ರೈತ ದೇಶದ ಬೆನ್ನೆಲುಬು: ಎಮ್.ಎಚ್. ಸೋನವಾಲ್ಕರ

0
338

ಮೂಡಲಗಿ,11-ರೈತ ದೇಶದ ಬೆನ್ನೆಲುಬು.ಜಾನುವಾರುಗಳು ರೈತರ ಜೀವನಾಡಿ. ಅದರಂತೆ ಜಾನುವಾರು ಸಂಪತ್ತು ಕೃಯ ಬೆನ್ನೇಲುಬು ಎಂದು ರೈತ ಮುಖಂಡ,ಮೂಡಲಗಿ ಶಿಕ್ಷಣ ಸಂಸ್ಥೆಯ ಚೇರಮನ ಎಮ್.ಎಚ್.ಸೋನವಾಲ್ಕರ ಹೇಳಿದರು.

ಅವರು ಮೂಡಲಗಿಯ ಪಶು ಸಹಾಯಕ ನಿರ್ದೇಶಕರಾದ ಆರ್.ಎ.ಪುರೋಹಿತ ವರ್ಗಾಗೊಂಡ ಪ್ರಯುಕ್ತ ಹಮ್ಮಿಕೊಂಡ ಬಿಳ್ಕೊಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ  ವೈದ್ಯರ ಸೇವೆಯನ್ನು ಶ್ಲಾಘಿಸಿದರು.

ಪಶು ವೈದ್ಯಕೀಯ ನಿರ್ದೇಶಕರ ಸಂಘದ ರಾಜ್ಯ ಉಪಾಧ್ಯಕ್ಷ ನೀಲಕಂಠ ಕಪ್ಪಲಗುದ್ದಿ, ಮೂಡಲಗಿ ದನಗಳ ಪೇಟೆ ದಕ್ಷಿಣ ಭಾರತದಲ್ಲಿ ಪ್ರಸಿದ್ದಿಯಾಗಿದೆ.  ಈ ಆಸ್ಪತ್ರೆ ಪಾಲಿಕ್ಲಿನಿಕದಂತಹ ಮೇಲ್ದರ್ಜೆಯ ಆಸ್ಪತ್ರೆಯಾಗಲು ಮೂಡಲಗಿ  ಮತ್ತು ಸುತ್ತಮುತ್ತಲಿನ ಗ್ರಾಮಗಳ  ಮುಖಂಡರು ಹೋರಾಟ ಮಾಡಬೇಕಾಗಿದೆ. ಪಾಲಿಕ್ಲಿನಿಕ ಆಸ್ಪತ್ರೆೆ ಬೆಳೆಯುತ್ತಿರುವ ಮೂಡಲಗಿ ನಗರಕ್ಕೆ ಅತ್ಯವಶ್ಯಕವಾದ ಮೂಲಭೂತ ಸೌಕರ್ಯಗಳಲ್ಲೊಂದಾಗಿದೆ ಎಂದರು.

ಪಶು ವೈದ್ಯಕೀಯ ಪರೀಕ್ಷಕ  ಶಂಕರ ಎಸ್. ಶಾಬನ್ನವರ, ಅವರ ಸೇವೆ ಜಿಲ್ಲೆಯಲ್ಲಿ ದಂತಕತೆಯಾಗಿದೆ ಅವರ ಸರಳ ದಜ್ಜನ ನಿಕೆಯ  ಮತ್ತು ಮೃದು ಸ್ವಭಾವದ ವ್ಯಕ್ತಿ. ಇಂತಹವರು ಸಿಗುವದು ವಿರಳ ಎಂದು ಅವರ ಸೇವೆಯನ್ನು ಶ್ಲಾಘಿಸಿದರು.

ಸನ್ಮಾನ ಸ್ವೀಕರಿಸಿದ  ಡಾ. ಆರ್.ಎ.ಪುರೋಹಿತ,  ಆಸ್ಪತ್ರೆಯ ಅಭಿವೃದ್ದಿಗೆ 14 ಲಕ್ಷ ರೂ ಮಂಜೂರಾಗಿದೆ.  ಬೆಳವಣಿಗೆಗೆ ಸಾರ್ವಜನಿಕರ ಸಹಕಾರ ಮುಖ್ಯ ಎನ್ನುತ್ತಾ ಅಧಿಕಾರಿಗಳು ಜನರ ಸೇವೆಕರಾಗಿ ದುಡಿದಾಗ ಮಾತ್ರ ನೌಕರಸ್ತರ ಜೀವನ ಸಾರ್ಥಕವಾಗುವದೆಂದರು.

ಪ್ರಭಾರಿ ಸಹಾಯಕ ನಿರ್ದೇಸಕ ಡಾ. ಬಿ.ಎಸ್.ಗೌಡರ, ಡಾ. ಜಿ.ಎಸ್.ಮಳಲಿ,  ಲಕ್ಷ್ಮಣ ಶಾಬನ್ನವರ ಮಾತನಾಡಿದರು.

ಸಮಾರಂಭದಲ್ಲಿ ಪುರಸಭೆ ಉಪಾಧ್ಯಕ್ಷ ಅಜೀಜ್ ಡಾಂಗೆ ಗಣ್ಯರಾದ ಆರ್.ಡಿ.ಪಿರೋಜಿ, ಬಿ.ಆರ್.ಬಡ್ಡಿ, ಪ್ರಮೋದ ಮೂಡಲಗಿ, ರವಿಂದ್ರ ಸಣ್ಣಕ್ಕಿ, ಶಿವಬಸಪ್ಪ ಕುರಬಗಟಿ,  ಸುರೇಶ ಪಿರೋಜಿ,  ಡಾ.ಆನಂದ ದೇಶಪಾಂಡೆ, ಇಸಾಕ  ಪಿರಜಾದೆ, ರಾಜು ಕಜ್ಜನವರ, ಚಿದಾನಂದ ಬೆಳಕೂಡ, ಎಮ್.ಬಿ.ಹೊಸೂರ, ಸುರೇಶ ಅಡವ್ವಗೋಳ ಅನೇಕರು ಉಪಸ್ಥಿತರಿದ್ದರು.

ಅಮೃತ್ ಬೋಧ ಸ್ವಾಮಿಜಿಗಳು ಸಾನಿಧ್ಯ ವಹಿಸಿ ಮಾತನಾಡಿದರು.

ಪಶು ವೈದ್ಯಕೀಯ ಪರೀಕ್ಷಕ  ಶಂಕರ ಎಸ್. ಶಾಬನ್ನವರ ಸ್ವಾಗತಿಸಿದರು. ವಿಭೂತಿ ನಿರೂಪಿಸಿದರು. ಈ.ವ್ಹಿ. ಮೆಲಾನಟ್ಟಿ ವಂದಿಸಿದರು.

loading...

LEAVE A REPLY

Please enter your comment!
Please enter your name here