ರೈತ ಹಚ್ಚಿದ ದೀಪ ನಾಟಕ ಪ್ರದರ್ಶನ

0
50

ಖಾನಾಪುರ:12- ತಾಲೂಕಿನ ಅವರೊಳ್ಳಿ ಗ್ರಾಮದಲ್ಲಿ ಮಕರ

ಸಂಕ್ರಮಣ ಹಬ್ಬದ ಪ್ರಯುಕ್ತ ಶ್ರೀ ಛತ್ರಪತಿ ಶಿವಾಜಿ ಯುವಕ

ಮಂಡಳದ ಆಶ್ರಯದಲ್ಲಿ ಜ. 14ರಂದು ರಾತ್ರಿ 9.30ಕ್ಕೆ `ರೈತ ಹಚ್ಚಿದ

ದೀಪಳಿ ಎಂಬ ನಾಟಕದ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.

ಡಿ.ಆರ್. ಪೂಜಾರ ಅವರ ರಚನೆಯ ಈ ನಾಟಕಕ್ಕೆ

ಮಹಾದೇವ ಚಿಕ್ಕಮುನವಳ್ಳಿಯವರು ನಿರ್ದೇಶನ ನೀಡಿದ್ದಾರೆ.

ಪ್ರಗತಿಪರ ರೈತನೋರ್ವ ತನಗೆ ಎದುರಾಗುವ ಬರಗಾಲ ಹಾಗೂ

ಮೋಸದ ಜಾಲಗಳನ್ನು ಯಾವ ರೀತಿ ಎದುರಿಸುತ್ತಾನೆಂಬ

ಕಥಾವಸ್ತುವನ್ನು ಹೊಂದಿರುವ ಹಾಗೂ ಪ್ರಸಕ್ತ ರೈತರ

ಪರಿಸ್ಥಿತಿಯನ್ನು ಪ್ರತಿಬಿಂಬಿಸುವ ಸನ್ನಿವೇಶಗಳು ಈ ನಾಟಕದಲ್ಲಿವೆ.

ಸ್ಥಳೀಯ ಎಂಇಎಸ್ ಶಾಸಕ ಅರವಿಂದ ಪಾಟೀಲ

ನಾಟಕ ಪ್ರದರ್ಶನವನ್ನು ಉದ್ಘಾಟಿಸಲಿದ್ದು, ಹಿರೇಮುನವಳ್ಳಿಯ

ಶ್ರೀ ಶ್ಯಾಂಡಿಲ್ಯ ಮಹಾರಾಜರು ದಿವ್ಯಸಾನ್ನಿಧ್ಯ ವಹಿಸಲಿದ್ದಾರೆ.

ಕೊಡಚವಾಡ ಗ್ರಾ.ಪಂ. ಅಧ್ಯಕ್ಷೆ ಮಲ್ಲವ್ವ ಭರಮಪ್ಪನವರ

ಅಧ್ಯಕ್ಷತೆಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ

ಪ್ರಧಾನ ಕಾರ್ಯದರ್ಶಿ ನಾಸೀರ ಬಾಗವಾನ, ಬಿಜೆಪಿ ಜಿಲ್ಲಾ

ಪ್ರಧಾನ ಕಾರ್ಯದರ್ಶಿ ಪ್ರಮೋದ ಕೊಚೇರಿ, ಕೆಪಿಸಿಸಿ ಸದಸ್ಯ

ರಫೀಕ ಖಾನಾಪುರಿ, ಅವರೊಳ್ಳಿ ಲಕ್ಷ್ಮೀದೇವಿ ದೇವಸ್ಥಾನ

ಸಮಿತಿ ಅಧ್ಯಕ್ಷ ಶಿವನಗೌಡ ಪಾಟೀಲ, ಬಿಜೆಪಿ ತಾಲೂಕು ಅಧ್ಯಕ್ಷ

ಜ್ಞಾನದೇವ ಠಕ್ಕೇಕರ, ನಂದಗಡ ಠಾಣೆ ಪಿಎಸ್ಐ ಸುರೇಶ

ಶಿಂಗೆ, ಮುಗಳಿಹಾಳ ಪ್ರೌಢಶಾಲೆ ಎಸ್ಡಿಎಂಸಿ ಅಧ್ಯಕ್ಷ ಶಂಕರ

ಗೋಳೇಕರ, ಗ್ರಾ.ಪಂ. ಉಪಾಧ್ಯಕ್ಷ ಅಶೋಕ ಗಂ. ಕೊಡೊಳ್ಳಿ,

ಪಿಕೆಪಿಎಸ್ ಅಧ್ಯಕ್ಷ ಯಶವಂತ ಕೊಡೊಳ್ಳಿ ಮತ್ತಿತರರು ಮುಖ್ಯ

ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ನಾಟಕದ ಮಾಲೀಕರಾದ

ಜ್ಯೌತಿಭಾ ಭರಮಪ್ಪನವರ ಮತ್ತು ರುದ್ರಪ್ಪ ಶಿವಪ್ಪನವರ

ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here