ರಾಜ್ಯದಲ್ಲಿ ಪೋಲಿಯೋ ರೋಗ ಕಾಣಿಸುತ್ತಿಲ್ಲ

0
61

ರಾಜ್ಯದಲ್ಲಿ ಪೋಲಿಯೋ ರೋಗ ಕಾಣಿಸುತ್ತಿಲ್ಲ
ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ: ಸಚಿವ ಸತೀಶ
ಬೆಳಗಾವಿ 17: ಪಲ್ಸ್ ಪೋಲಿಯೋ ಕಾರ್ಯಕ್ರಮ ಸುಮಾರು 20 ವರ್ಷದಿಂದ ಸರಕಾರ ಹಾಕಿಕೊಂಡಿದೆ ಆ ಪ್ರಕಾರ ಜಿಲ್ಲೆಯಲ್ಲಿ ಯಾವುದೇ ಮಗು ಪೊಲೀಯೋ ರೋಗದಿಂದ ಬಳುತ್ತಿಲ್ಲ, ಜಗತ್ತಿನ ಬೇಗ್ಲಾದಲ್ಲಿ ಮಾತ್ರ ಕಾಣಿಸಿದೆ. ಆದರೆ ರಾಜ್ಯದಲ್ಲಿ ಈ ಪೋಲಿಯೋ ರೋಗ ಕಾಣಿಸುತ್ತಿಲ್ಲ ಈ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಸಂಪೂರ್ಣ ಯಶಸ್ಸುವಾಗಿದ್ದು ಎಂದು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು
ಅವರು ರವಿವಾರ ಜಿಲ್ಲೆಯ ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಹೊಸವಂಟಮೂರಿ ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯದ ಆವರಣದಲ್ಲಿ ನಡೆದ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಪ್ರಥಮ ಹಂತದ ಪಲ್ಸ್ ಪೋಲೀಯೊ ಲಸಿಕಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಳ್ಳಿಯ ಗಾಡಿನ ಜನರು ಮೊದಲು ಮಾರಿ ರೋಗ ಅಂತಾ ಕೆರಯುತ್ತಿದ್ದರು ಈ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ 2 ಸಾವಿರಕ್ಕಿಂತ ಹೆಚ್ಚು ಲಸಿಕಾ ಕೇಂದ್ರಗಳನ್ನು ತೆರದು 6ಲಕ್ಷಕ್ಕಿಂತ 5ವರ್ಷದ ಒಳಗಿನ ಮಕ್ಕಳಿಗೆ ಲಸಿಕೆ ನೀಡಲಾಗಿತ್ತಿದೆ ಅದರ ಜೊತಗೆ ನಾಳೆ ದಿನ ಪ್ರತಿಯೊಂದು 9ಲಕ್ಷ ಮನೆಗಳಿಗೆ ಭೆಟ್ಟಿ ಉಳಿದ ಮಕ್ಕಳಿಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ ಹಾಗೂ ಬೇರೆ ಕಡೆಯಿಂದ ಅಲೆಮಾರಿ ಕುಟುಂಬಗಳನ್ನು ಗುರುತಿಸಿ ಆ ಮಕ್ಕಳಿಗೆ ಲಸಿಕೆ ನೀಡುವ ಉದ್ದೇಶವಾಗಿದೆ ಆದ್ದರಿಂದ ತಮ್ಮ ಮಕ್ಕಳನ್ನು ಭವಿಷ್ಯ ಯುಗದಲ್ಲಿ ಸದೃಡವಾಗಿ ಬೆಳಸಿ ಉತ್ತಮ ಜೀವನ ಸಾಗಿಸಬೇಕು ಎಂದು ಹೇಳಿದರು.
ಹೊಸವಂಟಮೂರಿ ಗ್ರಾಮಕ್ಕೆ ಸುಮಾರು 15ವರ್ಷಗಳ ಹಿಂದೆ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು 1.10ಕೋಟಿರೂ.ಗಳಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಮಂಜೂರು ಮಾಡಿದ್ದರು ಅದು ಅಧಿಕಾರಿಗಳು ಹಾಗೂ ಇಂಜಿಯರಗಳ ಸರಿಯಾದ ಕಾರ್ಯ ನಿರ್ವಹಣೆ ಮಾಡದೆ ಕಾರಣ ನೆನಗುದ್ದಿಗೆ ಬಿದ್ದಿದೆ. ಈ ಭಾಗದ ಜನರಿಗೆ ಪಕ್ಕದಲ್ಲಿ ಘಟಪ್ರಭಾ ನದಿ ಹರಿದರು ಸಹ ನೀರು ಇಲ್ಲಾ ಆದ್ದರಿಂದ ದಿಶೆಯಲ್ಲಿ ಈ ಗ್ರಾಮಕ್ಕೆ ಕುಡಿಯುವ ನೀರಿಗೆ 70ಲಕ್ಷ ರೂ.ಗಳನ್ನು ನೀಡಲಾಗಿದೆ ಇದನ್ನು ಸರಿಯಾಗಿ ಹೆಚ್ಚಿನ ಆಸ್ತಕ್ತಿ ವಹಿಸಿ ಈ ಜನರಿಗೆ ನೀರನ್ನು ಕಲ್ಪ್ಪಿಸಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗೌತಮ ಬುನಾದಿ ಅವರಿಗೆ ಸಚಿವ ಸತೀಶ ಜಾರಕಿಹೊಳಿ ಸಲಹೆ ನೀಡಿದರು.
ಜಿಲ್ಲಾ ವೈದ್ಯಾಧಿಕಾರಿ ಡಾ.ಆರ್.ನರಗಟ್ಟಿ, ಡಾ.ವಿ.ಡಿ.ಪಾಟೀಲ, ಹೊಸವಂಟಮೂರಿ ಗ್ರಾಪಂ ಅಧ್ಯಕ್ಷ ಶಿವಪ್ಪಾ ವನ್ನೂರಿ, ಮಹಾದೇವಿ ಚೌಗಲಾ, ಡಾ.ಆಯ್.ಪಿ.ಗಡಾದ, ರಾಮಣ್ಣಾ ಗುಳ್ಳಿ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here