ರಾಸಾಯನಿಕ ಘಟಕದಿಂದ ವಿಷಾನಿಲ ಸೋರಿಕೆ: 8 ಸಾವು

0
4

ವಿಶಾಖಪಟ್ಟಣ:- ಆಂಧ್ರಪ್ರದೇಶದ ವಿಶಾಖಪಟ್ಟಣಂನ ಬಹುರಾಷ್ಟ್ರೀಯ ಕೈಗಾರಿಕಾ ರಾಸಾಯನಿಕ ಘಟಕದಿಂದ ಗುರುವಾರ ವಿಷಾನಿಲ ಸೋರಿಕೆಯಾಗಿ 8 ಸಾವನ್ನಪ್ಪಿದ್ದು, ಇತರೆ 200 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ .
ಸುಮಾರು 1 ಸಾವಿರಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದು ಸ್ಥಳಕ್ಕೆ ಪೊಲೀಸರು, ಆಂಬ್ಯುಲೆನ್ಸ್ಗಳು, ಅಗ್ನಿಶಾಮಕ ಸಿಬ್ಬಂದಿಗಳು ಧಾವಿಸಿದ್ದಾರೆ ಎಂದೂ ವರದಿಯಾಗಿದೆ.

ವಿಶಾಖಪಟ್ಟಣಂನ ಆರ್ ಆರ್ ವೆಂಕಟಪುರಂನಲ್ಲಿರುವ ಎಲ್ ಜಿ ಪಾಲಿಮರ್ಸ್ ಕೈಗಾರಿಕಾ ಘಟಕದಲ್ಲಿ ವಿಷಾನಿಲ ಸೋರಿಕೆಯಾಗಿ, ನಂತರ ಗಾಳಿಯಲ್ಲಿ ಇದು ಸುತ್ತಮುತ್ತಲ ಪ್ರದೇಶಗಳಿಗೆ ಹರಡಿದೆ. ಪರಿಣಾಮವಾಗಿ ಹಲವರಿಗೆ ಉಸಿರಾಟದ ಸಮಸ್ಯೆ ಎದುರಾಗಿದೆ. ಮಾತ್ರವಲ್ಲದೆ ಕಣ್ಣು ಸುಡುವ ಅನುಭವವೂ ಆಗಿದೆ. ಹಲವು ಮಂದಿ ಕೂಡಲೇ ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ

ಈ ಸ್ಥಳಗಳಲ್ಲಿ ವಾಸವಿರುವವರು ಮನೆಗಳಿಂದ ಹೊರಬರದಂತೆ ಮಹಾನಗರ ಪಾಲಿಕೆ ಟ್ವೀಟ್ ಮೂಲಕ ಮನವಿ ಮಾಡಿದೆ.

loading...