ವಿದ್ಯಾರ್ಥಿಗಳನ್ನು ಸನ್ಮಾರ್ಗದತ್ತ ಕರೆದೊಯ್ಯವ ಕೆಲಸ ಶಿಕ್ಷಕರ ಮೇಲಿದೆ.

0
44
ಕಿತ್ತೂರು ತಾಲೂಕಿನ ಕತ್ರಿದಡ್ಡಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಡ ಶಾಲೆಯ ದಶಮಾನೋತ್ಸವ ಹಾಗೂ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡುತ್ತಿರುವ ಶಿಕ್ಷಕ ಎಮ್.ಪಿ.ಕದಂ.
ಕಿತ್ತೂರು ತಾಲೂಕಿನ ಕತ್ರಿದಡ್ಡಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಡ ಶಾಲೆಯ ದಶಮಾನೋತ್ಸವ ಹಾಗೂ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡುತ್ತಿರುವ ಶಿಕ್ಷಕ ಎಮ್.ಪಿ.ಕದಂ.

ಕನ್ನಡಮ್ಮ ಸುದ್ದಿ ಚನ್ನಮ್ಮನ ಕಿತ್ತೂರು.
ಸರ್ಕಾರಿ ಶಾಲೆಯೊಂದು ರಾಜ್ಯಮಟ್ಟದಲ್ಲಿ ಹೆಸರುವಾಸಿಯಾಗಬೇಕಾದರೇ ಶಿಕ್ಷಕರ ಶ್ರಮ ಹಾಗೂ ಗುಣಮಟ್ಟದ ಭೋಧನೆಯೇ ಕಾರಣವೆಂದು ಶಿಕ್ಷಕ ಎಮ್.ಪಿ.ಕದಂ ಹೇಳಿದರು.

ತಾಲೂಕಿನ ಕತ್ರಿದಡ್ಡಿಯ ಸರಕಾರಿ ಪ್ರೌಢ ಶಾಲೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಅತಿಥಿ ನುಡಿಗಳನ್ನಾಡಿದ ಅವರು, ವಿದ್ಯಾರ್ಥಿಗಳನ್ನು ಸನ್ಮಾರ್ಗದತ್ತ ಕರೆದೊಯ್ಯವ ಕೆಲಸವು ಶಿಕ್ಷಕರ ಮೇಲಿರುತ್ತದೆ. ಅಷ್ಟೆ ಅಲ್ಲದೆ ದೇಶಕ್ಕೆ ಒಳ್ಳೆಯ ಪ್ರಜೆಯನ್ನು ರೂಪಿಸಿ ಕೊಡುಗೆ ನೀಡುವ ಶಿಕ್ಷಕರು ಬೇಧ ಭಾವ ಇಲ್ಲದೆ ವಿದ್ಯೆಯನ್ನು ಧಾರೆ ಎರೆಯುತ್ತಾರೆ, ಎಂದ ಅವರು, ಈ ಸ್ಪರ್ದಾತ್ಮಕ ಯುಗದಲ್ಲಿಯೂ ಎಲ್ಲ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಯು ಯಾವುದಕ್ಕೂ ಕಮ್ಮಿ ಇಲ್ಲ ಎಂದು ತೋರ್ಪಡಿಸಿರುವ ಹಿರಿಮೆ ಈ ಶಾಲೆಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ವಿದ್ಯಾರ್ಥಿಗಳಲ್ಲಿ ಸ್ಪರ್ದಾತ್ಮಕ ಮನೋಭಾವನೆ ಬೆಳೆಗಿಸಿ, ಸದಾ ಒಂದಿಲ್ಲೊಂದು ಒಳ್ಳೆಯ ಚಟುವಟಿಕೆಯಿಂದ ಈ ಶಾಲೆಯ ವಿದ್ಯಾರ್ಥಿಗಳು ಕೂಡಿರುತ್ತಾರೆ. ಇದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವದ ವಿಕಸನ ಹೊಂದುತ್ತದೆ ಎಂದ ಅವರು, ಶಾಲಾ ಶಿಕ್ಷಕ ವೃಂದವನ್ನು ಅಭಿನಂದಿಸಿದರು.
ನಿವೃತ್ತ ಮುಖ್ಯೋಪಾಧ್ಯಾಯ ಸಿ.ಎಂ.ಪಾಗಾದ, ಶಿಕ್ಷಕರಾದ ಎ.ಎಸ್.ಇಂಗಳಗಿ, ಜಿ.ಪಿ.ಉಮರ್ಜಿ, ಎಸ್.ಎಮ್. ಹಿರೇಮಠರನ್ನು ಸನ್ಮಾನಿಸಲಾಯಿತು.
ಇದಕ್ಕೂ ಮೊದಲು “ಶಾಲೆ ನಡೆದು ಬಂದ ಆ 10 ವಸಂತಗಳು” ಎಂಬ ಸಿ.ಡಿ.ಯನ್ನು ತಾಪಂ ಸದಸ್ಯೆ ಮಹಾದೇವಿ ಬೇಕವಾಡಕರ ಬಿಡುಗಡೆಗೊಳಿಸಿದರೆ, “ಚಂದನ” ಎಂಬ ವಿಶೇಷ ಹಸ್ತಪ್ರತಿಯನ್ನು ಭೂದಾನ ಮಾಡಿದ ನಿಪ್ಪಾಣಿಯ ವಿಜಯಾ ಮಗದುಂ ಬಿಡುಗಡೆಗೊಳಿಸಿದರು.
ಜಿ.ಪಂ.ಸದಸ್ಯ ರಾಧಾ ಶಾಮ ಕಾದ್ರೊಳ್ಳಿ, ಗ್ರಾಪಂ ಅಧ್ಯಕ್ಷೆ ಸಾಯಿರಾಭಾನು ತಾನೇಖಾನ, ಮಾಜಿ ತಾಪಂ ಸದಸ್ಯೆ ಸರಸ್ವತಿ ಹೈಬತ್ತಿ, ಹೊಳೆಪ್ಪ ಪಾಟೀಲ, ವಿಠ್ಠಲ ಹಟ್ಟಿಹೊಳಿ, ಶಿವಾಜಿ ವಾಡಕರ, ನಾಗಪ್ಪ ಅಲಸನ್ನವರ, ಶಿಕ್ಷಕ ಮಹೇಶ ಚನ್ನಂಗಿ, ಸೇರಿದಂತೆ ಇನ್ನಿತರರು ಹಾಗೂ ಸಾರ್ವಜನಿಕರು, ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ಸದಸ್ಯರು ಹಾಜರಿದ್ದರು, ಶಿಕ್ಷಕ ಆರ್.ಎಲ್.ಪಾಟೀಲ ಸ್ವಾಗತಿಸಿದರು.

loading...