ರೈತರ ಹಕ್ಕು ಸೌಲಭ್ಯಕ್ಕಾಗಿ ಸಹಕಾರಿ ರಂಗ ಪ್ರವೇಶ ಅವಶ್ಯ : ಮಲ್ಲನಗೌಡ

0
18

ಹುನಗುಂದ: ಇಂದು ನಡೆಯುವ ಪಿಕೆಪಿಎಸ್‌ ಚುನಾವಣೆಗೆ ಮೂರು ಜನ ರೈತ ಮುಖಂಡರು ರೈತ ಸಂಘದಿಂದ ಸ್ಪರ್ಧಿಸಿದ್ದು. ರೈತರ ಕಷ್ಟ ಸಂಕಷ್ಟಗಳಿಗೆ ಸ್ಪಂಧಿಸುವಂತ ಅಭ್ಯರ್ಥಿಗಳಿದ್ದಾರೆ. ಇಲ್ಲಿವರಿಗೆ ರೈತರು ತಮ್ಮ ಹಕ್ಕು ಸೌಲಭ್ಯಗಿಗಾಗಿ ಬೀದಿಯಲ್ಲಿ ಹೋರಾಟ ಮಾಡಿದ್ದು ಸಾಕು ಇನ್ನು ಸಹಕಾರಿ ಸಂಘವನ್ನು ಪ್ರವೇಶಿಸಿ ರೈತರ ಸೇವೆ ಮಾಡಲು ರೈತರು ಅನುಕೂಲ ಮಾಡಬೇಕು ಎಂದು ತಾಲೂಕ ರೈತ ಸಂಘದ ಅಧ್ಯಕ್ಷ ಮಲ್ಲನಗೌಡ ತುಂಬದ ಸಹಕಾರಿ ಮತದಾರರಲ್ಲಿ ಮನವಿ ಮಾಡಿದರು.
ಅವರು ನಗರದ ವಿ.ಮ.ಪ್ರೌಢ ಶಾಲೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳಾದ ಬಸವರಾಜ ಪೈಲ ಮತ್ತು ಮುತ್ತಣ್ಣ ಹಂಡಿ ಇನ್ನು ಪರಿಶಿಷ್ಟ ಪಂಗಡದ ಅಭ್ಯರ್ಥಿ ಶ್ರೀಕೃಷ್ಣ ಜಾಲಿಹಾಳವರು ರೈತಪರ ಹೋರಾಟಗಾರು ಅವರನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಆಯ್ಕೆ ಮಾಡುವುದರಿಂದ ಅಲ್ಲಿ ಸಿಗುವ ರೈತರ ಸಾಲ,ಬೆಳೆ ವಿಮೆ,ಯಶಸ್ವಿನಿಯ ಸೌಲಭ್ಯ ಸೇರಿದಂತೆ ಹಲವು ಸೌಲಭ್ಯವನ್ನು ರೈತರ ಮನೆ ಮನೆಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನವನ್ನು ಅವರು ಮಾಡಲು ಸಿದ್ದ.ರೈತರು ಸಹಕಾರಿಸ ಸಂಘದಲ್ಲಿ ಸಾಲ ಸೌಲಭ್ಯಗಳನ್ನು ಪಡೆಯಲು ಸಾಕಷ್ಟು ಸಾರಿ ಪರದಾಡುತ್ತಿರುವುದ್ದನ್ನು ಕಂಡಿದ್ದೇವೆ ಈಗ ಅದೇ ಪರಸ್ಥಿತಿ ಮರಕಳಿಸದಂತೆ ನೋಡಿಕೊಳ್ಳವುದು ಪ್ರಜ್ಞಾವಂತ ರೈತ ಮತದಾರ ಕೈಯಲ್ಲಿದೆ.
ಪ್ರತಿಯೊಬ್ಬ ರೈತರ ಪತ್ರಿ ಎಕರೆಗೆ 16 ಸಾವಿರದಂತೆ ಸರ್ಕಾರ ಸಾಲ ನೀಡುತ್ತಿದ್ದರೂ ರೈತರಿಗೇ ಕೇವಲ 10 ಸಾವಿರ ಖರ್ಚು ಹಾಕುತ್ತಾರೆ ಇನ್ನು 6 ಸಾವಿರ ಎಲ್ಲಿ ಹೋಯಿತು ? ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ಇದರಿಂದ ಅನ್ನ ಹಾಕುವ ರೈತ ಸಾಲದ ಬಾಧೆಯನ್ನು ತಾಳಲಾರದೇ ಆತ್ಮಹತ್ಯಕ್ಕೆ ಶರಣಾಗುತ್ತಿದ್ದು ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯದ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಿ ಋಣಮುಕ್ತ ಪತ್ರವನ್ನು ಶೀಘ್ರವೇ ಮುಖ್ಯಮಂತ್ರಿಗಳು ನೀಡವಂತಾಗಬೇಕು ಇದು ಬರೀ ಆಶ್ವಾಶನೆಗಳಾಗಬಾರದು. ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಸಕಾಗೊಳ್ಳಲು ರಾಜ್ಯಾದ್ಯಂತ ಗುಡಿ ಕೈಗಾರಿಕೆಗಳು ಆರಂಭವಾಗಿ ದುಡಿಯುವ ಕೈಗೆ ಕೆಲಸ ಸಿಗುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ಅಭ್ಯರ್ಥಿಗಳಾದ ಬಸವರಾಜ ಪೈಲ, ಶ್ರೀಕೃಷ್ಣ ಜಾಲಿಹಾಳ, ರೈತ ಮುಖಂಡರಾದ ಮಹಾಂತಪ್ಪ ವಾಲೀಕಾರ, ರಸೂಲಸಾಬ ತಹಶೀಲ್ದಾರ, ಇಬ್ರಾಹಿಂ ನಾಯಕ, ರಾಮನಗೌಡ ಶಿವನಗಿ, ವಿಜಯಕುಮಾರ ಹೊಸಮನಿ, ಮಲ್ಲಿಕಾರ್ಜುನ ಪೈಲ, ಮಲ್ಲಪ್ಪ ಹೊಸಮನಿ ಇನ್ನು ಅನೇಕರು ಇದ್ದರು.

loading...