ರಾಗಾಗೆ ನ್ಯಾಯಾಲಯ ಕಪಾಳ ಮೋಕ್ಷ: ಜಿರಲಿ

0
10


ಬೆಳಗಾವಿ

ರಫೇಲ್‌ ಖರೀದಿಯಲ್ಲಿ ಸುಪ್ರೀಂ ಕೋರ್ಟ ಸ್ಪಷ್ಟನೆ ನೀಡಿದೆ. ಪ್ರಧಾನಿ ನರೇಂದ್ರ ‌ಮೋದಿ ಚೌಕಿದಾರ ಚೋರ ಹೈ ಎಂದು ಹೇಳಿಕೆ ನೀಡಿರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ನ್ಯಾಯಾಲಯ ಕಪಾಳ ಮೋಕ್ಷ ಮಾಡಿದೆ ಎಂದು ಬಿಜೆಪಿ ಮುಖಂಡ ಎಂ.ಬಿ.ಜಿರಲಿ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಭಾರತ ದೇಶದ ಸರ್ವೋಚ್ಚ ನ್ಯಾಯಾಲ ಆದೇಶ ಮಾಡಿದೆ. ಡಿ.2018 ರಲ್ಲಿ ರಫೇಲ್ ಖರೀದಿ ಕುರಿತು ಕೆಲ ಕಾಂಗ್ರೆಸ್ ನವರು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋದರು. ಆದರೆ ಆ ಸಂದರ್ಭದಲ್ಲಿ ಇದನ್ನು ವಿಚಾರಣೆ ಮಾಡಲು ಸಾಧ್ಯವಿಲ್ಲ ಎಂದು ತಳ್ಳಿ ಹಾಕಿದ್ದರು.

ಸುಪ್ರೀಂ ಕೋರ್ಟ್ ಕೂಲಂಕುಷವಾಗಿ ಪರಿಶೀಲನೆ ನಡೆಸಿದರೂ ಅಬ್ರಬುದ್ದ ಕಾಂಗ್ರೆಸ್ ನ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನ್ಯಾಯಾಲಯ ಹೇಳಿದೆ ಚೌಕಿದಾರ ಮೋದಿ ಚೋರ ಹೈ ಎಂದು ದೇಶದ ಜನತೆಯ ಮುಂದೆ ಹೇಳಿದ್ದರು. ಈ ಕುರಿತು ನಾವು ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇವು.
ಮೀನಾಕ್ಷಿ ಲೇಖಿ ಎಂಬುವರ ಮೂಲಕ ರಾಹುಲ್ ಗಾಂಧಿ ಆರೋಪ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಚೌಕಿದಾರ ಚೋರ ಹೈ ಎನ್ನುತ್ತಿರುವ ಆರೋಪಕ್ಕೆ ನ್ಯಾಯಾಲಯಕ್ಕೆ ದಾವೆ ಹೂಡಿದ್ದರು ಎಂದರು.
ಜಾತಿ,ಮತ, ಪಂಥಗಳ ಮೇಲೆ ಮತಗಳನ್ನು ಕೇಳಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ಮಂಗಳವಾರದೊಳಗೆ ರಾಹುಲ್ ಗಾಂಧಿಗೆ ನ್ಯಾಯಾಲಯದಲ್ಲಿ ಸ್ಪಷ್ಟಿಕರಣ ನೀಡುವಂತೆ ಸೂಚನೆ ನೀಡಿದೆ ಎಂದರು.
ರಾಜ್ಯದಲ್ಲಿ ಸಿಎಂ ಕುಮಾರಸ್ವಾಮಿ ಅವರು ಮಾಧ್ಯಮದವರ ಮೇಲೆ ಹಲ್ಲೆಯಾದರೆ ನಾನು ಜವಾಬ್ದಾರನಲ್ಲ ಎಂದು ಮಂಡ್ಯದಲ್ಲಿ ಹೇಳಿಕೆ ನೀಡುವುದು ಸರಿಯಲ್ಲ.
ವಿರೋಧ ಪಕ್ಷದವರು ಮಾಡುತ್ತಿರುವ ಆರೋಪಗಳಿಗೆ ಚುನಾವಣಾ ಆಯೋಗ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಶಾಸಕ‌ ಅನಿಲ್ ಬೆನಕೆ, ಬಿಜೆಪಿ ನಗರಾಧ್ಯಕ್ಷ ರಾಜೇಂದ್ರ ಹರಕುಣಿ, ಹನುಮಂತ ಕೊಂಗಾಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...