ರೈತರ ರಕ್ಷಣೆಗಾಗಿ ಕಂಕಣಬದ್ದರಾಗೋಣ : ಬಾಪುಗೌಡ ಪಾಟೀಲ

0
22

ಕುಂದಗೋಳ : ಒಣ ಬೇಸಾಯ ಮಾಡುತ್ತಿರುವ ರೈತರು ಕೇವಲ ಹೊಲದಲ್ಲಿ ದುಡಿಯುವ ಯಂತ್ರವಾಗಿದ್ದಾರೆ ಬೆಳೆ ಬಂದಾಗ ಮಾರುಕಟ್ಟೆಯಲ್ಲಿ ಯೋಗ್ಯವಾದ  ಬೆಲೆ ಸಿಗಲಾರದೆ ತೊಳಲಾಡುತ್ತಿದ್ದಾನೆ. ಈ ನಿಟ್ಟಿನಲ್ಲಿ ಇಂದಿನ ಸಹಕಾರಿ ಸಂಘ ಸಂಸ್ಥೆಗಳು ರೈತರಿಗೆ ಅನುಕೂಲವಾಗುವದರೊಂದಿಗೆ   ರೈತರ ಬೆಳೆಗಳನ್ನು ಖರೀದಿಸಿ ಸೂಕ್ತ ಧಾರಣಿ ನೀಡಬೇಕೆಂದು ಜಿಲ್ಲಾ ಸಹಾಕಾರಿ ಸಂಘದ ಅಧ್ಯಕ್ಷ ಬಾಪುಗೌಡ ಪಾಟೀಲ ಹೇಳಿದರು.

ಅವರು ಪಟ್ಟಣದಲ್ಲಿ 60ನೇ ಅಖಿಲ ಭಾರತ ಸಹಕಾರಿ ಸಪ್ತಾಹ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಂಸ್ಕರಣ ಮತ್ತು ಗ್ರಾಹಕ ದಿನ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ದೇಶದಲ್ಲಿನ ಮಹಾರಾಷ್ಟ್ತ್ರ ಹಾಗೂ ಗುಜರಾತ ಮಾದರಿಯಂತೆ ನಮ್ಮ ರಾಜ್ಯದಲ್ಲಿಯೂ ರೈತರ ಕಷ್ಟ ಸುಖಗಳಲ್ಲಿ ಬೆರೆತು ರೈತರ ರಕ್ಷಣೆಗಾಗಿ ಕಂಕಣಬದ್ದರಾಗೋಣ ಎಂದು ಹೇಳಿದರು.

ನೂತನ ಕೆಸಿಸಿ ಬ್ಯಾಂಕ ನಿರ್ಧೇಶಕ ಉಮೇಶ ಹೆಬಸೂರ ಮಾತನಾಡಿ ಇಂದು ಬೆಳೆಯುತ್ತಿರುವ ಸಹಕಾರ ಸಂಘಗಳ ಆರ್ಥಿಕ ಹಾಗೂ  ಸದೃಢವಾಗಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಂಕ್ರಪ್ಪ ಶಿವಳ್ಳಿ, ಡಿ.ಆರ್.ವೆಂಕಟರಾಮ್, ಅರವಿಂದ ಕಟಗಿ, ಬಿ.ಎಂ.ಮುಂದಿನಮನಿ, ಶಂಕರಗೌಡ ಮುದಿಗೌಡ್ರ, ಐ.ಎಸ್.ಪಾಟೀಲ, ಮುದಕಣ್ಣ ಕುನ್ನೂರ, ನಿಂಗಪ್ಪ ಬಿಳೇಬಾಳ, ಬಸುರಾಜ ಬಾಳಿಕಾಯಿ ಹಾಗೂ ಅನೇಕ ಕೆಸಿಸಿ ಬ್ಯಾಂಕ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ಬಿ.ಎಸ್.ವರೂರ ವಹಿಸಿದ್ದರು. ಇದೇ ವೇಳೆ ನೂತನ ಕೆಸಿಸಿ ಬ್ಯಾಂಕ್ ನಿರ್ಧೇಶಕರಾಗಿ ಆಯ್ಕೆಯಾದ ಉಮೇಶ ಹೆಬಸೂರ, ಪ್ರತಾಫ್ ಚೌಹಾಣ, ಮಲ್ಲಿಕಾರ್ಜುನ ಹೊರಕೇರಿ, ಬಾಪುಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಸುಮಾ ರಣೂತೂರ ಪ್ರಾರ್ಥಿಸಿದರು. ಎಚ್.ಟಿ.ದೊಡಮನಿ ಸ್ವಾಗತಿಸಿದರು. ಬಿ.ಪಿ.ಕಲಾರಿ ನಿರೂಪಿಸಿದರು. ಜೆ.ಎಸ್.ಗೌಡಪ್ಪಗೌಡ್ರ ವಂದಿಸಿದರು.

loading...

LEAVE A REPLY

Please enter your comment!
Please enter your name here