ರಾಷ್ಟ್ರೀಯತೆಯಿಂದ ವೈಶಿಷ್ಟ್ಯತೆಗೆ ಏರುವುದೇ ಸನಾತನ ಧರ್ಮದ ತತ್ವ: ಶರಾವತಿ

0
23

ಕನ್ನಡಮ್ಮ ಸುದ್ದಿ-ಶಿರಸಿ: ಸ್ಥಾನೀಯತೆಯಿಂದ ರಾಷ್ಟ್ರೀಯತೆಗೆ, ರಾಷ್ಟ್ರೀಯತೆಯಿಂದ ವೈಶಿಷ್ಟ್ಯತೆಗೆ ಏರುವುದೇ ಸನಾತನ ಧರ್ಮದ ತತ್ವವಾಗಿದೆ ಎಂದು ಉಮ್ಮಚಗಿಯ ಶ್ರೀಮಾತಾ ಸಂಸ್ಕøತ ಕಾಲೇಜಿನ ಹಿರಿಯ ಪ್ರಾಧ್ಯಾಪಕಿ ಶರಾವತಿ ಭಟ್ಟ ಹೇಳಿದರು.
42ನೇ ವರ್ಷದ ಲಯನೆಸ್ ಸ್ಥಾಪನಾ ದಿನದ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಮಹಿಳೆ ಮತ್ತು ರಾಷ್ಟ್ರೀಯತೆ ಕುರಿತು ಮಾತನಾಡಿದರು. ಇಂದು ಸನಾತನ ಧರ್ಮದತ್ತ ಸೆಳೆತ ಹೆಚ್ಚಿದೆ. ಸನಾತನ ಧರ್ಮದ ತತ್ವಗಳು ವಿಶಾಲತೆಯಿಂದ ಕೂಡಿದ್ದು ಸ್ಥಾನೀಯತೆಯಿಂದ ರಾಷ್ಟ್ರೀಯತೆಗೆ, ರಾಷ್ಟ್ರೀಯತೆಯಿಂದ ವೈಶಿಷ್ಟ್ಯತೆಯೆಡೆ ಸಾಗುವದಾಗಿದೆ ಎಂದರು.

