ಲಾಡ್ಜ್ನಲ್ಲಿ ನಡೆಯುತ್ತಿದೆ ಗ್ರಾ.ಪಂ ದಾಖಲೆಗಳ ಅಡಿಟ್

0
26

ಮಲ್ಲಿಕಾರ್ಜುನ ಹೊಸಮನಿ
ಹುನಗುಂದ: ಪಂಚಾಯತಿಯ ಮಹತ್ವದ ದಾಖಲೆಗಳನ್ನು ಸುರಕ್ಷಿತವಾಗಿ ಆ ಇಲಾಖೆಯ ಕೊಠಡಿಯಲ್ಲಿ ಇಲ್ಲವೆ ಮೇಲ್ದೆರ್ಜೆಯ ಇಲಾಖೆಯಲ್ಲಿ ಅಡಿಟ್ ಮಾಡಿಸಬೇಕಾದುದ್ದು ಸಂಬಂಧಿಸಿದ ಅಧಿಕಾರಿಗಳ ಕೆಲಸವಾಗಿರುತ್ತೆದೆ. ಆದರೆ ಇದಕ್ಕೆ ವಿರುದ್ಧವಾಗಿ ಅಮರವಾತಿ ಪಂಚಾಯತಿ ಕಾರ್ಯದರ್ಶಿಯೊಬ್ಬರು ಅಡಿಟ್ ಅಧಿಕಾರಿಗಳ ಜೊತೆಗೂಡಿ ಪಂಚಾಯತಿ ಎಲ್ಲ ಕಡಿತಗಳನ್ನು ಒತ್ತುಕೊಂಡು ನಗರದ ಪ್ರಮುಖ ಲಾಡ್ಜ್ ಒಂದರಲ್ಲಿ ಅಡಿಟ್ ಮಾಡಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಹೌದು ಪ್ರತಿ ವರ್ಷ ಸರ್ಕಾರದ ಅನುದಾನವನ್ನು ಸರಿಯಾಗಿ ಬಳಕೆಯಾಗಿದೇಯೋ ಇಲ್ಲವೋ ಎಂಬುವುದರ ಖರ್ಚು ವೆಚ್ಚಗಳನ್ನು ಜಿಲ್ಲಾ ಪಂಚಾಯತಿ ನೇಮಿಸಿದ ಅಡಿಟ್ ಅಧಿಕಾರಿಗಳ ಮುಂದೆ ಎಲ್ಲ ಕಡಿತವನ್ನು ತೋರಿಸಿ ಖರ್ಚು ವೆಚ್ಚದ ಮಾಹಿತಿಯನ್ನು ನೀಡಬೇಕಾಗಿರುತ್ತೆದೆ. ಆದರೆ ಇತ್ತಿÃಚಗೆ ಪಂಚಾಯತಿ ಯೋಜನೆಯಲ್ಲಿ ಮತ್ತು ಹಣಕಾಸಿನ ವ್ಯವಹಾರದಲ್ಲಿ ಗೋಲ್ ಮಾಲ್ ಮಾಡಿ ಅದನ್ನು ಮುಚ್ಚಿಕೊಳ್ಳಲು ಅಡಿಟ್ ಅಧಿಕಾರಿಗಳಿಗೆ ಹಣವನ್ನು ನೀಡಿ ಅವರನ್ನು ತಮ್ಮ ಕೈಗೊಂಬೆಯನ್ನಾಗಿಸಿಕೊಂಡು ಅಡಿಟ್ ಮಾಡಿಸುವುದು ಈ ಪಂಚಾಯತಿಯ ಪರಂಪರೆಯಾಗಿದೆ ಎಂದು ಸ್ವತಃ ಕಾರ್ಯದರ್ಶಿ ಹೇಳುತ್ತಿದ್ದಾರೆ. ಗ್ರಾ.ಪಂಯ ೧೪ ನೆಯ ಹಣಕಾಸು, ವರ್ಗ-೧, ಮಹಾತ್ಮಗಾಂಧಿ ಉದ್ಯೊÃಗ ಖಾತ್ರಿ ಯೋಜನೆ, ಶೇ.೩ ರ ಅಂಗವಿಕಲರ ಅನುದಾನ, ಶೇ.೨೫ ರಷ್ಟು ಎಸ್.ಸಿ.ಎಸ್.ಟಿ ಅನುದಾನ ಸೇರಿದಂತೆ ವಿವಿಧ ಯೋಜನೆಗಳಿಗೆ ಸಾಕಷ್ಟು ಅನುದಾನ ಬರುತ್ತಿದ್ದು ಅದನ್ನು ಸರಿಯಾಗಿ ಬಳಕೆ ಮಾಡದೇ ನಕಲಿ ಬಲ್ ಸೃಷ್ಠಿಸಿ ಅಡಿಟ್ ಅಧಿಕಾರಿಗಳ ಮುಂದೆ ನಕಲಿ ಬಿಲ್‌ಗಳನ್ನೆÃ ತೋರಿಸುತ್ತಿದ್ದರೂ ಪಂಚಾಯತಿಯ ಅಧಿಕಾರಿಗಳ ಬಿಡಿಕಾಸಿಗೆ ಆಸೆ ಪಟ್ಟು ಅಡಿಟ್ ಅಧಿಕಾರಿಗಳು ತಮ್ಮ ಜಾವಬ್ದಾರಿಯುತ ಕೆಲಸವನ್ನು ಮರೆತು ಅವರು ಹೇಳಿದ ಸ್ಥಳದಲ್ಲಿಯೇ ಕುಳಿತು ಅಡಿಟ್ ಮಾಡುತ್ತಿರುವ ವ್ಯವಸ್ಥೆ ಪಂಚಾಯತ ಇಲಾಖೆಯಲ್ಲಿ ಕಂಡು ಬರುತ್ತಿದೆ.

