ರಾಣೇಬೆನ್ನೂರು ನಗರಸಭೆಯಲ್ಲಿ ಮತ್ತೇ ಮರುಕಳಿಸಿದ ಅತಂತ್ರ ಪರಿಸ್ಥಿತಿ

0
29

ಕನ್ನಡಮ್ಮ ಸುದ್ದಿ-ರಾಣೆಬೆನ್ನೂರು: ಬಿಜೆಪಿ 15 ಸ್ಥಾನ, ಕಾಂಗ್ರೇಸ್ 09, ಕೆಪಿಜಿಪಿ 10 ಹಾಗೂ ಪಕ್ಷೇತರ 1 ಸ್ಥಾನಗಳಲ್ಲಿ ಗೆಲುವು ಸಾಧಿಸುವುದರ ಮೂಲಕ ಕಳೆದು ಬಾರಿಯಂತೆ ಈ ಬಾರಿಯು ನಗರಸಭೆ ಅತಂತ್ರ ಸ್ಥಿತಿ ತಲುಪುವಂತೆ ರಾಣೆಬೆನ್ನೂರು ಜನಾದೇಶ ನೀಡಿದ್ದಾರೆ.
ನಗರಸಭೆ ಆಡಳಿತ ನಡೆಸಲು ಬೇಕಾದ ಮ್ಯಾಜಿಕ್ ಸಂಖ್ಯೆ 18ನ್ನು ಬೇಕು, 15 ಸ್ಥಾನ ಗಳಿಸಿರುವ ಭಾರತೀಯ ಜನತಾ ಪಕ್ಷಕ್ಕೆ ಮೂರು ಸ್ಥಾನಗಳು ಕಡಿಮೆ ಬಿದ್ದಿವೆ. ಪಕ್ಷೇತರ ಅಭ್ಯರ್ಥಿ ಬೆಂಬಲ ಸೇರಿದರೆ ಅವರ ಬ¯ 16ಕ್ಕೆ ಏರಿಕೆಯಾಗಲಿದ್ದು ಬಹುಮತಕ್ಕೆ ಇನ್ನೇರಡು ಸ್ಥಾನಗಳನ್ನು ಪಡೆಯಲು ಆಪರೇಷನ್ ಕಮಲಕ್ಕೆ ಕೈ ಹಾಕಿದೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇನ್ನೊಂದೆಡೆ ಕೆಪಿಜೆಪಿ 10 ಸ್ಥಾನಗಳನ್ನು ಗಳಿಸಿದ್ದು ಕಾಂಗ್ರೆಸ್ ನೆರವಿನಿಂದ ಆಡಳಿತ ಚುಕ್ಕಾಣಿ ಹಿಡಿಯುವ ಸಾಧ್ಯತೆಗಳು ದಟ್ಟವಾಗಿವೆ. ಈ ನಿಟ್ಟಿನಲ್ಲಿ ಈಗಾಗಲೇ ಸಚಿವ ಆರ್.ಶಂಕರ್ ರಾಜ್ಯ ಮಟ್ಟದಲ್ಲಿ ತಮ್ಮ ಪ್ರಯತ್ನ ಆರಂಭಿಸಿದ್ದಾರೆ. ಒಟ್ಟಾರೆ ನಗರಸಭೆಯ ಆಡಳಿತ ಚುಕ್ಕಾಣಿಯು ಹಾವು ಏಣಿ ಆಟದಂತಾಗಿದ್ದು ಯಾರಿಗೆ ಅದೃಷ್ಟ ಒಲಿಯುವುದೋ ಕಾದು ನೋಡಬೇಕಾಗಿದೆ. 35 ಸದಸ್ಯ ಬಲದ ನಗರಸಭೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಜನಾದೇಶ ಲಭಿಸದೇ ಇರುವುದರಿಂದ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಬಾರಿಯೂ ಯಾವುದೇ ಪಕ್ಷಗಳಿಗೆ ಸ್ಪಷ್ಟ ಬಹುಮತ ದೊರೆಯದೇ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಾರಿಯೂ ಆಶ್ವರ್ಯವಾಗಿದೆ. ಭಾರಿ ಅಂತರದ ಗೆಲುವು: ನಗರಸಭೆಯ 32ನೇ ವಾರ್ಡ್‍ನಿಂದ ಕೆಪಿಜೆಪಿಯಿಂದ ಸ್ಪರ್ಧಿಸಿದ್ದ ಪ್ರಕಾಶ ಬುರಡಿಕಟ್ಟಿ 1404 ಮತಗಳ ಭಾರಿ ಅಂತರದಿಂದ ಗೆಲವು ಸಾಧಿಸಿ ನಗರಸಭೆ ಚುನಾವಣೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಮಾಜಿ ಅಧ್ಯಕ್ಷರುಗಳಿಗೆ ಸೋಲು:ಈ ಬಾರಿ ನಗರಸಭೆಗೆ ಪುನಃ ಸ್ಪರ್ಧೆ ಮಾಡಿದ್ದ ಐವರು ಮಾಜಿ ಅಧ್ಯಕ್ಷರುಗಳ ಪೈಕಿ ಶೇಖಪ್ಪ ಹೊಸಗೌಡ್ರ ಹೊರತು ಪಡಿಸಿ ರಾಮಪ್ಪ ಕೋಲಕಾರ, ಡಾ.ಗಣೇಶ ದೇವಗಿರಿಮಠ, ರತ್ನಾ ಪುನಿತ್ ಹಾಗೂ ಆಶಾ ಗುಂಡೇರ ಪರಾಜಯ ಅನುಭವಿಸಿದ್ದಾರೆ. ಬಿಜೆಪಿ ನಗರ ಘಟಕದ ಅಧ್ಯಕ್ಷರಿಗೆ ಸೋಲು: ನಗರಸಭೆಯ 30ನೇ ವಾರ್ಡ್‍ನಿಂದ ಸ್ಪರ್ಧಿಸಿದ್ದ ಬಿಜೆಪಿ ನಗರ ಘಟಕದ ಅಧ್ಯಕ್ಷ ಚೋಳಪ್ಪ ಕಸವಾಳ ಕೇವಲ 21 ಮತಗಳ ಅಂತರದಿಂದ ಕಾಂಗ್ರೆಸ್ ಪಕ್ಷದ ಶೇಖಪ್ಪ ಹೊಸಗೌಡ್ರ ಕೈಯಲ್ಲಿ ಪರಾಭವ ಹೊಂದಿದ್ದಾರೆ. ಇನ್ನು ನಗರ ಕಾಂಗ್ರೆಸ್ ಅಧ್ಯಕ್ಷ ಪುಟ್ಟಪ್ಪ ಮರಿಯಮ್ಮನವರ ವಾರ್ಡ್ ನಂ.31ರಲ್ಲಿ ಹಾಗೂ ಕೆಪಿಜೆಪಿ ನಗರ ಘಟಕದ ಅಧ್ಯಕ್ಷ ಕೆಎಂಪಿ ಮಣಿ ವಿಜಯಶಾಲಿಯಾಗಿದ್ದಾರೆ. ಇನ್ನು ಕಳೆದ ಬಾರಿ ಆರು ಜನ ಪಕ್ಷೇತರರು ಆಯ್ಕೆಯಾಗಿದ್ದಲ್ಲದೆ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆಯಾಗಿ ಆಡಳಿತವನ್ನು ನಡೆಸಿದ್ದರು.

loading...