ವಿಕಲಚೇತನರ ಕೈ ಸೇರದ ವಿವಿಧ ರೀತಿಯ ಸಾದನ-ಸಾಮಗ್ರಿಗಳು

0
76

ಕೆ ಎಮ್‌ ಪಾಟೀಲ.
ಬೆಳಗಾವಿ:
ಹೊಸ ವರ್ಷ ಬಂದರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಲಕರಣೆಗಳು ಕೈಗೆ ಎಟಕದೇ ಇರುವುದರಿಂದ ಅಂಗವಿಕಲರು ನಿರಾಶೆದಾಯರಾಗಿದ್ದಾರೆ.
ಪ್ರತಿ ವರ್ಷ ಇಲಾಖೆಯು ಅಂಗವಿಕಲ ದಿನ ಡಿ. 3 ರಂದು ಆಯ್ದ ಅಂಗವಿಕಲರಿಗೆ 144 ದ್ವಿ ಚಕ್ರವಾಹನಗಳು, ಟೈಸಿಕಲ್‌, ವಿಲ್‌ ಚೇರ್‌, ಕರ್ಚರ್ಸ್‌, ಶ್ರವಣೋಪಕರಣಗಳು ಸೇರಿದಂತೆ ಮತ್ತಿತರ ಸಾದನ- ಸಲಕರಣೆಗಳನ್ನು ನಿಡುತ್ತಿತ್ತು. ಅಂಗವಿಕಲರು ಇವುಗಳ ನೇರವು ಪಡೆದು ಬದುಕಿನ ಬಂಡಿಯನ್ನು ಸಂಕಷ್ಟದಲ್ಲಿಯೇ ಸಾಗಿಸುತ್ತಿದ್ದರು.
ಈ ವರ್ಷ ಸಲಕರಣೆಗಳು ಸಿಗಬಹುದೆಂದು ಆಶಾ ಮನೋಭಾವನೆಯನ್ನು ಇಟ್ಟುಕೊಂಡ್ಡಿದ್ದರು. ಆದರೆ, ನವೆಂಬರ್‌ ತಿಂಗಳಿನಲ್ಲಿ ಇಲಾಖೆ ಅಧಿಕಾರಿಗಳು ಅಧಿವೇಶನದ ಕೆಲಸದಲ್ಲಿ ತೊಡಗಿಕೊಂಡಿದ್ದರಿಂದ ಸಲಕರಣೆಗಳ ಖರೀದಿಗೆ ಟೆಂಡರ್‌ ಪೂರ್ಣಗೊಂಡಿಲ್ಲ ಈ ಕಾರಣದಿಂದ ವಿಕಲಚೇತನರಿಗೆ ಸಲಕರಣೆಗಳನ್ನು ನೀಡಲು ತಡವಾಗಿದೆ. ಹೀಗಾಗಿ ಸಲಕರಣೆಗಳು ವಿತರಣೆ ವಿಳಂಬವಾಗಿದ್ದು ಅವುಗಳನ್ನು ಪಡೆಯುವ ಉತ್ಸಾಹದಲ್ಲಿ ಇದ್ದ ಅಂಗವಿಕಲರಿಗೆ ನಿರಾಶೆ ಮಾಡಿದಂತ್ತಾಗಿದೆ.
ಇನ್ನು ಹೊಸ ವರ್ಷ ಹೊಸ್ತಿಲಲ್ಲಿರು ಅವರು ತಮಗೆ ಉಚಿತವಾಗಿ ಸಾಮಗ್ರಿಳನ್ನು ನೀಡುತ್ತಾರೆ ಎಂದು ಕೆಲ ಅಂಗವಿಕಲರು ತಮ್ಮ ಸಂಬಂದಿಕರ ಮನೆಗೆ ಹೋಗಬೇಕು ಎಂಬ ವಿಚಾರದಲ್ಲಿ ಕಾದು ಕುಂತಿರುವವರ ಮೊಗದಲ್ಲಿ ನಿರುತ್ಸಾಹದ ಭಾವ ಮೂಡಿರುವುದು ಎದ್ದು ಕಾಣುತ್ತಿದೆ.
ಪ್ರಸಕ್ತ ಸಾಲಿನಲ್ಲಿ ಆಯಾ ತಾಲೂಕಿಗೆ ಸಂಬಂದಿಸಿದ ಅಂಗವಿಕಲರ ಅಂಕಿ ಸಂಖ್ಯೆಗಳಿಗುಣವಾಗಿ ಸರ್ಕಾರ ನಿರ್ಧರಿಸಿ ಅನುದಾನ ಬಿಡುಗಡೆ ಮಾಡುತ್ತದೆ. ಈ ನಿಟ್ಟಿನಲ್ಲಿ ಅದರ ಅನುಗುಣವಾಗಿ ನಮಗೆ ಅನುದಾನ ಏಷ್ಟು ಪ್ರಮಾಣದ ಹಣ ಬರುತ್ತದೆಯೋ ಆ ರೀತಿಯಲ್ಲಿ ಸಲಕರಣೆಗಳನ್ನು ನೀಡುತ್ತಾಬರುತ್ತೆವೆ. ಈ ವರ್ಷದ ಮಾರ್ಚ ತಿಂಗಳ ವರೆಗೂ ನಾವು ಅಂಗವಿಕಲರ ಬೇಡಿಕೆಗಳ ಅಣುಗುಣವಾಗಿ ಸಾದನ ಸಲಕರಣೆಗಳನ್ನು ನೀಡುತ್ತೆವೆ ಎಂದು ಅಂಗವಿಕಲ ವಿಭಾಗದ ಸಿಬ್ಬಂದಿ ಕನ್ನಡಮ್ಮ ಪತ್ರಿಕೆಗೆ ಮಾಹಿತಿ ನೀಡಿದರು.
ಬಾಕ್ಸ್‌
ಅಂಗವಿಕಲಕರ ಸಾಮಗ್ರಿಗಳನ್ನು ಆಯಾ ಅಂಗವಿಕಲರ ಜನ ಸಂಖ್ಯೆ ಆದಾರದ ಮೇಲೆ ನೀಡಲಾಗುತ್ತದೆ. ಪ್ರಸಕ್ತ ವರ್ಷದಲ್ಲಿ ಈಗಾಗಲೇ ಡಿ. 3 ರಂದು 6 ಟ್ರೈಸಿಕಲ್‌ ವಿತರಣೆ ಮಾಡಿದ್ದೆವೆ. ಇನ್ನೂಳಿದ ಸೌಲಭ್ಯ ಪಡೆಯುವಂಥ ಅಭ್ಯರ್ಥಿಗಳಿಗೆ ನಾವು ಸಧ್ಯದಲ್ಲಿಯೇ ಇತರ ಸಾಮಗ್ರಿಗಳನ್ನು ನೀಡುತ್ತೆವೆ. ಇನ್ನು ನಮ್ಮ ಇಲಾಖೆಗೆ ರೋಟರಿ ಕ್ಲಬ್‌, ರೆಡ್‌ಕ್ರಾಸ್‌ ಸಂಸ್ಥೆ ಸೇರಿದಂತೆ ಇತರ ಸಂಸ್ಥೆಗಳಿಂದ ಆರ್ಥಿಕ ನೇರವು ಪಡೆದು ಅಂಗವಿಕಲರಿಗೆ ಸಾಮಗ್ರಿಗಳನ್ನು ನೀಡುತ್ತೆವೆ.
|ರಾಮದೇವ್‌ ಬಿಲಕರ್‌.
ಸಿಬ್ಬಂದಿ, ಅಂಗವಿಕಲರ ಕಲ್ಯಾಣ ವಿಭಾಗ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಳಗಾವಿ

