‘ರೈತರ ಜೀವನ ಪದ್ಧತಿ ನಿರ್ಲಕ್ಷತೆ’ ಡಾ. ಚಂದ್ರಶೇಖರ

0
186

ಗೋಕಾಕ 11: ‘ಬ್ರಿಟಿಷರ ಅಧಿಕಾರ ಮತ್ತು ವಸಾಹತುಶಾಹಿ ವ್ಯವಸ್ಥೆಯಿಂದ ರೈತರ ಜೀವನ ಪದ್ಧತಿಯನ್ನು ನಿರ್ಲಕ್ಷತೆ ಮಾಡಲಾಗಿದೆ’ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ವಿಷಾದಿಸಿದರು.
ಅವರು, ತಾಲ್ಲೂಕಿನ ಸುಕ್ಷೇತ್ರ ಸಾವಳಗಿಯ ಜಗದ್ಗುರು ಶ್ರೀ ಶಿವಲಿಂಗೇಶ್ವರ ಸಿದ್ಧ ಸಂಸ್ಥಾನ ಪೀಠದಲ್ಲಿ ದಸರಾ ಮಹೋತ್ಸವದಲ್ಲಿ ಮಾತನಾಡಿದ ಅವರು ಅಧಿಕಾರ, ಕಚೇರಿ, ಅಳತೆ ಇಂಥವುಗಳನ್ನೆಲ್ಲ ಬ್ರಿಟಿಷರು ಬಿತ್ತಿಹೋಗಿ ದೇಶಿ ಮೌಲ್ಯಗಳನ್ನು ಕುಗ್ಗಿಸಿದ್ದಾರೆ ಎಂದರು.
ದೇಶಕ್ಕೆ ಅನ್ನ ನೀಡುವ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಅದನ್ನು ತಡೆಯುವಲ್ಲಿ ಸರ್ಕಾರದಿಂದ ಇನ್ನುವರೆಗೆ ಸ್ಪಷ್ಟವಾದ ಪರಿಹಾರ ಸೂತ್ರ ಇಲ್ಲದಿರುವುದು ವಿಷಾದಿಸುವ ಸಂಗತಿಯಾಗಿದೆ. ಅಧಿಕಾರಶಾಹಿ, ವಸಾಹತುಶಾಹಿ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ರೈತರ ಕಷ್ಟಕ್ಕೆ ಬೆಲೆಯಿಲ್ಲದಾಗಿದೆ. ಸ್ಮಾರ್ಟ್‍ಸಿಟಿ ನಿರ್ಮಾಣಕ್ಕೆ ರೈತರ ಭೂಮಿಯನ್ನು ಸರ್ಕಾರವು ಕಸಿದುಕೊಳ್ಳುತ್ತಿದೆ. ಇಂದು ರೈತರಪರವಾದ ಅರ್ಥಶಾಸ್ತ್ರ ಅನುಷ್ಠಾನಗೊಳ್ಳಬೇಕಾಗಿದೆ. ರೈತರ ಭೂಮಿ ಉಳಿಯಬೇಕು, ಅವರ ಬದುಕು, ಸಂಸ್ಕøತಿ ಉಳಿಯಬೇಕಾಗಿದೆ ಎಂದರು.
ಹಳ್ಳಿಗಳು ಸಹ ಇಂದು ಇಂಗ್ಲಿಷಮಯವಾಗುತ್ತಿದ್ದು, ಹಕ್ಕಿ, ಪ್ರಾಣಿ, ಗಿಡಮರಗಳಿಗಿರುವ ಕನ್ನಡದ ಹೆಸರುಗಳೆಲ್ಲ ಮರೆಯಾಗುತ್ತಲಿವೆ. ನಿತ್ಯ ಬದುಕಿನ ಎಲ್ಲ ಸಂಗತಿಗಳು ಇಂಗ್ಲಿಷಮಯವಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಇಂದಿನ ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸದಿದ್ದರೆ ಭವಿಷತ್ತಿನಲ್ಲಿ ಕನ್ನಡ ನಾಡು ಅಪಾಯಗಳನ್ನು ಎದುರಿಸಬೇಕಾಗುತ್ತದೆ ಎಂದರು.
