ರೈತ ಸಮಸ್ಯೆಗಳ ಕುರಿತು ಮನವಿ

0
50

ಚನ್ನಮ್ಮನ ಕಿತ್ತೂರು: ಬೆಳಗಾವಿ ಜಿಲ್ಲೆಯಲ್ಲಿ ಸತತವಾಗಿ ಎರಡು ಮೂರು ವರ್ಷಗಳಿಂದ ಸರಿಯಾಗಿ ಮಳೆಯೂ ಆಗದ ಕಾರಣ ರೈತರು ಜೀವನ ಸಾಗಿಸಿಕೊಂಡು ಹೋಗುವುದು ತುಂಬಾ ಕಷ್ಟಕರವಾಗಿದೆ ಎಂದು ಕಿತ್ತೂರು ತಹಶೀಲ್ದಾರ ಜಿ ಕೆ ರತ್ನಾಕರ ಅವರಿಗೆ ರೈತರು ಈ ಮೂಲಕ ಮನವಿ ಸಲ್ಲಿಸಿದರು.

ರೈತರು ದೇಶದ ಆರ್ಥಿಕ ಬೆನ್ನೆಲಬಾಗಿದ್ದಾರೆ.ಕೃಷಿಯಿಂದ ಬರುವ ಕೋಟ್ಯಂತರ ರೂಪಾಯಿ ಆದಾಯ ದೇಶದ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇಂದು ಮಳೆಯ ಅಭಾವ, ಅಂತರ್ಜಾಲ ಕುಸಿತ, ಬೆಲೆ ಕುಸಿತ, ಪ್ರಕೃತಿ ವಿಕೋಪ ಸೇರಿದಂತೆ ಹತ್ತು ಹಲವು ಕಾರಣಗಳಿಂದಾಗಿ ಸಂಕಷ್ಟಕ್ಕೆ ಸಿಲಕುತ್ತಿದ್ದಾರೆ. ತಾಯಿ ಹಾಲು ಎಷ್ಟು ಪವಿತ್ರವೋ ಅಷ್ಟೇ ಪವಿತ್ರವಾದದು ರೈತನ ಬೆವರು ಎಂದರಿತು ಪ್ರತಿಯೊಬ್ಬರು ರೈತರ ಬೆವರಿಗೆ ತಕ್ಕ ಪ್ರತಿಫಲ ನೀಡಲು ಮುಂದಾಗಬೇಕು.

ರೈತ ಕಷ್ಟಕ್ಕೆ ಸಿಲುಕಿದರೆ ಇಡೀ ದೇಶವೆ ಕಷ್ಟಕ್ಕೆ ಸಿಲುಕುತ್ತದೆ. ರೈತರ ನೆರವಿಗೆ ಬಂದು ಬದುಕನ್ನು ಹಸನು ಮಾಡಿದಾಗ ಮಾತ್ರ ನಿಜವಾದ ಅಭಿವೃದ್ಧಿ ಆಗುತ್ತದೆ. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೇ ಪರದಾಡುತ್ತಿದ್ದಾರೆ ಬೆಲೆ ರಕ್ಷಣೆ ಮಾಡುವಂತೆ ಕೃಷಿಕರು ಅನೇಕ ಚಳುವಳಿಗಳನ್ನು ಮಾಡಿದರೂ ಸಹ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಿವಿಕೊಡದೆ ಬೇಜವಾಬ್ದಾರಿ ಪ್ರದರ್ಶಿಸುತ್ತಿವೆ. ರಾಜ್ಯದಲ್ಲಿ ಬರಗಾಲ ಪರಿಸ್ಥತಿ ಇದ್ದು ಕನಿಷ್ಟವಾಗಿ ಬೆಳೆದ ಬೆಳೆಗಳಿಗೂ ಸಹ ಸರಿಯಾದ ಬೆಲೆ ಸಿಗುತ್ತಿಲ್ಲ. ಮುಂಗಾರಿನ ಬೆಳೆಗಳಾದ ಭತ್ತ, ಕಬ್ಬು, ಹತ್ತಿ, ಸೋಯಾಬಿನ್‌, ಗೋವಿನ ಜೋಳ ಹಾಗೂ ಹಿಂಗಾರು ಬೆಳೆಗಳಾದ ಬಿಳಿ ಜೋಳ, ಕಡಲಿ, ಗೋಧಿ ತರಕಾರಿ ಬೆಳೆಗಳು ಸರಯಾಗಿ ಮಳೆಯೂ ಆಗದ ಕಾರಣ ಬೆಳೆಗಳು ನಾಶವಾಗುತ್ತಿವೆ.

