ವಿದ್ಯಾರ್ಥಿಗಳಿಗೆ ಶಿಸ್ತು ಅವಶ್ಯ: ಡಾ.ಹಲಸಗಿ

0
25

ಪ್ರತಿಭಾವಂತ ವಿದ್ಯಾರ್ಥಿಗಳಿಗೆÀ ಸಾಧಕ ಸತ್ಕಾರ
ವಿದ್ಯಾರ್ಥಿಗಳಿಗೆ ಶಿಸ್ತು ಅವಶ್ಯ: ಡಾ.ಹಲಸಗಿ
ಕನ್ನಡಮ್ಮ ಸುದ್ದಿ-ಬೆಳಗಾವಿ: ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಸ್ತು, ಸಂಸ್ಕಾರ, ಸ್ವಯಂ,ಆತ್ಮಸ್ಥೆರ್ಯ ರೂಪಿಸಿಕೊಂಡರೆ ಮಾತ್ರ ಯಶಸ್ಸು ಖಚಿತ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕೋಶದ ಸಂಯೋಜನಾಧಿಕಾರಿ ಡಾ. ಎಸ್. ಓ. ಹಲಸಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳಿಯ ಮರಾಠಾ ಮಂಡಳದ ಪದವಿ ಮಹಾವಿದ್ಯಾಲಯದಲ್ಲಿ ಸೋಮವಾರ ೨೭ ರಂದು ಹಿಂದಿಣ ವಿದ್ಯಾರ್ಥಿಗಳ ಸಂಘದಿಂದ ಬಿ.ಎ. ಹಾಗೂ ಬಿ.ಕಾಂ. ಪರೀಕ್ಷೆಯಲ್ಲಿ ವಿಶೇಷ ಪ್ರಾವಿಣ್ಯತೆಯೊಂದಿಗೆ ಪ್ರಥಮ ಶ್ರೆÃಣಿಯಲ್ಲಿ ತೇರ್ಗಡೆಯಾದ ಹತ್ತು ವಾಣಿಜ್ಯ ವಿಭಾಗದ ಮತ್ತು ಹತ್ತು ಕಲಾ ವಿಭಾಗದ ವಿದ್ಯಾರ್ಥಿಗಳನ್ನು ಸತ್ಕರಿಸಿ ಅವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೆÃತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು, ಮಹನೀಯರ ಸೇವೆಯನ್ನು ಪರಿಗಣಿಸಿ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಸಂತ ದೇಸಾಯಿ, ಜೆ.ವ್ಹಿ. ಬನೋಶಿ, ಡಾ.ಎಸ್. ಓ. ಹಲಸಗಿ, ಡಾ. ಹೇರವಾಡ್ಕರ, ಡಾ ಭೋಸಲೆ, ನಿರ್ಮಲಾ ದೇಸಾಯಿ, ವಾಸುದೇವ ಚೌಗುಲೆ, ರಮೇಶ ಮಗದುಮ್ಮ, ಪ್ರಾಚಾರ್ಯ ಎಸ್. ಜಿ. ಸೊನ್ನದ, ಡಾ. ಡಿ. ಎಂ. ಮುಲ್ಲಾ, ಪ್ರೊ.ಆಯ್.ಎಂ.ಗುರವ, ಕುಮಾರಿ ಪುನಮ ಕುಂಭಾರ, ಕುಮಾರಿ ಶೃತಿಕುಂಭಾರ, ಕುಮಾರ ನನ್ನೆಸಾಬ ಮುಜಾವರ ಇವರುಗಳು ಸಾಮಾಜದ ವಿವಿಧ ಕ್ಷೆÃತ್ರಗಳಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗೂ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ.ಎಸ್. ಎಸ್. ಪಾಧ್ಯೆ ಹಾಗೂ ಪ್ರೊ.ಆಯ್.ಎಂ.ಗುರವ ಇವರು ಕೆ.ಸೇಟ್.ಪರೀಕ್ಷೆಯಲ್ಲಿ ಯಶಸ್ವಿಗಳಿಸಿದ ನಿಮಿತ್ತ ಸತ್ಕರಿಸಲಾಯಿತು. ಈ ಕಾರ್ಯಕ್ರಮಕ್ಕೆ ಶಿವಾಜಿರಾವ ಪಾಟೀಲ ಸದಸ್ಯರು ಮರಾಠಾ ಮಂಡಳ, ಬೆಳಗಾವಿ ಅಧ್ಯಕ್ಷತೆ ವಹಿಸಿದ್ದರು.
ಆರಂಭದಲ್ಲಿ ಪ್ರಾಚಾರ್ಯಎಸ್. ಜಿ. ಸೊನ್ನದ ಸ್ವಾಗತಿಸಿದರು. ಹಿಂದಿಣ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಸಂತ ದೇಸಾಯಿ ಪರಿಚಸಿದರು. ಪ್ರೊ.ಆಯ್.ಎಂ.ಗುರವ ಅತಿಥಿಗಳ ಪರಿಚಯಿಸದರು. ಸಂಘದ ಕಾರ್ಯದರ್ಶಿ ಜೆ.ವ್ಹಿ. ಹಾಗೂ ಉಪಸ್ಥಿತರಿದ್ದರು ಸಂಘದ ಸದಸ್ಯರು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು. ಡಾ. ಡಿ. ಎಂ. ಮುಲ್ಲಾ ನಿರೂಪಿಸಿದರು.ಬನೋಶಿ ವಂದಿಸಿದರು.

loading...