ರೈತಾಪಿ ಬಂಧುಗಳಿಗೆ ಆನ್‍ಲೈನ್ ಮಾರ್ಕೆಟಿಂಗ್

0
34

ಗೋಕಾಕ.18: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಆನ್‍ಲೈನ್ ಮಾರ್ಕೆಟಿಂಗ್” ಪದ್ಧತಿಯಲ್ಲಿ ರೈತಾಪಿ ಬಂಧುಗಳಿಗೆ ಅನುಕೂಲವಾಗಲು ದೃಷ್ಟಿಯಿಂದ ಈ ಯೋಜನೆಯನ್ನು ಕೃಷಿ ಉತ್ಪನ ಮಾರುಕಟ್ಟೆ ಸಮಿತಿಯಲ್ಲಿ ಅಳವಡಿಸಿದ್ದು ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಎ.ಪಿ.ಎಮ್.ಸಿ. ಅಧ್ಯಕ್ಷ ಮಡ್ಡೆಪ್ಪ ತೋಳಿನವರ ತಿಳಿಸಿದ್ದಾರೆ.
ಈ ಕುರಿತು ರವಿವಾರದಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು ರೈತಾಪಿ ವರ್ಗಗಳ ಮನೆ ಮನೆಗೆ ತೆರಳಿ ಕೃಷಿ ಸಂಬಂಧಿತ ವಿಚಾರವನ್ನು ಗಣಕಯಂತ್ರದಲ್ಲಿ ದಾಖಲಿಸಲು ಸರಕಾರೇತ್ರ ಸಂಸ್ಥೆಗೆ ಜವಾಬ್ದಾರಿಯನ್ನು ನೀಡಲಾಗಿದ್ದು, ತಮ್ಮ ಸಂಪೂರ್ಣ ಮಾಹಿತಿಯನ್ನು ನೀಡಿ ಅಧಿಕೃತ ದಾಖಲೆಗಳನ್ನು ಒದಗಿಸಿ ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ವಿನಂತಿಸಿದ್ದಾರೆ.

loading...

LEAVE A REPLY

Please enter your comment!
Please enter your name here