ರಾಷ್ಟ್ರೀಯ ಹೆದ್ದಾರಿ ತಡೆದು ರೈತರಿಂದ ಪ್ರತಿಭಟನೆ

0
28

ಚನ್ನಮ್ಮ ಕಿತ್ತೂರು 22 ಃ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಇಲ್ಲಿಯ ರಾಷ್ಟ್ರೀಯ ಹೆದ್ದಾರಿಯನ್ನು ಒಂದು ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ 3 ವರ್ಷಕ್ಕೆ ಕಾಲಿಟ್ಟಿರುವ ಸಿದ್ದರಾಮಯ್ಯನವರ ಸರ್ಕಾರ ನಾವು ಭ್ರಷ್ಟಾಚಾರ ವಿರೋಧಿಗಳು, ಜಾತ್ಯಾತೀತರು, ದೀನ ದಲಿತರು, ಬೆಂಬಲಿಗರು ಎಂದು ಹೇಳುತ್ತಾ ಅಧಿಕಾರಕ್ಕೆ ಬಂದು ಯಾವುದೇ ಪ್ರಯೋಜನೆಯಾಗಿಲ್ಲ. ಕೇಂದ್ರ ಸರಕಾರವು ಸಹ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡದೇ ಇರುವದು ಸರಿಯಲ್ಲ. ರೈತರ ಈಗಿನ ಎಲ್ಲ ಕೃಷಿ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕು. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಬೇಕು. ಎಲ್ಲ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು. ಕಳಸಾ ಮತ್ತು ಮಹಾದಾಯಿ ನೀರಾವರಿ ಯೋಜನೆಗಳನ್ನು ಈ ಕೂಡಲೇ ಜಾರಿಗೊಳ್ಳಿಸಲು ಸರಕಾರಗಳು ಮುಂದಾಗಬೇಕು. ಬಾಕಿ ಉಳಿದಿರುವ ಕಬ್ಬಿನ ಸುಮಾರು 1500 ಕೋಟಿ ಹಣವನ್ನು ಈ ಕೂಡಲೇ ರೈತರಿಗೆ ಕೊಡಿಸಬೇಕು. ಕಬ್ಬಿಗೆ ಬೆಂಬಲ ಬೆಲೆ ಘೋಷಿಸಬೇಕು. ಬಗರ್ ಹುಕುಂ ಸಾಗುವಳಿ ಮಾಡಿ ಜೀವನ ಸಾಗಿಸುತ್ತಿರುವ ರೈತರ ಕುಟುಂಬಗಳ ಭೂಮಿಯನ್ನು ಸಕ್ರಮಗೊಳ್ಳಿಸಬೇಕು. ರಾಜ್ಯದಲ್ಲಿನ ನಕಲಿ ಬೀಜ ರಸಗೊಬ್ಬರ ನಕಲಿ ಹೆಚ್ಚಾಗುತ್ತಿದ್ದು ಇವುಗಳನ್ನು ತಡೆಗಟ್ಟಬೇಕು. ವಿದ್ಯುತ್‍ಗಾಗಿ ರಾಜ್ಯದ ರೈತರು ಪರದಾಡುತ್ತಿದ್ದು ಈ ಕೂಡಲೇ ಸಮರ್ಪಕ ವಿದ್ಯುತ್ ಪೂರೈಸಲು ಸರಕಾರ ಕ್ರಮ ಜರುಗಿಸಬೇಕು. ರಾಜ್ಯದಲ್ಲಿ ರೈತರ ಆತ್ಮ ಹತ್ಯೆಗಳು ಹೆಚ್ಚಾಗುತ್ತಿದ್ದು ಇವುಗಳನ್ನು ತಡೆಗಟ್ಟಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ರಾಜಕಾರಣಿಗಳಿಗೆ ಹಿಡಿ ಶಾಪ ಹಾಕಿದ ರೈತರು ಕಳಸಾ ಮತ್ತು ಮಹದಾಯಿ ಯೋಜನೆಗಾಗಿ ಪ್ರತಿಭಟನೆ ನಡೆಯುತ್ತಿದ್ದರು ಕಬ್ಬು ಸೇರಿದಂತೆ ಸಾಕಷ್ಟು ಜ್ವಲಂತ ಸಮಸ್ಯೆಗಳು ಇದ್ದರು ಶಾಸಕರು ಸಂಸದರು ಸ್ಪಂದಿಸದೆ ಇರುವದು ಸರಿಯಲ್ಲ ಎಂದು ಆರೋಪಿಸಿದರು.
ರಾಣಿ ಚನ್ನಮ್ಮ ವರ್ತುಳದಲ್ಲಿ ಪ್ರತಿಭಟನೆ ಸೇರಿದ ರೈತರು ನಂತರ ಹೆದ್ದಾರಿ ತಡೆದು ಒಂದು ಗಂಟೆಗೆ ಹೆಚ್ಚೂ ಕಾಲ ಪ್ರತಿಭಟನೆ ನಡೆಸಿದರು ಪರಿಣಾಮ ಹೆದ್ದಾರಿ ಸಂಚಾರ ಸಂಪೂರ್ಣ ಬಂದ ಆದ ಕಾರಣ ವಾಹನಗಳು ಸಾಲು ಸಾಲಾಗಿ ನಿಂತಿದ್ದವು ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ಎದುರಾಯಿತು. ಪ್ರತಿಭಟನಾ ಸ್ಥಳಕ್ಕೆ ವಿಶೇಷ ತಹಶೀಲ್ದಾರ ಯ.ರು.ಪಾಟೀಲ ಬೇಟಿ ನೀಡಿ ಮನವಿ ಪತ್ರ ಸ್ವೀಕರಿಸಿದರು.
ರಾಜು ಯಮಕನಮರಡಿ, ಭೀಮಶಪ್ಪ ದುರಗಣ್ಣವರ, ಬಾಳಪ್ಪ ಚಳಕೋಪ್ಪ, ಕಲ್ಲಪ್ಪ ಕುಗಟಿ, ನಿಂಗಪ್ಪ ತಡಕೊಡ, ಸಯ್ಯದ ಮನ್ಸೂರ, ವಿರುಪಾಕ್ಷ ಯರಜರವಿ, ಶಿದ್ಲಿಂಗಪ್ಪ ಬಶೆಟ್ಟಿ. ಅಶೋಕ ಅಳ್ನಾವರ, ರುದ್ರಪ್ಪ ಬಟ್ಟೀನ, ಬಸವರಾಜ ಕುರಬರ, ಸೇರಿದಂತೆ ಕಿತ್ತೂರು ಸುತ್ತಮುತ್ತಲಿನ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸಿಪಿಐ ಸಂಗನಗೌಡ, ಪಿಎಸ್.ಐ ನಿಂಗನಗೌಡ ಪಾಟೀಲ ಬಂದೊಬಸ್ತ ಒದಗಿಸಿದರು.

loading...

LEAVE A REPLY

Please enter your comment!
Please enter your name here