ವಿದ್ಯಾರ್ಥಿಗಳು ಪಠ್ಯ ಚಟುವಟಿಕೆ ಅಷ್ಟೆ ಅಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿ ಬಾಗವಹಿಸಿ

0
66

ಮುಂಡರಗಿ : ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ತಾಲೂಕಾ ಮಟ್ಟದ ಸಾಂಸ್ಕ್ರತಿಕ ಸಹಪಠ್ಯೇತರ ಚಟುವಕೆಗಳ ಸ್ಪರ್ಧೆಯ ಉದ್ಘಾಟನೆ ಸಮಾರಂಭ ಕಾರ್ಯಕ್ರಮವನ್ನು ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಸ್ ಎಸ್ ಪಾಟೀಲ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿ ಮಕ್ಕಳ ಸರ್ವತೋಮಖ ವಿಕಾಸಕ್ಕೆ ಪಠ್ಯ ಚಟುವಟಿಕೆ ಅಷ್ಟೆ ಅಲ್ಲದೆ ಪಠ್ಯೇತರ ಚಟುವಟಿಕೆಗಳು ಬಹು ಮುಖ್ಯವಾಗಿವೆ ಎಲ್ಲಾ ವಿದ್ಯಾರ್ಥಿ-ವಿದ್ಯಾನಿಯರು ಕೇವಲ ಪುಸ್ತಕದ ಹುಳುವಾಗಿರದೆ ಬಾಹ್ಯ ಪ್ರಪಂಚದ ಆಗುಹೋಗುಗಳನ್ನು ತಿಳಿದುಕೊಂಡು ಸಮಾಜದಲ್ಲಿ ವರ್ತಮಾನಕ್ಕೆ ತಕ್ಕಂತೆ ಬದುಕಬೇಕೆಂದು ಕಿವಿಮಾತು ಹೇಳಿದರು.
ಈ ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ಆಗಮಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆ ಗದಗ ಉಪ-ನಿರ್ದೇಶಕರಾದ ಕೆ ಆರ್ ಚವ್ಹಾನ ಮಾತನಾಡಿ ಸಮಾಜದಲ್ಲಿ ವ್ಯಕ್ತಿಯು ಸ್ವಪ್ರತಿಷ್ಠ ಸ್ವಾಭಿಮಾನ ಸೃಜನ ಶೀಲತೆ ಗುಣಗಳನ್ನು ಬೇಳಸಿಕೊಂಡಾಗ ಮಾತ್ರ ಪ್ರಜಾಪ್ರಭುತ್ವದ ಉತ್ತಮ ನಾಗರಿಕನಾಗಲು ಸಾಧ್ಯ ವಿದ್ಯಾರ್ಥಿಗಳು ಯಾವದೇ ವಿಷಯವನ್ನು ಕಷ್ಟ ಪಡದೇ ಇಷ್ಟ ಪಟ್ಟು ಓದಿದಾಗ ಮಾತ್ರ ಆ ವಿಷಯ ಮನದಟ್ಟಾಗುತ್ತದೆ ಎಂದು ಹೇಳಿದರು,
ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಳುಗಳಿಗೆ ತಾಲೂಕಾ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಎಂ ಎ ರಡ್ಡೇರ ಪಾರಿತೋಷಕ ವಿತರಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಹೇಮಗಿರಿಶ ಹಾವಿನಾಳ, ದೃವಕುಮಾರ ಹೊಸಮನಿ, ಕೊಟ್ರೇಶಪ್ಪ ಅಂಗಡಿ, ಈಶ್ವರಪ್ಪ ಬೇಟಗೇರಿ, ಈಶ್ವರಪ್ಪ ಹಂಚಿನಾಳ, ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಂ ಎಸ್ ಮಾಲಗಿತ್ತಿ, ಹಾಗೂ ತಾಲೂಕಿನ ಎಲ್ಲಾ ಕಾಲೇಜಿನ ಪ್ರಾಚಾರ್ಯರು ಹಾಗೂ ಉಪನ್ಯಾಕ ವೃಂದ ವೇದಕಿಯಲ್ಲಿ ಉಪಸ್ಥಿತರಿದ್ದರು ಕುಮಾರಿ ಕವಿತಾ ಜೋಳದ ಕಾರ್ಯಕ್ರಮದ ನಿರೂಪಿಸಿದರು ಗಿರಿಶ ಆಣಗೌಡರ ವಂದಸಿದರು.

loading...

LEAVE A REPLY

Please enter your comment!
Please enter your name here