ರಾಜ್ಯ ಮಟ್ಟದ ತರಕಾರಿ ಬೆಳೆಗಳ ವಿಚಾರ ಸಂಕಿರಣ

0
2

ಕನ್ನಡಮ್ಮ ಸುದ್ದಿ-ಗದಗ: ಕೃಷಿಕರು ತರಕಾರಿ ಬೆಳೆಗಳನ್ನು ವೈಜ್ಞಾನಿಕ ತಂತ್ರಜ್ಞಾನಗಳನ್ನು ಅಳವಡಿಕೊಂಡು ಉತ್ತಮ ಇಳುವರಿಯನ್ನು ಪಡೆಯಬೇಕೆಂದು ಕೃಷಿ ವಿಜ್ಞಾನಿ ಡಾ. ರಾಮಚಂದ್ರ ನಾಯಕ ಹೇಳಿದರು.
ಗದಗ ತಾಲೂಕಿನ ಹುಲಕೋಟಿಯ ಕೆ.ವಿ.ಕೆ ಸಭಾಂಗಣದಲ್ಲಿ ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿಯ ಆತ್ಮಾ ಯೋಜನೆ, ಕೃಷಿ ಇಲಾಖೆ, ಗದಗ ಹಾಗೂ ಹುಬ್ಬಳ್ಳಿಯ ರಾಷ್ಟ್ರೀಯ ತೋಟಗಾರಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ಕೃಷಿ ಮೇಳ ಹಾಗೂ ಕೃಷಿ ತಂತ್ರಜ್ಞಾನ ಸಪ್ತಾಹ ಅಂಗವಾಗಿ ರಾಜ್ಯ ಮಟ್ಟದ ತರಕಾರಿ ಬೆಳೆಗಳ ವಿಚಾರ ಸಂಕಿರಣವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಗದಗ ಜಿಲ್ಲೆಯಲ್ಲಿ ತರಕಾರಿ ಬೆಳೆಗಳ ಸಾಗುವಳಿಗೆ ಸೂಕ್ತವಾದ ಮಣ್ಣು ಹಾಗೂ ಹವಾಮಾನ ಇದ್ದು, ವಿವಿದ ತರಕಾರಿ ಬೆಳೆಗಳನ್ನು ವೈಜ್ಞಾ£ಕ ತಂತ್ರಜ್ಞಾನಗಳನ್ನು ಅಳವಡಿಕೊಂಡು ಬೆಳೆಯಬೇಕೆಂದು ತಿಳಿಸಿದರು. ಗದಗ ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಗಳಾದ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಗಳಲ್ಲಿ ಕೊಯ್ಲೋತ್ತರ ನಂತರ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಗುಣಮಟ್ಟದ ಉತ್ಪಾದನೆಯನ್ನು ಪಡೆಯಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಗದಗ ಕೃಷಿ ಇಲಾಖೆಯ ಉಪ ಕೃಷಿ ನಿರ್ದೆಶಕ ತರಕಾರಿ ಬೆಳೆಗಳನ್ನು ರೈತರು ಒಂದು ಉಪ ಕಸಬನ್ನಾಗಿ ಅನುಸರಿಸಿದರೆ ಕುಟುಂಬಕ್ಕೆ ಒಂದು ಪೂರಕ ಆದಾಯ ನಿಶ್ಚಿತ ಎಂದು ಹೇಳಿದರು.ಡಾ. ಸುವರ್ಣ ಪಾಟೀಲ ಇವರು ತರಕಾರಿ ಬೆಳೆಗಳನ್ನು ಬಾಧಿಸುವ ವಿವಿಧ ಕೀಟ ಹಾಗೂ ರೋಗಗಳ ನಿರ್ವಹಣೆ ಬಗ್ಗೆ ಮಾತನಾಡಿದರು.
ಅಧ್ಯಡಾ. ಎಲ್.ಜಿ.ಹಿರೇಗೌಡರ ಮದನಮೋಹನ ಎಸ್.ಎಚ್.ಆದಾಪೂರ ರೈತರಿಗೆ ಮಾಹಿತಿ ನೀಡಿದರು. ಡಾ. ಸುಧಾ ಮಂಕಣಿ ನಿರೂಪಿಸಿದರು. ಎಸ್.ಕೆ.ಮುದ್ಲಾಪೂರ ವಂದಿಸಿದರು.

loading...