ಲಯನೆಸ್ ಪ್ರಮುಖರಾದ ಡಾ. ಕೀರ್ತಿ ನಾಯ್ಕ ಮಾತನಾಡಿ, ಮಹಿಳೆ ಎಷ್ಟೇ ಮುಂದುವರಿದರು ಪುರುಷ ಮತ್ತು ಮಹಿಳೆ ಒಬ್ಬರಿಗೊಬ್ಬರು ವಿಶ್ವಾಸದಿಂದ ಬಾಳ್ವೆ ನಡೆಸಿದರೆ ಬದುಕಿಗೊಂದು ಅರ್ಥ ಬರುತ್ತದೆ ಎಂದರು. ಉತ್ತಮವಾಗಿ ಸಾಧನೆ ಮಾಡುತ್ತಿರುವ ಗುರುವಳ್ಳಿಯ ಶ್ರೀಮಾತಾ ಸ್ವಸಹಾಯ ಸಂಘಕ್ಕೆ ರೋಡ್ರಿಗಸ್ ಮೆಗ್ಡಾಲಿಂಗ್ ಪರ್ಯಾಯ ಫಲಕ ನೀಡಲಾಯಿತು. ಗೋಳಿಕೊಪ್ಪದ ಸ್ವರ್ಣ ಸ್ವಸಹಾಯ ಸಂಘಕ್ಕೆ ನೆನಪಿನ ಪರ್ಯಾಯ ಫಲಕ ವಿತರಿಸಲಾಯಿತು. 2017-18ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಲಯನ್ಸ್ ಶಾಲೆಗೆ ಪ್ರಥಮ ಸ್ಥಾನಗಳಿಸಿದ ಲಯನ್ಸ್ ಶಾಲೆಯ ವಿದ್ಯಾರ್ಥಿ ಚಿನ್ಮಯ ದತ್ತಗುರು ಹೆಗಡೆ ಇವರನ್ನು ಈ ವೇಳೆ ಸನ್ಮಾನಿಸಲಾಯಿತು. ಲಯನೆಸ್ ಸದಸ್ಯರ ದೇಶಭಕ್ತಿಗೀತೆಯೊಂದಿಗೆ ಪ್ರಾರಂಭವಾದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ರಾಜಲಕ್ಷ್ಮೀ ಹೆಗಡೆ, ಜ್ಯೋತಿ ಹೆಗಡೆಯಿಂದ ಪ್ರಹಸನ, ಪ್ರಭಾಕರ ಹೆಗಡೆ, ಬಿಂದು ಹೆಗಡೆಯವರಿಂದ ಟ್ರ್ಯಾಕ್ ಮ್ಯೂಸಿಕ್‍ನಲ್ಲಿ ಚಿತ್ರಗೀತೆ ಪ್ರದರ್ಶನಗೊಂಡಿತು. ಶ್ರೀಮಾತಾ ಸ್ವಸಹಾಯ ಸಂಘದ ಸದಸ್ಯರು ಜಾನಪದ ನೃತ್ಯ ಹಾಗೂ ಗೀಗಿ ಪದವನ್ನು ಪ್ರದರ್ಶಿಸಿದರು. ಅನ್ಸಿಕಾ ಅನನ್ಯಾ ಹೆಗಡೆ ಸಹೋದರಿಯರಿಂದ ನೃತ್ಯ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿತು. ಸ್ನೇಹಶ್ರೀ ಹೆಗಡೆ ಭಾವಪೂರ್ಣ ಕಥಕ್ ಶೈಲಿ ನೃತ್ಯ ಜನರನ್ನು ಭಾವಪೂರ್ಣರನ್ನಾಗಿಸಿತು. ಲಯನೆಸ್ ಸದಸ್ಯರಾದ ಜ್ಯೊತಿ ಹೆಗಡೆ, ಬಿಂದು ಹೆಗಡೆ, ಮಂಗಲಾ ಹೆಗಡೆ, ಪ್ರೇಮಲತಾ ಚೌದರಿ, ಶೀತಲ ಸ್ವಾದಿ, ಸುಮಂಗಲಾ ಹೆಗಡೆ ನೃತ್ಯ ಕಾರ್ಯಕ್ರಮ ನೀಡಿದರು.
ಸಭೆಯಲ್ಲಿ ಪ್ರಭಾಕರ ಹೆಗಡೆ, ಚಂದ್ರಶೇಖರ ಹೆಗಡೆ, ಬಾಬುಲಾಲ್ ಚೌಧರಿ, ಲಯನೆಸ್ ಖಜಾಂಚಿ ವರ್ಷಾ ಪಟವರ್ಧನ್, ಲಯನ್ಸ್ ರಮಾ ಪಟವರ್ಧನ್, ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರತಿಭಾ ಹೆಗಡೆ, ಲಯಸನ್ ಆಫೀಸರ್ ವಿನಯ್ ಹೆಗಡೆ, ಲಯನ್ಸ್ ಎಜ್ಯುಕೇಷನ್ ಸೊಸೈಟಿಯ ಅಧ್ಯಕ್ಷ ಟಿ.ಎ. ಪಟವರ್ಧನ್ ಹಾಗೂ ಕಾರ್ಯದರ್ಶಿ ಎಮ್.ಎಮ್. ಭಟ್ಟ,ಉಪಸ್ಥಿತರಿದ್ದರು. ಜ್ಯೋತಿ ಭಟ್ಟ ಹಾಗೂ ಶೀತಲ್ ಸ್ವಾದಿ ಪರಿಚಯಿಸಿದರು. ಮಂಗಲಾ ಹೆಗಡೆ, ಅಂಜನಾ ಹೆಗಡೆ, ಸುನಂದಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಲಯನೆಸ್ ಕಾರ್ಯದರ್ಶಿ ಸುಮಂಗಲಾ ಹೆಗಡೆ ವಂದಿಸಿದರು.

loading...