ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಿ: ಸಹನಾ

0
11

ಕನ್ನಡಮ್ಮ ಸುದ್ದಿ-ಸವಣೂರ: ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಿ ಆರೋಗ್ಯವಂತರಾಗುವಂತೆ ವೈದ್ಯಾಧಿಕಾರಿಗಳು ಸಹಕರಿಸಬೇಕು ಎಂದು ಜಿ.ಪಂ ಸದಸ್ಯೆ ಸಹನಾ ದೊಡ್ಡಮನಿ ಹೇಳಿದರು.
ತಾಲೂಕಿನ ಹುರಳಿಕುಪ್ಪಿ ಗ್ರಾಮದ ಆರೋಗ್ಯ ವಿಸ್ತರಣಾ ಚಿಕಿತ್ಸಾಲಯ ಕೇಂದ್ರಕ್ಕೆ ಭೇಟಿನೀಡಿ ಪರಿಶೀಲನೆ ಕೈಗೊಂಡು ಅಧಿಕಾರಿಗಳೊಂದಿಗೆ ಅವರು ಮಾತನಾಡಿದರು.ಇಂದಿನ ದಿನಮಾನದಲ್ಲಿ ಹೆಚ್ಚು ಮಳೆಯಾಗುತ್ತಿರುವದರಿಂದ ಸಾಂಕ್ರಾಮಿಕ ರೋಗಗಳ ಹಾವಳಿ ಉಲ್ಬಣವಣವಾಗುತ್ತಿದೆ. ಅವುಗಳ ನಿಯಂತ್ರಣಕ್ಕಾಗಿ ಗ್ರಾ.ಪಂ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸಹಕರಿಸಬೇಕು. ಆಸ್ಪತ್ರೆಗೆ ಆಗಮಿಸುವ ರೋಗಿಗಳ ಉಪಯೋಗಕ್ಕಾಗಿ ಶೌಚಾಲಯವನ್ನು ಸುಚಿಯಾಗಿಟ್ಟುಕೊಂಡು ಆರೋಗ್ಯವನ್ನು ಕಾಪಾಡುವಂತಾಗಬೇಕು. ಅದೇ ರೀತಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕುಡಿಯಲು ಶುದ್ದನೀರಿನ ಬಳಕೆ ಮಾಡುವಂತಾಗಬೇಕು. ಇವುಗಳ ಉಪಯೋಗವನ್ನು ಸಮರ್ಪಕವಾಗಿ ಮಾಡಿಕೊಂಡಾಗ ಸಾರ್ವಜನಿಕರು ಆರೋಗ್ಯದಿಂದ ಇರಲು ಸಾದ್ಯವಾಗುತ್ತದೆ. ಆದ್ದರಿಂದ ಅಧಿಕಾರಿಗಳು ಸಾರ್ವಜನಿಕರ ಆರೋಗ್ಯದಲ್ಲಿ ನಿಸ್ಕಾಳಜಿ ತೋರದೆ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುವಂತಾಗಬೇಕು ಎಂದರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಭೋಜರಾಜ ಲಮಾಣಿ ಮಾತನಾಡಿ ಗ್ರಾಮದ ದೊಡ್ಡಕೆರೆ ತುಂಬಿದರೆ ನೀರಿನ ಸಮಸ್ಯೆಯಾಗುವದಿಲ್ಲ. ಆಸ್ಪತ್ರೆಗೆ ನೀರಿನ ಪೂರೈಕೆ ಮಾಡಲು ಪೈಪಲೈನ್ ಅಳವಡಿಸಿ ಸಮರ್ಪಕವಾಗಿ ಅನೂಕೂಲ ಕಲ್ಪಿಸಲಾಗುವದು ಎಂದರು.ಈ ಸಂದರ್ಭದಲ್ಲಿ ಇಂಜಿನೀಯರ್ ಮಾಂತೇಶ ಪಿ, ಪ್ರವೀಣ ಬಿರಾದರ, ಡಾ. ರೂಪಾ ಬಾವಚಿ, ಶ್ರೀದರ ದೊಡ್ಡಮನಿ, ಗ್ರಾಮಸ್ಥರಾದ ಹೊನ್ನಪ್ಪ ಕೊಳ್ಳವರ, ಕನ್ನಪ್ಪ ಕನ್ನಗೌಡ್ರ ಸೇರಿದಂತೆ ಹಲವಾರು ಗ್ರಾಮಸ್ಥರು ಇದ್ದರು.

loading...