ಸಾವಳಗಿಯ ಶ್ರೀಮಠವು ಭಕ್ತರಪರವಾದ ವಿಚಾರಗಳಿದ್ದು, ದಸರಾ ಉತ್ಸವದ ಮೂಲಕ ವೈವಿದ್ಯಮಯವಾದ ವಿಷಯ ಜ್ಞಾನವನ್ನು ನೀಡುವಂತ ಶ್ಲಾಘನೀಯ ಕಾರ್ಯವನ್ನು ಸನ್ನಿಧಿಯವರು ಮಾಡುತ್ತಿದ್ದಾರೆ ಎಂದರು.
ಕಲ್ಲೋಳಿಯ ಬಾಳಪ್ಪ ಬಿ. ಬೆಳಕೂಡ ಅವರು ‘ರೈತ ಹಾಗೂ ಇಂದಿನ ಪ್ರಸ್ತುತೆ’ ಕುರಿತು ಹಾಗೂ ಗೋಕಾಕದ ಡಾ. ಶ್ರೀಶೈಲ್ ಹೊಸಮನಿ ‘ಆರೋಗ್ಯ ಮತ್ತು ಬದುಕು’ ಕುರಿತು ಉಪನ್ಯಾಸ ನೀಡಿದರು.
ಸಾನ್ನಿಧ್ಯವಹಿಸಿದ್ದ ಜಗದ್ಗರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಆಶೀರ್ವಚನ ನೀಡಿ ಧರ್ಮ, ಸಚ್ಛಾರಿತ್ರ್ಯದಲ್ಲಿ ನಡೆದುಕೊಂಡು ಸಮಾಜ ಮತ್ತು ದೇಶಕ್ಕೆ ಒಳಿತು ಮಾಡಿ ಎಂದರು.
ನಿಚ್ಛಣಕಿಯ ಪಂಚಾಕ್ಷರಿ ಸ್ವಾಮಿಗಳು, ಡಾ. ಪಾರ್ವತಿ ಹೊಸಮನಿ ವೇದಿಕೆಯಲ್ಲಿದ್ದರು. ಸಂಚಾಲಕ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು, ಗೌರಿಕುಮಾರ ಮಗದುಮ್ ಸ್ವಾಗತಿಸಿದರು, ಸುಜಾತಾ ಬೆನಕಟ್ಟಿ ನಿರೂಪಿಸಿದರು.
ಭರತನಾಟ್ಯ: ರಂಜಿತಾ ಶಿಂಧೆ ಪ್ರದರ್ಶಿಸಿದ ಭರತನಾಟ್ಯವು ಎಲ್ಲರ ಮೆಚ್ಚುಗೆ ಪಡೆಯಿತು
****
‘ಹಬ್ಬ, ಹರಿದಿನಗಳನ್ನು ನಿರ್ಮಿಸಿದವರು ರೈತರು. ಆದರೆ ಇಂದಿನ ಯಾಂತ್ರಿಕ ಬದುಕಿನಲ್ಲಿ ರೈತರು ತಮ್ಮತನ, ಪರಂಪರೆಯನ್ನು ಕಳೆದುಕೊಳ್ಳುತ್ತಿರುವುದು ಖೇದಕರ ಸಂಗತಿಯಾಗಿದೆ. ನಾವೀಗ ರೈತ ಭಾರತವನ್ನು ಉಳಿಸಿಕೊಳ್ಳಬೇಕಾಗಿದೆ’
ಡಾ. ಚಂದ್ರಶೇಖರ ಕಂಬಾರ – ಜ್ಞಾನಪೀಠ ಪ್ರಶಸ್ತಿತಿ ಪುರಸ್ಕøತ ಸಾಹಿತಿ

loading...

LEAVE A REPLY

Please enter your comment!
Please enter your name here