಕೊಂಡಯ್ಯುತ್ತಿದ್ದಾರೆ. ಈಗಾಗಲೇ ದೇಶದ ಎಲ್ಲ ಬಡ ಜನರಿಗೆ ಅನೇಕ ಒಳ್ಳೆ ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳ ಸದುಪಯೋಗವನ್ನು ಎಲ್ಲ ಪಡೆದುಕೊಳ್ಳಬೇಕೆಂದರು. ರಾಯಬಾಗ ಮತಕ್ಷೇತ್ರದ ಎಲ್ಲ ತೋಟದ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗುತ್ತಿದೆ. ತೋಟದ ರಸ್ತೆಗಳನ್ನು ಡಾಂಬರೀಕರಣ ಮಾಡುವುದರಿಂದ ರೈತರಿಗೆ ತಾವು ಬೆಳೆ ಕಬ್ಬನ್ನು ಕಾರ್ಖಾನೆಗಳಿಗೆ ಸಾಗಿಸಲು ತುಂಬಾ ಅನುಕೂಲವಾಗುತ್ತದೆ ಎಂದರು. ಜಿ.ಪಂ.ಸದಸ್ಯ ನಿಂಗಪ್ಪ ಪಕಾಂಡಿ, ರಾಜು ಹಳಬರ, ಶೇಖರ ಖನದಾಳೆ, ಅಪ್ಪಾಸಾಬ ಬ್ಯಾಕೂಡೆ, ಮಲ್ಲಪ್ಪ ವ್ಯಾಪಾರಿ, ಪುಂಡಲಿಕ ಮಾಯನ್ನವರ, ಪುತ್ರಪ್ಪ ಮ್ಯಾಗಡಿ, ಶಂಕರ ಕುರಬೇಟ, ಬಸವರಾಜ ಮುಗಳಿ, ಲಕ್ಷ್ಮಣ ಗೂಡೆನ್ನವರ, ಅಶೋಕ ಕದಂ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...