ಲೋಕಸಭಾ ಚುನಾವಣೆ : ಕೊಪ್ಪಳ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆಗೆ ಒತ್ತಾಯ

0
10

ಕನ್ನಡಮ್ಮ ಸುದ್ದಿ-ಕೊಪ್ಪಳ: ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಸ್ಪರ್ಧಿಸುವುಂತೆ ಅವರಲ್ಲಿ ಮನವಿ ಮಾಡಿ ಒತ್ತಾಯಿಸಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಈ ಕ್ಷೇತ್ರದಿಂದ ಸಿದ್ದರಾಮಯ್ಯ ಅವರು ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋತಿದ್ದರು, ಈ ಕ್ಷೇತ್ರದಿಂದ ಅವರು ಸ್ಪಧಿಸಿದರೆ ನಾವೇಲ್ಲರೂ ಹೆಚ್ಚು ಬಹುಮತದಿಂದ ಗೆಲ್ಲಿಸಿಕೊಡುತ್ತೇವೆ, ಅದಕ್ಕಾಗಿ ಈಗಾಗಲೇ ನಾಲ್ಕೈದು ಬಾರಿ ಅವರಲ್ಲಿ ಮನವಿ ಮಾಡಿದ್ದು, ಈ ಬಗ್ಗೆ ಒತ್ತಾಯ ಮಾಡಿದ್ದೇವೆ ಎಂದರು. ಒಂದು ವೇಳೆ ಅವರು ಸ್ಪರ್ಧಿಸಿದ್ದರೆ ನಮ್ಮಲ್ಲಿ ಯಾರಿಗೆ ಟಿಕೇಟ್ ನೀಡಿದರು ಪಕ್ಷವನ್ನು ಸಂಘಟಿಸಿ ಗೆಲ್ಲುವಿಗೆ ದುಡಿಯುವದಾಗಿ ತಿಳಿಸಿದ ಅವರು ಜಿಲ್ಲೆ ಹಾಗೂ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದ್ದು, ಕಾರ್ಯಕರ್ತರನ್ನು ಚುನಾವಣೆಗೆ ಸಿದ್ದಗೊಳಿಸಲಾಗುತ್ತಿದ್ದು, ಎಲ್ಲ ನಾಯಕರು ಒಗ್ಗಟ್ಟಿನಿಂದ ಈ ಚುನಾವಣೆಯನ್ನು ಎದುರಿಸಿ ಮತ್ತೇ ಕಾಂಗ್ರೆಸ್ ಭದ್ರಕೋಟೆಯನ್ನಾಗಿ ಮಾಡುವದಾಗಿ ಹೇಳಿದರು. ವಿಜಯಪುರ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಚಿಂತನೆ : ಮಾಜಿ ಸಚಿವರು ಹಾಗೂ ಹಾಲಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಶಿವರಾಜ ತಂಗಡಗಿಯವರು ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುಂತೆ ಒತ್ತಡ ಇರುವ ಹಿನ್ನಲೆಯಲ್ಲಿ ಹೊಸವರ್ಷದ ಸಂಕ್ರಮಣದ ನಂತರ ನಿರ್ಧಾರ ತೆಗೆದುಕೊಳ್ಳವುದಾಗಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಮೂಲ ವಿಜಯಪುರ ಜಿಲ್ಲೆಯವನಾದ ನನಗೆ ಅಲ್ಲಿನ ಸಂಪರ್ಕ, ಕಾರ್ಯಕರ್ತರು ಸ್ಪರ್ಧೆಗೆ ಒತ್ತಡಹೇರಿದ್ದು, ಆದರೆ ನಾನು ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ, ಸ್ಪರ್ಧಿಸುವ ಕುರಿತು ಸಂಕ್ರಮಣದ ನಂತರ ನಿರ್ಧರಿಸುವದಾಗಿ ಹೇಳಿದ ಅವರು ಪಕ್ಷದ ನಿರ್ಧಾರ, ಹೈಕಮಾಂಡ್ ತಿರ್ಮಾನವೇ ಅಂತಿಮ ಅಂದರು. ಮೈತ್ರಿ ಸರ್ಕಾರ ಸುಭದ್ರ: ಮೈತ್ರಿ ಸರ್ಕಾರ ಸುಭದ್ರವಾಗಿದ್ದು, ಸಿದ್ದರಮಾಯ್ಯ, ಪರಮೇಶ್ವರ ಅವರ ಮಧ್ಯೆ ಯಾವುದೇ ಭಿನ್ನಾಭಿಪ್ರಯಗಳು ಇಲ್ಲ ಇದೇಲ್ಲಾ ಮಾದ್ಯಮದ ಸುದ್ದಿ ಮಾತ್ರ, ಸರ್ಕಾರವನ್ನು ಅತಂತ್ರಗೊಳಿಸಲು ಬಿಜೆಪಿ ಹುನ್ನಾರ ನಡೆಸುತ್ತಿದ್ದರೂ ಅದರಿಂದ ಯಾವುದೇ ಪರಿಣಾಮ ಬಿರುವದಿಲ್ಲ, ಹಿಂದಿನ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳನ್ನು ಮೈತ್ರಿ ಸರ್ಕಾರ ಮುಂದುವರೆಸಿದ್ದು, ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.

loading...