ಲೋಕಸಭಾ ಚುನಾವಣೆಗೆ ಶಿವಕಾಂತ ಸಿದ್ನಾಳ ಸೂಕ್ತ: ಎಸ್.ಬಿ ಸಿದ್ನಾಳ

0
20

ಎಂಪಿ‌ ಚುನಾವಣೆಗೆ ಶಿವಕಾಂತ ಸಿದ್ನಾಳ ಸೂಕ್ತ: ಎಸ್.ಬಿ ಸಿದ್ನಾ

ಕನ್ನಡಮ್ಮ ಸುದ್ದಿ- ಬೆಳಗಾವಿ: ಮುಂಬರುವ‌ ಎಂಪಿ‌ ಚುನಾವಣೆಗೆ ನನ್ನ ಮಗ ಶಿವಕಾಂತ ಸ್ಪರ್ಧೆ ಮಾಡಿದರೆ‌ ಸೂಕ್ತ ಎಂದು ಮಾಜಿ ಸಂಸದ ಎಸ್.ಬಿ‌.ಸಿ‌ ಸಿದ್ನಾಳ ಹೇಳಿದರು.

ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಇತ್ತಿಚೀನ ರಾಜಕೀಯದಲ್ಲಿ ಅನೇಕ‌ ಬದಲಾವಣೆಗಳು ಆಗುತ್ತಿವೆ.ದೇವರಾಜ ಅರಸು, ರಾಮಕೃಷ್ಣ ಹೆಗಡೆ ಇದ್ದಂತಹ ರಾಜಕೀಯ ವ್ಯವಸ್ಥೆ ಈಗ ಇಲ್ಲ. ರಾಜಕೀಯದಲ್ಲೆ ದೇಶಾಭಿಮಾನ‌ ಇಲ್ಲದೆ ಜಾತಿ ಜಾತಿ ಮಧ್ಯ ದೇಶವನ್ನೇ‌ ಮರೆತಿದ್ದಾರೆ. ರಾಜಕೀಯ ಇತ್ತಿಚೀನ ಬೆಳವಣಿಗೆ ನೋಡಿದರೆ ಮೌಲ್ಯವನ್ನು‌ ಕಳೆದುಕೊಳ್ಳುತ್ತಿವೆ ಎಂದು‌ ವಿಶಾದ ವ್ಯಕ್ತ ಪಡಿಸಿದರು.
ಪಂಚಾಯತಿಯಿಂದ‌ ಹಿಡಿದು ಲೋಕಸಭಾ ಚುನಾವಣೆ ವರೆಗೆ ಅಭ್ಯರ್ಥಿಗಳ ಆಯ್ಕೆಯನ್ನು ವಿದ್ಯಾರ್ಥಿ ಸಮಾಜದ ಕಾಳಜಿ ಇರುವ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕಾಗಿದೆ ಎಂದರು.

ಇನ್ನೂ ಮುಂಬರುವ ಲೋಕಸಭಾ ಚುನಾವಣೆಗೆ ನನ್ನ ಮಗ ಶಿವಕಾಂತ‌ ಶಿದ್ನಾಳ ಸೂಕ್ತವೆಂದು. ಪಕ್ಷೇತರ ನಿಲ್ಲುವುದಿಲ್ಲ. ಕಾಂಗ್ರೆಸ್ ಪಕ್ಷದಿಂದಲೇ ಚುನಾವಣೆ ನಿಲ್ಲುತ್ತಾರೆ ಎಂದು‌ ತಿಳಿಸಿದರು.

ರಾಜಕಾರಣಿಗಳ ಹಣೆ ಬರಹ‌ ಸರ್ಕಾರಿ ಕಚೇರಿಗಳ ಅಧಿಕಾರಿಗಳು ಬರೆಯುತ್ತಾರೆ. ಅಧಿಕಾರಿಗಳಿಗೂ ಸಹ ಒಂದು ಸಮಾಜದ ಜವಾಬ್ದಾರಿ ಇದೆ. ಈಗಿನ ರಾಜಕಾರಣಿ ಗಳಿಗೆ ಜೈಲುವೆಂಬುವುದು ಸೋದರ ಮಾವನ ಮನೆಯಾಗಿದೆ ಎಂದು ವಿಶಾದ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ದಿಗ್ವಿಜಯ ಸೇರಿದಂತೆ ಇತರರು ಇದ್ದರು.

loading...