ಬಾಕ್ಸ್‌…
ಬೆಳಗಾವಿ ಜಿಲ್ಲೆಯಲ್ಲಿರುವ ಅಂಗವಿಕಲರು
ದೈಹಿಕ ನ್ಯೂನತೆಯುಳ್ಳವರು 28,578
ಅಂಧರು 4,568
ಶ್ರವಣ ದೋಷವುಳ್ಳವರು 4,913
ಬುದ್ಧಿಮಾಂದ್ಯರು 4,874
ಕುಷ್ಠರೋಗ ನಿವಾರಕರು 298
ಬಹುವಿಧ ಅಂಗವಿಕಲರು 487
ಮಾನಸಿಕ ಅಸ್ವಸ್ಥರು 700
ಒಟ್ಟು 44,418

ಬಾಕ್ಸ್‌
ಕಳೆದ ವರ್ಷ ನಾನು ದ್ವಿಚಕ್ರ ವಾಹನ ನೀಡುತ್ತಾರೆ ಎಂದು ಅರ್ಜಿ ಸಲ್ಲಿಸಿದ್ದೆ ಯಾವುದೇ ಕಾರಣದಿಂದ ನನಗೆ ನೀಡಿರಲಿಲ್ಲ ಆದರೆ, ಈ ವರ್ಷವಾದರು ತೆಗೆದುಕೊಳ್ಳೊಣವೆಂದು ಅರ್ಜಿ ಸಲ್ಲಿಸಿದ್ದೆನೆ. ಅದು ಒಂದು ತಿಂಗಳಾದರು ಇನ್ನು ಯಾವುದೇ ಆಯ್ಕೆ ಪಟ್ಟಿಗಳು ಪ್ರಕಟಗೊಂಡಿದೆ ಇರುವುದು ಬೆಸರ ಉಂಟುಮಾಡಿದೆ.
ಹೆಸರು ಹೆಳಲಿಚ್ಚಿಸದ ಅಭ್ಯರ್ಥಿ

loading...

LEAVE A REPLY

Please enter your comment!
Please enter your name here