ರಾಯಣ್ಣನ ಭಕ್ತ ಅಪ್ಪುಗೋಳಗಾಗಿ ಗ್ರಾಹಕರ ಹುಡುಕಾಟ

0
74

ಕನ್ನಡಮ್ಮ ಸುದ್ದಿ
ಬೆಳಗಾವಿ:30 ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಂಗೋಳಿ ರಾಯಣ್ಣ ನಿರ್ಮಾಪಕ, ಶ್ರೀ ಕ್ರಾಂತಿವೀರ ಸಂಗೋಳಿ ರಾಯಣ್ಣ ಸೊಸೈಟಿಯ ಆನಂದ ಅಪ್ಪುಗೋಳ ತಮ್ಮ ಸಂಸ್ಥೆಯಲ್ಲಿ ಗ್ರಾಹಕರ ಹಣವನ್ನು ಮರಳಿ ಕೊಡುವುದಾಗಿ ಹೇಳಿ ಕಣ್ಮರೆಯಾಗಿದ್ದಾರೆ. ಕೂಡಲೇ ಅವರು ನಮ್ಮ ಹಣ ಕೊಡದಿದ್ದರೇ ಅವರ ವಿರುದ್ಧ ಪೊಲೀಸ್ ದೂರು ನೀಡುವುದಾಗಿ ಗ್ರಾಹಕರು ಆಕ್ರೋಶವ್ಯಕ್ತಪಡೆಸುತ್ತಿದ್ದಾರೆ.
ನಾಡಿನ ಜನತೆಗೆ ಕ್ರಾಂತಿ ವೀರ ಸಂಗೋಳಿ ರಾಯಣ್ಣನನ್ನು ಪರಿಚಯಿಸಿದ್ದ ನಿರ್ಮಾಪಕ ಆನಂದ ಅಪ್ಪುಗೋಳ ಆರ್ಥಿಕ ದಿವಾಳಿಗೆ ಸಿಲುಕಿ ಪರಾರಿಯಾಗಿದ್ದಾರೆ. ತಮ್ಮ ಸಂಸ್ಥೆಯಲ್ಲಿ ಹಣ ಹೂಡಿಕೆ ಇಟ್ಟ ಗ್ರಾಹಕರಿಗೆ ಹಣ ನೀಡುವುದಾಗಿ ಭರವಸೆ ನೀಡಿ ಮಾಯವಾಗಿದ್ದಾರೆ. ಅಲ್ಲದೆ ಬೆಳಗಾವಿಯಲ್ಲಿರುವ ಎಲ್ಲ ಸಂಸ್ಥೆಯನ್ನು ಮುಚ್ಚಿ ಗ್ರಾಹಕರನ್ನು ಪರದಾಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ನಮಗೆ ವಿಶ್ವಾಸವಿದೆ. ಆನಂದ ಅಪ್ಪುಗೋಳ ಗ್ರಾಹಕರಿಗೆ ವಂಚನೆ ಮಾಡುವುದಿಲ್ಲವೆಂದು ಆದ್ದರಿಂದ ನಮ್ಮ ಹಣ ನಮಗೆ ಕೊಡಿ ಇಲ್ಲದಿದ್ದಲ್ಲಿ ನಾವು ಮುಂದಿನ ದಿನಮಾನಗಳಲ್ಲಿ ಉಗ್ರಹೋರಾಟ ಮಾಡುವುದಾಗಿ ಗ್ರಾಹಕರು ಆಕ್ರೋಶವ್ಯಕ್ತಪಡೆಸುತ್ತಿದ್ದಾರೆ.
ಆನಂದ ಅಪ್ಪುಗೋಳ ಅವರು ಯಾವುದೇ ಕಾರಣಕ್ಕೂ ಭಯ ಪಡುವ ಅಗತ್ಯವಿಲ್ಲ. ಗ್ರಾಹಕರು ನಿಮ್ಮನ್ನು ನಂಬಿದ್ದಾರೆ. ಅವರಿಗೆ ಮೋಸ ಮಾಡಬೇಡಿ. ಕೇಲವರು ಅಪ್ಪುಗೋಳ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಯಾರು ಅವರ ವಿರುದ್ಧ ಧ್ವನಿ ಎತ್ತುತಾರೋ ಅವರಿಗೆ ಹಣ ನೀಡುವುದಿಲ್ಲ ಎಂಬ ಬೇದರಿಕೆ ಹಾಕುತ್ತಿದ್ದಾರೆ. ದಯಮಾಡಿ ನಮ್ಮ ಹಣ ನೀಡಿ ಎಂದು ಗ್ರಾಹಕರು ಮಾಧ್ಯಮದವರ ಮುಂದೆ ಪರಿಪರಿಯಾಗಿ ಬೇಡಿಕೊಂಡರು.
ಸೋಮವಾರದ ಒಳಗೆ ಗ್ರಾಹಕರ ಮುಂದೆ ಬಂದು ಅಪ್ಪುಗೋಳ ಅವರು ಹಣ ಹಿಂದಿರುಗಿಸಬೇಕು. ಇಲ್ಲದಿದ್ದಲ್ಲಿ ಕಾನೂನಾತ್ಮಕವಾಗಿ ಹೋರಾಟ ಮಾಡುವುದಾಗಿ ಗ್ರಾಹಕರು ಎಚ್ಚರಿಕೆ ನೀಡಿದ್ದಾರೆ.

loading...