ಪಂಚಾಯತಿಯ ಕೊಠಡಿಯಲ್ಲಿಯೇ ಅಡಿಟ್ ಮಾಡಿದರೆ ಎಲ್ಲಿ ನಾವು ಮಾಡಿರುವ ಅವ್ಯವಹಾರದ ಹುನ್ನಾರು ಗ್ರಾ.ಪಂಗೆ ಬಂದ ಜನರಿಗೆ ಮತ್ತು ಇತರರಿಗೆ ತಿಳಿಯುತ್ತದೆಂದು ಯಾರಿಗೂ ತಿಳಿಯದಂತೆ ಕಾನೂನು ಬಾಹಿರಾಗಿ ಮಹತ್ವದ ದಾಖಲೆಯನ್ನು ಪಂಚಾಯತಿಯಿಂದ ಲಾಡ್ಜ್ಗೆ ತರುತ್ತಾರೆ ಎಂದರೆ ಈ ಇಲಾಖೆಯ ದಾಖಲೆಗಳಿಗೆ ಮತ್ತು ಕಡಿತಗಳಿಗೆ ಬೆಲೆನೇ ಇಲ್ಲದಂತಾಗಿದ್ದು.ಇಂತಹ ವ್ಯಕ್ತಿಗಳಿಗೆ ಹೇಳೋರು ಕೇಳೋರು ಇಲ್ಲವಾ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ.. ಗ್ರಾ.ಪಂಯಲ್ಲಿ ಕೊಠಡಿಯ ಸಮಸ್ಯೆಯಿದ್ದರೇ ತಾ.ಪಂಯಲ್ಲಿ ಈ ಕಾರ್ಯ ಮಾಡಬೇಕು ಎನ್ನುವ ನಿಯಮಗಳಿದ್ದರೂ ನಿಯಮವನ್ನು ಗಾಳಿಗೆ ತೂರಿ ಮನಸ್ಸಿಗೆ ಬಂದಂತೆ ಕಾರ್ಯದರ್ಶಿ ಎಸ್.ಜಿ ಹಿರೇಮಠ ನಡೆದುಕೊಂಡು ಇದು ಯಾವ ದೊಡ್ಡ ಕೆಲಸ ಅಡಿಟ್‌ನ್ನು ಎಲ್ಲಿ ಬೇಕಾದರೂ ಕುಳಿತು ಮಾಡಿಸಬಹುದು. ಪಂಚಾಯತಿಯ ನಿಯಮಗಳನ್ನು ಕೇವಲ ನೆಪಮಾತ್ರ ಅವುಗಳಂತೆ ನನಗಾಗಲಿ ಇಲ್ಲ ಪಂಚಾಯತಿಯ ಯಾವ ಅಧಿಕಾರಿಗಳಿಗಾಗಲಿ ನಡೆದುಕೊಳ್ಳಲು ಆಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಿದ್ದು.ಇನ್ನು ಸರ್ಕಾರ ದಾಖಲೆಯ ಖರ್ಚು ವೆಚ್ಚಗಳನ್ನು ಸರಿಯಾಗಿ ಪರಿಶೀಲಿಸಿ ಲೋಪದೋಷದಿಂದ ಕೂಡಿದ್ದರೇ ಅಡಿಟ್ ಮಾಡದೇ ಅದನ್ನು ತಿರಸ್ಕರಿಸಬೇಕಾದ ಅಡಿಟ್ ಅಧಿಕಾರಿಗಳಾದ ರಜಪೂತ ಮತ್ತು ಪತ್ತಾರ ನಡೆದುಕೊಂಡಿದ್ದು ಅಡಿಟ್ ಮಾಡುವುದರಲ್ಲಿಯೂ ಪಾರದರ್ಶಕತೆ ಇಲ್ಲ ಎನ್ನುವುದು ಮೇಲ್ನೊÃಟಕ್ಕೆ ತಿಳಿಯುತ್ತದೆ. ಈಗಲಾದರೂ ಪಂಚಾಯತಿ ಮೇಲಾಧಿಕಾರಿಗಳು ಎಚ್ಚೆÃತ್ತುಕೊಂಡು ಸರ್ಕಾರ ದಾಖಲೆಗಳನ್ನು ಹೊರಗಡೆಗೆ ತಂದು ಮನಸ್ಸಿಚ್ಛೆಯಂತೆ ನಡೆದುಕೊಂಡ ಕಾರ್ಯದರ್ಶಿ ಮತ್ತು ಬೇಜಾವಬ್ದಾರಿಯಿಂದ ವರ್ತಸಿದ ಅಡಿಟ್ ಅಧಿಕಾರಿಗಳ ಮೇಲೆ ಕಾನೂನು ಕ್ರಮಕ್ಕೆ ಮುಂದಾಗುತ್ತಾರೋ ಇಲ್ಲವೋ ಎಂಬುವುದನ್ನು ಕಾಯ್ದು ನೋಡಬೇಕಾಗಿದೆ.
============

