ವಿದ್ಯಾರ್ಥಿಗಳು ಕೌಶಲ್ಯ ಜೀವನ ಬೆಳೆಸಿಕೊಳ್ಳಲಿ: ಮುಳ್ಳೂರ

0
19

ಕನ್ನಡಮ್ಮ ಸುದ್ದಿ-ಧಾರವಾಡ: ಮಕ್ಕಳಿಗೆ ಗಣಿತವನ್ನು ಬೋಧಿಸುವಾಗ ಒಂದು ಸಮಾನಾರ್ಥಕವಾದ ಎಲ್ಲಾ ಪದಗಳನ್ನು ಮಕ್ಕಳಿಗೆ ತಿಳಿಸಿದರೆ ಅವರು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೆಶಕ ಆರ್.ಎಸ್. ಮುಳ್ಳೂರ ಹೇಳಿದರು.
ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು, ಕರ್ನಾಟಕ ವಿಜ್ಞಾನ ಮತ್ತು ತಂತ್ರವಿಧ್ಯಾ ಮಂಡಳಿ ಹಾಗೂ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ ಇವುಗಳ ಸಹಯೋಗದಲ್ಲಿ ಧಾರವಾಡ ಜಿಲ್ಲೆಯ ಪ್ರೌಢಶಾಲಾ ಗಣಿತ ಶಿಕ್ಷಕರಿಗೆ ಏರ್ಪಡಿಸಿದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಶಿಕ್ಷಕರಿಗೆ ವಿದ್ಯಾರ್ಥಿಗಳಲ್ಲ್ಲಿ ಗಣಿತ ವಿಷಯ ಕಠಿಣ ಅನ್ನುವ ಭಯವನ್ನು ಹೋಗಲಾಡಿಸಬೇಕು. ಹಾಗೂ ಶಿಕ್ಷಕರು ಬುದ್ದಿವಂತ ಮಕ್ಕಳನ್ನಷ್ಟೇ ಮನಸ್ಸಿನಲ್ಲಿಟ್ಟುಕೊಳ್ಳದೇ ಕಲಿಕಾ ಸಾಮಥ್ರ್ಯ ಕಡಿಮೆ ಇರುವಂಥಹ ಮಕ್ಕಳ ಕಡೆ ಹೆಚ್ಚಿನ ಗಮನಕೊಟ್ಟು ಬೋಧಿಸಿದರೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇಬ್ಬರಿಗೂ ಆತ್ಮ ಸಂತೃಪ್ತಿ ಎನ್ನುವುದು ಇರುತ್ತದೆ ಜೊತೆಗೆ ಫಲಿತಾಂಶ ಹಾಗೂ ವಿದ್ಯಾರ್ಥಿಯ ಬೌಧ್ಧಿಕಮಟ್ಟ ಎರಡೂ ಉತ್ತಮವಾಗಿರುತ್ತದೆ ಎಂದರು. ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ.ಬಿ.ಗುಡಸಿ ಅಧ್ಯಕ್ಷತೆವಹಿಸಿ ಮಾತನಾಡಿ, ಭಾರತಕ್ಕೆ ಏನಾದರೂ ಕೊಡುಗೆ ಕೊಡಬೇಕೆಂದ್ರೆ ಅದು ವಿದ್ಯಾರ್ಥಿಗಳಿಂದ ಸಾಧ್ಯ. ಮಾಧ್ಯಮಿಕ ಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಸುಧಾರಿಸಿದಾಗ ಮಾತ್ರ ಮುಂದಿನ ಭವಿಷ್ಯ ಉಜ್ವ¯ವಾಗುತ್ತದೆ. ಗಣಿತದಲ್ಲಿ ಮಕ್ಕಳು ಕೌಶಲ್ಯವನ್ನು ಬೆಳೆಸಿಕೊಂಡು ತಮ್ಮ ಭವಿಷ್ಯ ಜೀವನವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದರು.
ಎಸ್.ಎಂ.ಜೋಶಿ, ಎಸ್.ಎಂ. ಭಾವಿಕಟ್ಟಿ, ಶ್ರೀಮತಿ ಉಷಾ ಕುಲಕರ್ಣಿ, ಟಿ.ಕೆ. ಪ್ರಸನ್ನಮೂರ್ತಿ, .ಎಸ್. ಅಂತಣ್ಣವರ, ಎಂ.ಸಿ. ಕಂದಗಲ್ಲ, ಆರ್.ಪಿ. ಗಾಳಿ, ಅಭಿಷೇಕ ಸಿ, ಶಶಿಧರ ಬಿ, ಪ್ರಮೋದ ಆರ್, ಎಂ.ಕೆ. ಹೊರಕೇರಿ, ಆರ್. ಎನ್. ಕಿಲ್ಲೇದಾರ, ಎಸ್. ಎಫ್. ಮಾದರ, ಎಸ್.ವಿ. ಹಿರೇಮಠ ಉಪಸ್ಥಿತರಿದ್ದರು. ಸಿ.ಎಫ್.ಚಂಡೂರ ಸ್ವಾಗತಿಸಿ ನಿರೂಪಿಸಿದರು. ವಿಶಾಲಾಕ್ಷಿ ಎಸ್. ಜೆ. ವಂದಿಸಿದರು.

loading...