ರೈಲಿಗೆ ಸಿಲುಕಿ ಕರಡಿ ಸಾವು

0
90

ಕನ್ನಡಮ್ಮ ಸುದ್ದಿ
ಬೆಳಗಾವಿ: ಖಾನಾಪುರ ತಾಲೂಕಿನ ಅಂಬೆವಾಡಿ ಗೇಟ್ ಹತ್ತಿರ ಕಿರ್ವಾಲೆ ಅರಣ್ಯ ಪ್ರದೇಶದಲ್ಲಿ ರೈಲಿಗೆ ಸಿಲುಕಿ ಕರಡಿ ಸಾವನ್ನಪ್ಪಿರುವ ಘಟನೆ ಗುರುವಾರ ಬೆಳಗಿಜಾವ 4ಕ್ಕೆ ಘಟನೆ ನಡದಿದೆ.
ಹುಬ್ಬಳ್ಳಿಯಿಂದ ಬೆಳಗಾವಿ ಕಡೆಗೆ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಕರಡಿ ಸಾವನ್ನಪ್ಪಿದೆ. ಎರಡು ಹಳ್ಳಿ ಹೊಂದಿರುವ ಪ್ರದೇಶದಲ್ಲಿ ಹಳ್ಳಿ ದಾಟ್ಟಲು ಹೋಗಿದ ಕರಡಿ ಮೃತಪಟ್ಟಿದೆ. ಈ ಪ್ರದೇಶದಲ್ಲಿ ಎರಡು ವರ್ಷದಿಂದ ಯಾವುದೇ ಪ್ರಾಣಿ ರೈಲಿಗೆ ಸಿಲುಕಿ ಸಾವನ್ನಪ್ಪಿರಲಿಲ್ಲ. ಖಾನಾಪುರ ಎಸಿಎಪ್ ಸಿ.ಬಿ ಪಾಟೀಲ, ಆರ್‍ಎಪ್‍ಓ ಬಸವರಾಜ ವಾಳದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

loading...