ಪಂಚಾಯತಿ ಮಹತ್ವದ ದಾಖಲೆಗಳನ್ನು ಗ್ರಾಮ ಪಂಚಾಯತಿ ಇಲ್ಲವೆ ತಾ.ಪಂಯಲ್ಲಿ ಮಾತ್ರ ತಂದು ಅಡಿಟ್ ಮಾಡಿಸಬೇಕು ಆದರೆ ಲಾಡ್ಜ್ಗೆ ತಗೆದುಕೊಂಡು ಹೋಗಿರುವುದು ಕಾನೂನು ಬಾಹಿರ.
ಪದ್ಮಾ ಕುಂಬಾರ

ಕಾರ್ಯನಿರ್ವಹಕ ಅಧಿಕಾರಿ
ತಾಪಂ ಹುನಗುಂದ.

============
ಅಡಿಟ್ ಮಾಡಿಸುತ್ತಿರುವುದು ನನಗೆ ಗೊತ್ತಿಲ್ಲ ಅದನ್ನು ಯಾರು ಮಾಡಿಸುತ್ತಿದ್ದರೇ ಎಂಬುವುದು ಕೂಡಾ ನನಗೆ ಗೊತ್ತಿಲ್ಲ, ನಾನು ಕೇಳಿ ಹೇಳುತ್ತೆÃನೆ. ನಿಮ್ಮ ಕಾರ್ಯದರ್ಶಿ ಅಡಿಟ್ ಲಾಡ್ಜ್ನಲ್ಲಿ ಮಾಡಿಸುತ್ತಿರುವುದು ಸರಿನೋ ತಪ್ಪೊÃ ಎಂದು ಕೇಳಿದರೆ ಎರಡು ದಿನ ಬಿಟ್ಟು ಭೇಟಿಯಾಗಿ ಮುಗಿಸುತ್ತೆÃನೆ.

ಎಂ.ಎ.ದಖ್ಖನಿ

loading...