ಲಿಂಗನಮಠದ ಮೂಲಕ ಬೆಳಗಾವಿ ಜಿಲ್ಲೆ ಪ್ರವೇಶಿಸಿದ ಬಿಜೆಪಿಯ ಪರಿವರ್ತನಾ ರ್ಯಾಲಿ

0
65

ಕನ್ನಡಮ್ಮ ಸುದ್ದಿ-ಖಾನಾಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಪರಿವರ್ತನಾ ರ್ಯಾಲಿ ಗುರುವಾರ ಸಂಜೆ ತಾಲೂಕಿನ ಲಿಂಗನಮಠದ ಮೂಲಕ ಬೆಳಗಾವಿ ಜಿಲ್ಲೆ ಪ್ರವೇಶಿಸಿತು. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದಿಂದ ಬೀಳ್ಕೊಟ್ಟ ಯಾತ್ರೆ ಅಳ್ನಾವರ ಮೂಲಕ ಲಿಂಗನಮಠ ಗ್ರಾಮವನ್ನು ಪ್ರವೇಶಿಸಿದ ಸಂದರ್ಭದಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಪಕ್ಷದ ಜಿಲ್ಲಾಧ್ಯಕ್ಷ ಡಾ.ವಿ.ಐ ಪಾಟೀಲ, ಸಂಸದ ಸುರೇಶ ಅಂಗಡಿ, ಮಾಜಿ ಶಾಸಕ ಪ್ರಹ್ಲಾದ ರೇಮಾಣಿ ಸೇರಿದಂತೆ ಜಿಲ್ಲೆಯ ಶಾಸಕರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಸಂಸದೆ ಶೋಭಾ ಕರಂದ್ಲಾಜೆ, ಸಂಸದ ಪ್ರಹ್ಲಾದ ಜೋಶಿ, ಮಹಾಂತೇಶ ಕವಟಗಿಮಠ, ಸಂಜಯ ಪಾಟೀಲ, ಹಣಮಂತ ನಿರಾಣಿ, ಉಮೇಶ ಕತ್ತಿ, ಅಭಯ ಪಾಟೀಲ, ಶಂಕರಗೌಡ ಪಾಟೀಲ, ಅಶ್ವಥ ನಾರಾಯಣ, ಈರಣ್ಣ ಕಡಾಡಿ, ಪ್ರಮೋದ ಕೊಚೇರಿ, ವಿಠ್ಠಲ ಪಾಟೀಲ, ಸಂಜಯ ಕುಬಲ, ಮಂಜುಳಾ ಕಾಪಸೆ, ವಲ್ಲಭ ಗುಣಾಜಿ, ಸುಭಾಸ ಗುಳಶೆಟ್ಟಿ, ಬಾಬಣ್ಣ ಪಾಟೀಲ, ಬಾಬುರಾವ್ ದೇಸಾಯಿ, ಧನಶ್ರೀ ಸರ್‍ದೇಸಾಯಿ, ವಿಠ್ಠಲ ಹಲಗೇಕರ, ಮಲ್ಲಪ್ಪ ಮಾರಿಹಾಳ, ಅಪ್ಪಯ್ಯ ಕೋಡೊಳಿ, ಸಂಜು ಕಂಚಿ ಮತ್ತಿತರರು ಇದ್ದರು.

loading...