ವಿದ್ಯಾರ್ಥಿಗಳಿಗಾಗಿ ಉದ್ಯೋಗ ಮಾಹಿತಿ ಕಾರ್ಯಾಗಾರ

0
29

ಕನ್ನಡಮ್ಮ ಸುದ್ದಿ-ಹಿರೇಕೆರೂರು: ಪಟ್ಟಣದ ಬಿ.ಆರ್‌.ತಂಬಾಕದ ಕಲಾ, ವಾಣಿಜ್ಯ & ವಿಜ್ಙಾನ ಮಹಾವಿದ್ಯಾಲಯದಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಉದ್ಯೋಗ ಕೋಶದ ಅಡಿಯಲ್ಲಿ ವಿದ್ಯಾರ್ಥಿಗಳಿಗಾಗಿ ಉದ್ಯೋಗ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಉದ್ಯೋಗ ಕೋಶದ ಸಂಚಾಲಕರಾದ ಪ್ರೊ. ಪ್ರದೀಪ್‌ ಕುರ್ಡೆಕರ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ದಿನಗಳಲ್ಲಿ ವಿಧ್ಯಾರ್ಥಿಗಳಿಗೆ ಉದ್ಯೋಗಕ್ಕೆ ಬೇಕಾದ ಮಾಹಿತಿಯ ಕೊರತೆಯಿಂದ ಸೂಕ್ತ ಸಮಯದಲ್ಲಿ ವಿದ್ಯಾರ್ಥಿಗಳು ಉದ್ಯೋಗಕ್ಕೆ ಸೇರಲು ಶ್ರಮಪಡಬೇಕಾಗುತ್ತಿದೆ. ಮಾಹಿತಿಯು ಸರಿಯಾಗಿ ಲಭ್ಯವಾದಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಬೇಗನೆ ಉತ್ತಮ ಉದ್ಯೋಗ ಪಡೆಯಬಹುದು. ಇಂದಿನ ಕಾರ್ಯಕ್ರಮ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ ಎಂದರು.
ಪ್ರೊ. ಕೆ.ಎಂ.ಮರಡಿಬಣಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತದಲ್ಲಿ ಹಲವಾರು ರೀತಿಯ ಉದ್ಯೋಗಗಳು ಲಭ್ಯವಿದ್ದರೂ ಮಾಹಿತಿ ಕೊರತೆಯಿಂದ, ಕೌಶಲ್ಯದ ಕೊರತೆಯಿಂದ ಯುವಕರಿಗೆ ಉದ್ಯೋಗ ಪಡೆಯುವುದರಿಂದ ವಂಚಿತರಾಗುತ್ತಿದ್ದಾರೆ. ಸೂಕ್ತ ಸಮಯದಲ್ಲಿ ತರಬೇತಿ ಪ್ರಾರಂಬಿಸಿದರೆ ಭಾರತದ ಯುವಕರಲ್ಲಿ ಆತ್ಮವಿಶ್ವಾಸ ಮೂಡುವುದಲ್ಲದೆ, ನಿರುದ್ಯೋಗದ ಸಮಸ್ಯೆಯು ಸ್ವಲ್ಪ ಮಟ್ಟಿಗೆ ನಿವಾರಣೆಯಾಗುತ್ತದೆ ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡೆಯಬೇಕಾಗಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಟ್ಯಾಲಿ ಅಕಾಡೆಮಿಯ ತರಬೇತುದಾರ ಅರುಣಕುಮಾರ ವಿದ್ಯಾರ್ಥಿಗಳಿಗೆ ಟ್ಯಾಲಿ, ಸರಕು ಮತ್ತು ಸೇವಾ ತೆರಿಗೆ, ಇದರ ಪ್ರಯೋಜನ, ಇದರ ಕಲಿಕೆಯಿಂದ ವಿದ್ಯಾರ್ಥಿಗಳಿಗಿರುವ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಉಪ ಪ್ರಾಚಾರ್ಯ ನಾಗರಾಜ ಎಂ.ಎಸ್‌, ಕೆ.ಆರ್‌.ಮಟ್ಟಿ, ಕಾರ್ಯಕ್ರಮ ಸಂಚಾಲಕರಾದ ಪ್ರವೀಣ್‌ ಕುರುವತ್ತೇರ ಸೇರಿದಂತೆ, ಎಲ್ಲಾ ಸಿಬ್ಬಂದಿಗಳು, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಉಪಸ್ತಿತರಿದ್ದರು.

loading...