ಲಾಕ್‌ನಲ್ಲಿ ಆಡಳಿತ ಪಕ್ಷದಿಂದ ನಿಯಮ ಉಲ್ಲಂಘಣೆ: ಕ್ರಮಕ್ಕೆ ಗಡಾದ ಆಗ್ರಹ

  0
  12

  ಲಾಕ್‌ನಲ್ಲಿ ಆಡಳಿತ ಪಕ್ಷದಿಂದ ನಿಯಮ ಉಲ್ಲಂಘಣೆ: ಕ್ರಮಕ್ಕೆ ಗಡಾದ ಆಗ್ರಹ
  ಬೆಳಗಾವಿ: `ಲಾಕ್’ಅವಧಿ ಸರಕಾರ ಮಾರ್ಗಸೂಚಿ ಉಲ್ಲಂಘಿಸಿ, ಕಾರ್ಯಕ್ರಮಗಳನ್ನು ಆಯೋಜಿಸಿದ ಆಡಳಿತ ಉಪಮುಖ್ಯಮಂತ್ರಿಗಳು, ಸಚಿವರು, ಸಂಸದರು, ವಿಧಾನ ಪರಿಷತ್ ಸದಸ್ಯರ ವಿರುದ್ಧ ಜಿಲ್ಲಾಡಳಿತ ಶೀಘ್ರವೇ ಕ್ರಮಜರುಗಿಸಬೇಕೆಂದು ಮಾಹಿತಿ ಹಕ್ಕು ಕಾರ್ಯಕರ್ತ ಮೂಡಲಗಿಯ ಭೀಮಪ್ಪ ಗಡಾದ ಆಗ್ರಹಿಸಿದರು.
  ಕೋವಿಡ್ ವೇಳೆಯಲ್ಲಿ ಕಾರ್ಯಕ್ರಮ, ಸಭೆ ಸಮಾರಂಭಗಳಿಗೆ ಸರಕಾರ ನಿಷೇದ ಹೇರಿತ್ತು, ಆದರೆ, ಜಿಲ್ಲೆಯ ನಿಪ್ಪಾಣಿಯಲ್ಲಿ ಜುಲೈ ೧೧ರಂದು ಸರಕಾರಿ ಕಾರ್ಯಕ್ರಮ ಆಯೋಜಿಸಿದರು ನಿಕಟಪೂರ್ವ ಜಿಲ್ಲಾಧಿಕಾರಿಗಳ ಕ್ರಮಕೈಗೊಂಡಿಲ್ಲ ಎಂದು ದೂರಿದರು.
  ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಪಾಲ್ಗೊಳ್ಳುವ ಮೂಲಕ ಸರಕಾರ ನಿಯಮ ತಳ್ಳಿಹಾಕಿದರೆ. ಜನಸಾಮಾನ್ಯರಾದರೆ ದಂಡವಿಧಿಸಿ ಜೈಲಿಗೆ ಅಟ್ಟುತ್ತಿದ್ದಿರಿ, ಗಣ್ಯರ ಎಂಬ ಕಾರಣಕ್ಕೆ ಕೈಕಟ್ಟಿಕುಳಿತುಕೊಂಡಿದ್ದಿರಿ. ಎರಡ್ಮೂರು ದಿನಗಳಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವವರನ್ನು ಪರಿಶೀಲಿಸಿ, ಇವರ ವಿರುದ್ಧ ಕ್ರಮ ಆಗಬೇಕೆಂದರು.
  ಡಿಸಿಎA ಗೋವಿಂದ ಕಾರಜೋಳ, ಲಕ್ಷö್ಮಣ ಸವದಿ, ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಪಾಲ್ಗೊಂಡಿದ್ದರು. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದರೂ ಇದುವರೆಗೂ ಕ್ರಮ ಜರುಗಿಸಿಲ್ಲ. ಕಾನೂನು ಎಲ್ಲರಿಗೂ ಒಂದೇ ಎಂದು ಕಿಡಿಹಾಕಿದರು.
  ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನು ಕ್ರಮ ಆಗಬೇಕು. ಈ ಕುರಿತು ಜಿಲ್ಲಾಧಿಕಾರಿಯವರಿಗೂ ತಿಳಿಸಲಾಗಿತ್ತು. ಅವರು ಕಾನೂನು ಕ್ರಮದ ಭರವಸೆ ನೀಡಿದ್ದಾರೆ. ಇನ್ನೆರಡು ದಿನಗಳಲ್ಲಿ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಲಾಗುವುದು. ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆದು ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯಲಾಗುವುದು ಎಂದು ಎಚ್ಚರಿಕೆ ನೀಡಿದರು

  loading...