ವಿದೇಶದಲ್ಲಿ ಹಾರಾಡಲಿದೆ ಬೆಳಗಾವಿಯ ರಂಗು ರಂಗಿನ ಗಾಳಿಪಟ

0
236


ಕನ್ನಡಮ್ಮ ಸುದ್ದಿ
ಬೆಳಗಾವಿ:25 ಪ್ರಸಿದ್ಧ ಕುಂದಾಗೆ ಹೆಸರುವಾಸಿಯಾಗಿರುವ ಗಡಿನಾಡ ಬೆಳಗಾವಿಯಲ್ಲಿ ತೆರೆಮರೆಯಲ್ಲಿ ಸಂದೇಶ ಕಡ್ಡಿ ಅವರು ನಿರ್ಮಾಣ ಮಾಡಿದ ರಂಗು ರಂಗಿನ ಗಾಳಿಪಟ ಇಂಡೋನೇಷಿಯಾದ ಬಾಲಿಯ ಮರ್ತಸಾಲಿ ಬಿಚ್‍ನಲ್ಲಿ ಅಗಸ್ಟ್ 3 ರಿಂದ 6 ವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಪಂತಗೋತ್ಸವಕ್ಕೆ ಸಜ್ಜಾಗಿದ್ದಾರೆ.
ಮೂಲತಃ ಬೆಳಗಾವಿಯವರಾಗಿರುವ ಸಂದೇಶ ಕಡ್ಡಿ ಅವರು ವಿವಿಧ ಬಗೆಯ ಆಕಾರದ ಪಟಗಳನ್ನು ಸಿದ್ಧಪಡೆಸಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪತಂಗೋತ್ಸವದಲ್ಲಿ ಇವರು ತಯಾರಿಸಿದ ಪಟಗಳು ಹಕ್ಕಿಯಂತೆ ಹಾರಾಡಿ ಎಲ್ಲರ ಮನಸಿಗೆ ಮದ ನೀಡುವುದಲ್ಲದೆ. ಇವರು ನಿರ್ಮಾಣ ಮಾಡಿರುವ ಹಕ್ಕಿಯ ಪಟಕ್ಕೆ ಮನಸೋತ್ತಿದ್ದಾರೆ. ಇದರ ಫಲವಾಗಿ ಸಂದೇಶ ಅವರಿಗೆ ಅನೇಕ ಬಾರಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪತಂಗೋತ್ಸವದಲ್ಲಿ ಪ್ರಶಸ್ತಿ ಪಡೆದು ಮಿಂಚಿದ್ದಾರೆ.
ಇವರು ನಿರ್ಮಾಣ ಮಾಡಿರುವ ಪಟಗಳನ್ನು ಆಗಸದಲ್ಲಿ ಬಣ್ಣ ಬಣ್ಣದ ಹಕ್ಕಿಗಳಂತೆ ಗಾಳಪಟದ ಚಿತ್ತಾರ ಆಕಾಶದಲ್ಲಿ ಪತಂಗ ಪ್ರೀಯರು ಕಣ್ಣೇತ್ತಿ ನೋಡಿದರೇ ಬೇರೆ ಲೋಕಕ್ಕೆ ತೆರಳಿದ್ದೇವೆ ಎನ್ನನುವ ಭಾವ ಮೂಡುತ್ತದೆ. ಇವರ ಗಾಳಿಪಟದ ಹಾರಾಟವನ್ನು ಕತ್ತು ನೋಯುವ ಅರಿವು ಬಾರದ ಹಾಗೆ ನೋಡುವ ಆ ನೋಟ ಅವಿಸ್ಮರಣೀಯವಾಗಿರುತ್ತದೆ. ಸಾಕಷ್ಟು ಬಾರಿ ಸಂದೇಶ ಕಡ್ಡಿ ಅವರು ಮಕ್ಕಳು, ಪತಂಗ ಪ್ರೀಯರಿಗೆ ಪಟಗಳ ಹಾರಾಟದ ಬಗ್ಗೆ ವಿಶೇಷ ಕಾರ್ಯಾಗಾರ ನಡೆಸಿ ಜನರ ಮನಸು ಗೆದ್ದಿದ್ದಾರೆ.
ಸಂದೇಶ ಅವರು ತಯಾರಿಸುವ ಪಟಗಳು ಆಕಾಶದಲ್ಲಿ ಹಾರಾಡುತ್ತಿದ್ದರೇ ನೋಡುಗರ ಹುಬ್ಬೇರಿಸುತ್ತದೆ. ವಿದೇಶದ ಇಂಡೋನೇಷಿಯಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಪತಂಗೋತ್ಸವದಲ್ಲಿ ಇವರು ನಿರ್ಮಾಣ ಮಾಡಿದ ಪತಂಗಗಳು ಎಲ್ಲರ ಮನ ಗೆದ್ದು ಬೆಳಗಾವಿಗೆ ಮತ್ತೊಂದು ಪ್ರಶಸ್ತಿ ತರಲಿ ಎನ್ನುವುದೇ ಎಲ್ಲರ ಆಶಯವಾಗಿದೆ.

loading...