ರಾಣಿ ಚನ್ನಮ್ಮ‌ ವಿವಿಗೆ ಹಿರೇಬಾಗೇವಾಡಿಯಲ್ಲಿ 82 ಎಕರೆ ಜಮೀನು ನೀಡಲು ಸಚಿವ ಸಂಪುಟದಲ್ಲಿ ಅಸ್ತು

0
84

ಬೆಳಗಾವಿ

ನಗರದ ಹೊರ ವಲಯದ ಭೂತರಾಮನ ಹಟ್ಟಿಯ ಸಮೀಪ ಬಾಡಿಗೆ ಕಟ್ಟಡದಲ್ಲಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಹಿರೇಬಾಗೇವಾಡಿ ಗ್ರಾಮದಲ್ಲಿ 82.30 ಎಕರೆ ಜಮೀನು ನೀಡಲು ರಾಜ್ಯ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿದೆ.

ಹಿರೇಬಾಗೇವಾಡಿಯ ಗ್ರಾಮದ ಮತ್ತು ಅದಕ್ಕೆ ಹೊಂದಿಕೊಂಡಿರುವ ಹಲಗಿಮರಡಿ ಗ್ರಾಮ ವ್ಯಾಪ್ತಿಯಲ್ಲಿ ಒಟ್ಟು 126.07 ಎಕರೆ ಜಮೀನು ನೀಡುವಂತೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸರಕಾರಕ್ಕೆ‌ ಬೇಡಿಕೆ ಇಟ್ಟಿತ್ತು. ಅದರಲ್ಲಿ ಹಿರೇಬಾಗೇವಾಡಿ ಗ್ರಾಮದ ಸಂಕನಾಯಕನಕೇರಿ ವ್ಯಾಪ್ತಿಯ 82.30 ಎಕರೆ ಸರಕಾರಿ ಜಮೀನು ನೀಡಲು ಮಾತ್ರ ಸಚಿವ ಸಂಪುಟದಲ್ಲಿ ಮಂಜೂರಾತಿ ದೊರತಿದೆ. ಉಳಿದ ಜಮೀನಿನ ವಿಷಯದ ತೀರ್ಮಾನ ಇನ್ನೂ ಅಂತಿಮವಾಗಿಲ್ಲ.

ಹಿರೇಬಾಗೇವಾಡಿಯ 82.30 ಎಕರೆ ಜಮೀನು ನೀಡಲು ಕಂದಾಯ ಸಚಿವ ಆರ್.ಅಶೋಕ ಒಂದು ವಾರದ ಹಿಂದೆಯೇ ಕಡತಕ್ಕೆ ಸಹಿ ಹಾಕಿದ್ದರು. ಆಗ ಬಿಜೆಪಿ ನಾಯಕರು‌ ಸಂಭ್ರಮದಿಂದ ಸಂತೋಷ ವ್ಯಕ್ತಪಡಿಸಿದರು. ಆಗ ಅದು ಬೇರೆ ಸ್ವರೂಪ ಪಡೆದುಕೊಂಡಿತ್ತು. ಆ ಜಮೀನಿನಲ್ಲಿ ಬೃಹತ್ ನೀರಾವರಿ ಯೋಜನೆ ಕೈಗೊಳ್ಳಲು ಅನುದಾನ ಮಂಜೂರಾಗಿದೆ. ಆದ್ದರಿಂದ ಬಾಕಿ ಉಳಿದಿರುವ ಜಮೀನಿನ ವಿಷಯವೆ ಮಹತ್ವದ ತಿರುವು ಪಡೆದುಕೊಂಡಿದೆ.
ಒಟ್ಟಾರೆ ಬೆಳಗಾವಿಯ ಹೊರ ವಲಯದಲ್ಲಿ ಬಾಡಿಗೆ ಕಟ್ಟಡದಲ್ಲಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಈಗ ಹಿರೇಬಾಗೇವಾಡಿಗೆ ಶಿಫ್ಟ್ ಆಗಲಿದೆ. ಇದಕ್ಕೆ ಸರಕಾರವು ಸಚಿವ ಸಂಪುಟದಲ್ಲಿ ಅಸ್ತು ಎಂದಿರುವುದು ಈ ಭಾಗದ ವಿದ್ಯಾರ್ಥಿಗಳಿಗೆ ಸಂತಸ ತಂದಿದೆ.

loading...