ರಾಜೇಶ್ವರಿ ಚರಂತಿಮಠ ಪ್ರಚಾರ

0
2

ಬಾಗಲಕೋಟ: ನವನಗರದ ವಾರ್ಡ ನಂ.೨೮ರ ನರಗಸಭೆ ಸದಸ್ಯರಾದ ಪ್ರಕಾಶ ಹಂಡಿ ಅವರ ಸೆಕ್ಟರ ನಂ.೦೮ ಹಾಗೂ ೨೧ರಲ್ಲಿ ಶಾಸಕರಾದ ವೀರಣ್ಣ ಚರಂತಿಮಠ ಅವರ ಧರ್ಮಪತ್ನಿ ರಾಜೇಶ್ವರಿ ವಿರಣ್ಣ ಚರಂತಿಮಠ ಅವರು ಕಳೆದ ಹತ್ತುಗಳಿಂದ ನವನಗರದ ವಿವಿಧ ಸೆಕ್ಟರಗಳಲ್ಲಿ ಮನೆ-ಮನೆಗೆ ತೆರಳಿ ನರೇಂದ್ರ ಮೋದಿಯವರ ಯೋಜನೆಗಳಾದ ಸುಕನ್ಯಾ ಸಮೃದ್ಧಿ, ಉಜ್ವಲ ಯೋಜನೆ ಅಡಿ ಉಚಿತ ಗ್ಯಾಸ ವಿತರಣೆ, ಮಹಿಳೆಯರಿಗಾಗಿ ಸ್ವಚ್ಚಭಾರತ ಯೋಜನೆ ಅಡಿ ಶೌಚಾಲಯ ನಿರ್ಮಾಣ, ಬಡವರಿಗಾಗಿ ಮನೆನಿರ್ಮಿಸಲು ಆವಾಸ ಯೋಜನೆ ಇನ್ನೂ ಹಲವಾರ ಯೋಜನೆಗಳನ್ನು ಜಾರಿಗೆ ತಂದಿರುವರು ಹಾಗೂ ಕೇಂದ್ರ ಸರಕಾರದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನಮಾನ ಕೊಟ್ಟ ನರೇಂದ್ರ ಮೋದಿಯವರು ಮತ್ತೊÃಮ್ಮೆ ಪ್ರಧಾನಿಯಾಗಿ ದೇಶ ಸೇವೆ ಮಾಡಲು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ಪಿ.ಸಿ. ಗದ್ದಿಗೌಡರ ಇವರ ಕ್ರಮ ಸಂಖ್ಯೆ-೦೧ರ ಕಮಲದ ಗುರ್ತಿಗೆ ತಮ್ಮ ಅಮುಲ್ಯವಾದ ಮತವನ್ನು ನೀಡಬೇಕೆಂದು ವಾರ್ಡಿನ ಮಹಿಳೆಯರೊಂದಿಗೆ ಮತಯಾಚಿಸಿದರು.
ಈ ಸಂದರ್ಭದಲ್ಲಿ ನಾರತ್ನಾ ಹೆಬ್ಬಳ್ಳಿ, ಸವಿತಾ ಲೆಂಕೆನ್ನವರ, ಅನಿತಾ ಸರೋದೆ, ಭಾಗ್ಯಶ್ರಿÃ ಹಂಡಿ, ಶಾಂತ ಝಿಂಗಾಡೆ, ಲಲಿತಾ ನರಸಾಪೂರ, ಮಂಜುಳಾ ಮಿಸ್ಕಿನ, ನಿಖಿತಾ ದೊಡಮನಿ, ಶೈಲಾ ಅಂಕಲಗಿ, ರಾಜು ಗೌಳಿ, ಸಂತೋಶ ಜೋಶಿ, ಶೈಲು ಅಂಗಡಿ, ಶಿವು ಜಾಲಗಾರ, ತಿಮ್ಮಣ್ಣ ವಡ್ಡರ, ರವಿ ದಾಮಜಿ ಹಾಗೂ ನವನಗರದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

loading...