ರಾಯಣ್ಣ ಪ್ರತಿಮೆ ಸ್ಥಾಪನೆಗೆ ವಿರೋದಿಸುವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹ

0
13

ರಾಯಣ್ಣ ಪ್ರತಿಮೆ ಸ್ಥಾಪನೆಗೆ ವಿರೋದಿಸುವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹ

ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದ ಪೀರನವಾಡಿ ಪ್ರದೇಶದಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸಲು ಎಂಇಎಸ್ ನ ಕೆಲವರು ವಿನಾಕಾರಣ ಅಡ್ಡಿ ಪಡಿಸುತ್ತಿದ್ದಾರೆ.ಹಂತರವರ ಮೇಲೆ ಕ್ರ‌ಮ ಕೈಗೊಳಬೇಕು ಎಂದು ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು ‌.

ಶನಿವಾರ ನಗರದ ಚನ್ನಮ್ಮಾ ವೃತ್ತದಿಂದ ಜಿಲ್ಲಾದಿಕಾರಿ ಕಚೇರಿವರೆಗೂ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು. ರಾಯಣ್ಣ ಪ್ರತಿಮೆ ಮಗೆ ವಿರೋಧಿಸಿ ಕನ್ನಡಿಗರ ಸ್ವಾಭಿಮಾನಕ್ಕೆ ದಕ್ಕೆ ತರುತ್ತಿದ್ದಾರೆ ,ಬೆಳಗಾವಿ ನೆಲದಲ್ಲಿ ಮೊದಲ ಪೂಜೆ ಚನ್ನಮ್ಮಾ ಮತ್ತು ರಾಯಣ್ಣ ಸಲ್ಲಬೇಕು,ಇಲ್ಲಿನ ಕೇಲ ರಾಜಕಾರಣಿಗಳು ಮರಾಠಿ ಮತಗಳಿಗಾಗಿ ಕನ್ನಡಿಗರ ಸ್ವಾಭಿಮಾನವನ್ನು ಎಂಇಎಸ್ ಮೂಲದ ಪುಡಾರಿಗಳಿಗೆ ಅಡ ವಿಡುವ ಕೆಲಸ ಮಾಡುತ್ತಿದ್ದಾರೆ .ರಾಯಣ್ಣ ಪ್ರತಿಮೆ ಸ್ಥಾಪನೆಗೆ ಅನುಮತಿ ನೀಡಬೇಕು ,ಮತ್ತು ವಿರೋದಿಸುವರ ಮೇಲೆ ಕ್ರಮ ಕೈಗೋಳಬೇಕು ಎಂದು ಮನವಿಯಲ್ಲಿ ತಿಳಿಸಿದರು .
ಈ ಸಂದರ್ಭದಲ್ಲಿ ಬಾಬು ಸಂಗೋಡಿ ಸೇರಿದಂತೆ ಇತರರು ಇದ್ದರು .

loading...