ರೂಪಾಯಿ ದಾಖಲೆ ಕುಸಿತಕಂಡು ತಲೆ ಬಿಸಿ, ಸೆನ್ಸೆಕ್ಸ್ನಲ್ಲಿ ತಲ್ಲಣ

0
18

ಮುಂಬೈ: ಕಳೆದ ಕೆಲ ದಿನಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ತನ್ನ ಮೌಲ್ಯ ಕಳೆದುಕೊಳ್ಳುತ್ತಲೇ ಸಾಗಿದೆ. ನಾಲ್ಕೈದು ದಿನಗಳಿಂದ ತುಸು ಏರಿಕೆ ಕಂಡು ನಿಟ್ಟುಸಿರು ಬಿಡುವಂತೆ ಮಾಡಿದ್ದ ರೂಪಾಯಿ ಮೌಲ್ಯ ಇಂದು ಪಾತಾಳಕ್ಕೆ ಕುಸಿತ ಕಂಡಿದೆ.

ಇಂದು ಬರೋಬ್ಬರಿ 45 ಪೈಸೆಯಷ್ಟು ಇಳಿಕೆ ಕಂಡು ಪ್ರತಿ ಡಾಲರ್ಗೆ 72.32ಪೈಸೆ ಆಗಿದೆ. ರೂಪಾಯಿ ಡಾಲರ್ ಎದುರು ತತ್ತರಿಸುತ್ತಿದ್ದರೆ, ಇತ್ತ ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕ ಪಾತಾಳಕ್ಕೆ ತಲುಪಿದೆ. ಕಳೆದೊಂದು ತಿಂಗಳಿಂದ ನಿರಂತರ ಏರಿಕೆಯತ್ತ ಸಾಗುತ್ತಿದ್ದ ಮಾರುಕಟ್ಟೆ ಇಂದು ಪತನದ ಹಾದಿ ಹಿಡಿದಿದೆ.
ಡಾಲರ್ ಮುಂದೆ ರೂಪಾಯಿ ದಾಖಲೆ ಕುಸಿತ… ಮುಂಬೈ ಷೇರು ಮಾರುಕಟ್ಟೆಯಲ್ಲಿ ತಲ್ಲಣ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ದಿನದಿಂದ ದಿನಕ್ಕೆ ಸಣಕಲು ಆಗುತ್ತಿರುವುದು ಹೂಡಿಕೆದಾರರ ಮೇಲೆ ಭಾರಿ ಎಫೆಕ್ಟ್ ಬೀರಿದೆ. ಹೀಗಾಗಿ ಬರೋಬ್ಬರಿ 400 ಅಂಕ ಕಳೆದುಕೊಂಡಿರುವ ಸಂವೇದಿ ಸೂಚ್ಯಂಕ ಒಂದು ಗಂಟೆ ವೇಳೆಗೆ 37.988ರಲ್ಲಿ ವಹಿವಾಟು ನಡೆಸುತ್ತಿತ್ತು. ಇನ್ನು ನಿಫ್ಟಿ ಕೂಡ 130.55 ಅಂಕಗಳಷ್ಟು ಇಳಿಕೆ ಕಂಡು 11.458ರಲ್ಲಿ ಇದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಿಂದಾಗಿ ಡಾಲರ್ಗೆ ಅತಿಯಾದ ಬೇಡಿಕೆ ಉಂಟಾಗಿದ್ದು, ನಿತ್ಯ ರೂಪಾಯಿ ಮೌಲ್ಯ ತನ್ನ ಬೇಡಿಕೆ ಕಳೆದುಕೊಳ್ಳುತ್ತಿದೆ.

loading...