ಈ ಸಾಲಿನ 2016 ರಲ್ಲಿ ರೈತರಿಗೆ ಸರಕಾರ ಪರಿಹಾರ ಕೊಡುವದಾಗಬೇಕು ಮತ್ತು ಈ ಹಿಂದೆ ಎರಡು ಮೂರು ವರ್ಷಗಳಿಂದ ರೈತರು ವಿಮಾ ಹಣವನ್ನು ತುಂಬಿದ್ದು ವಿಮಾ ಕಂಪನಿಗಳಿಂದ ಹಣ ಬಿಡುಗಡೆಯಾಗಿಲ್ಲ ಸರ್ಕಾರ ವಿಮಾ ಕಂಪನಿಗಳಿಂದ ರೈತರಿಗೆ ವಿಮಾ ಹಣ ಮುಟ್ಟುವಂತೆ ಮಾಡಬೇಕು. ಕಬ್ಬು ಬೆಳೆಗಾರರಿಗೆ ಎರಡು ಮೂರು ವರ್ಷಗಳಿಂದ ರೈತರು ಕಬ್ಬು ಹಚ್ಚಿದ್ದು, ಬೆಳಗಾವಿ ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಬಿಲ್ಲು ಸಕ್ಕರೆ ಕಾರ್ಖಾನೆಯ ಮಾಲಿಕರಿಂದ ಸರ್ಕಾರ ಗಮನಹರಿಸಿ ರೈತರ ಬಿಲ್ಲು ಬಿಡುಗಡೆಗೊಳಿಸಬೇಕು.ರೈತರ ಬೆಳೆಸಾಲ ಬ್ಯಾಂಕಗಳಲ್ಲಿದ್ದ ಸಾಲವನ್ನು ಮನ್ನಾ ಮಾಡಬೇಕು.ಕೇಂದ್ರ ಸರ್ಕಾರ ನೋಟುಗಳ ಬದಲಾವಣೆ ಮಾಡಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಚಲಾವಣೆಗೆ ತೊಂದರೆಯಾಗುತ್ತಿದೆ. ಆಯಾ ಭಾಗದ ಗ್ರಾಹಕರಿಗೆ ಬ್ಯಾಂಕಗಳಿಂದ ಹಣದ ಬದಲಾವಣೆಗೆ ಸರ್ಕಾರ ನಿಗಾವಹಿಸಿ ಸಹಕರಿಸುವಂತಾಗಬೇಕು ಎಂದು ಮನವಿಯಲ್ಲಿ ಕರ್ನಾಟಕ ರೈತಸಂಘ ಹಾಗೂ ಹಸಿರುಸೇನೆಯ ಅಧ್ಯಕ್ಷ ಬೀಮಶೆಪ್ಪ ದೇಮಪ್ಪ ದುರಗಣ್ಣವರ ಮನವಿ ಮಾಡಿಕೊಂಡರು. ತಹಶೀಲ್ದಾರ ಜಿ.ಕೆ.ರತ್ನಾಕರ ಮತ್ತು ಉಪತಹಶೀಲ್ದಾರ ಆರ್‌.ಎಸ್‌.ಮಾನೆ ಇನ್ನೂಳಿದ ರೈತ ಮುಖಂಡರುಗಳಾದ ಸಿದ್ನಿಂಗ ಬಸೆಟ್ಟಿ, ಶಿವಪುತ್ರಪ್ಪ ಅಳ್ನಾವರ, ಗಂಗಪ್ಪ ನಂದೆನ್ನವರ, ಮಲ್ಲಪ್ಪ ರಾ ಅಂಬಡಗಟ್ಟಿ, ಮುದಕಪ್ಪ ಮಡಿವಾಳರ, ನಾಗಪ್ಪ ಸರದಾರ, ಕಲ್ಲಪ್ಪ ಹುಬ್ಬಳ್ಳಿ, ಗುರುಸಿದ್ದಯ್ಯ ಪೂಜಾರ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here