ವಿದ್ಯಾರ್ಥಿಗಳ ಕನಸು ಇತಿಹಾಸವಾಗಲಿ: ಡಾ. ಶಿವಾನಂದ

0
14

ರಾಜ್ಯಮಟ್ಟದ ವಾರ್ಷಿಕ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ

ವಿದ್ಯಾರ್ಥಿಗಳ ಕನಸು ಇತಿಹಾಸವಾಗಲಿ: ಡಾ. ಶಿವಾನಂದ

ಬೆಳಗಾವಿ: ಸಮಾಜ ಏಳಿಗೆಗಾಗಿ ಶ್ರಮಿಸುತ್ತಿರುವ ವೈದ್ಯ ವೃತ್ತಿ ಪವಿತ್ರವಾದದ್ದು, ಪಾಲಕರ ಸಹಕಾರದೊಂದಿಗೆ ವಿದ್ಯಾರ್ಥಿಗಳ ವೈದ್ಯಕೀಯ ರಂಗದಲ್ಲಿ ದೇಶಕ್ಕೆ ಹೊಸ ಸಂಶೋದನೆಯನ್ನು ಪರಿಚಯಿಸುವ ಕರ‍್ಯಗಳಾಗಬೇಕೆಂದು ಇಂದಿರಾ ಗಾಂಧೀ ಇನ್ಸಿ÷್ಟಟ್ಯುಟ ಆಫ ಚೈಲ್ಡ ಹೆಲ್ಥನ ಮಾಜೀ ನಿರ್ದೇಶಕ ಡಾ. ಶಿವಾನಂದ ಹೇಳಿದರು.

ನಗರದ ಯಳ್ಳೂರ ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ, ರಾಜ್ಯ ಮಟ್ಟದ ವಾರ್ಷಿಕ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಯಶಸ್ವಿಗಾಗಿ ಸತತ ಪ್ರಯತ್ನ ಅವಶ್ಯವಿದೆ. ವಿದ್ಯಾರ್ಥಿಗಳು ನೇರ, ನಿಶ್ಚಲ ಮನಸ್ಸಿನಿಂದ ಸಾಗಬೇಕು. ಅದಕ್ಕಾಗಿ ಕನಸಿನ ಗುರಿಇಟ್ಟಕೊಳ್ಳಬೇಕು.
ಕಂಡ ಕನಸು ಇತಿಹಾಸವಾಗಬೇಕೆಂದು ವಿದ್ಯಾರ್ಥಿಗಳಿಗೆ ವಿಶ್ವಾಸವ್ಯಕ್ತಿಪಡಿಸಿದರು.

 

ವೈದ್ಯರು ತಮ್ಮ ವೃತ್ತಿಜೀವನದಲ್ಲಿ ಬರುವ ತೊಡಕುಗಳನ್ನು ಮೆಟ್ಟಿನಿಂತು, ರೋಗ ನಿಧಾನತೆಯಲ್ಲಿ ಪಾರಂಗತೆಗಳಿಸಿರಿ ಹಾಗೂ ಸೂಕ್ತ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿರಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆ ಎಲ್ ಇ ವಿಶ್ವವಿದ್ಯಾಲಯದ ಮಾಜೀ ಕುಲಸಚಿವ ಡಾ.ವಿಡಿ ಪಾಟೀಲ ಮಾತನಾಡುತ್ತ ಪುಸ್ತಕಗಳಿಂದ ಅರಿಯಲಾಗದ ವಿಷಯಗಳನ್ನು ವಿಚಾರಗಳನ್ನು ವಿಧಾನಗಳನ್ನು ಜಗತ್ತಿಗೆ ತೋರಲು ಹಾಗೂ ತಮ್ಮ ವೈದ್ಯಕೀಯ ಜ್ಞಾನದ ಅನುಭವವನ್ನು ಹಂಚಿಕೊಳ್ಳಲು ಇಂತಹ ಕಾರ್ಯಕ್ರಮಗಳು ಅತ್ಯಗತ್ಯವಾಗಿವೆ. ಅದರಲ್ಲು ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ವಿಶಿಷ್ಟ ಕೌಶಲ್ಯಗಳನ್ನು ಹೊಂದಿರುತ್ತಾನೆ. ಅದನ್ನು ಬೆಳಕಿಗೆ ತರಲು ಹಾಗೂ ಅದರ ವೈಶಿಷ್ಠö್ಯತೆಯನ್ನು ಜಗತ್ತಿಗೆ ಸಾರಲು ಇಂತಹ ವೇದಿಕೆಗಳು ನಿರಂತರವಾಗಿ ಸಾಗುತ್ತಿರಬೇಕು ಎಂದು ಹೇಳಿದರು.
ಯು ಎಸ ಎಮ್ ಕೆ ಎಲ್ ಇ ಯ ನಿರ್ದೇಶಕ ಡಾ. ಹೆಚ್ ಬಿ ರಾಜಶೇಖರ ಮಾತನಾಡುತ್ತ ಅರಿತ ಜ್ಞಾನವನ್ನು ಒರೆಗೆ ಹಚ್ಚಿದಾಗಲೇ ಅದರ ನಿಖರತೆಯ ಅರಿವು ತಿಳಿಯಲು ಸಾಧ್ಯ. ಇಂತಹ ಸನ್ನಿವೇಶಗಳಲ್ಲಿ ಪ್ರಶ್ನೆಗಳು ಸಾಮಾನ್ಯವಾಗಿದ್ದು ಅವುUಳ ಉತ್ತರಹುಡುಕುವಾಗ ಅನೇಕ ವಿಷಯಗಳು ತಿಳಿದು ಬರುತ್ತವೆ ಅದೇ ರೀತಿ ಉತ್ತರವೂ ಸಿಗುತ್ತದೆ. ಆದ್ದರಿಂದ ಇಂತಹ ವಿಚಾರಸಂಕೀರ್ಣಗಳು, ಕಾರ್ಯಾಗಾರಗಳು ಹೆಚ್ಚಾಗಿ ಆಯೋಜನೆಗೊಳ್ಳಬೇಕು. ಇದರಿಂದ £ಮ್ಮ ಅನುಭವ ಭವಿಷ್ಯದ ವೈದ್ಯರಿಗೆ ದಾರಿದೀ¥ವಾಗುತ್ತದೆ ಎಂದು ತಿಳುವಳಿಕೆ ನೀಡಿದರು.

ಕಾರ್ಯಕ್ರಮದಲ್ಲಿ ಡಾ. ನೇಸರಗಿ, ಡಾ. ಪಲ್ಲೇದ, ಕರ್ನಾಟಕಾ ಮೆಡಿಕಲ್ ಕೌನ್ಸಿಲ್ ಸಂವೀಕ್ಷಕ ಡಾ. ಮುನವಳ್ಳಿ, ಇಡಿಯನ ಅಸೋಶಿಯೇಶನ್ ಆಫ ಪಿಡಿಯಾಟ್ರಿಕ್ಸ ನ ಖಜಾಂಚಿ ಡಾ. ಶೈಲೇಶ ಪಾಟೀಲ, ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಬಿ ಎಸ್ ಮಹಾಂತಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಡಾ. ಸೌಮ್ಯಾ ವೇರ್ಣೇಕರ, ಡಾ ಅನಿತಾ ಮೋದಗೆ ನಿರೂಪಿಸಿದರು. ಡಾ. ಪವನ ಪೂಜಾರ ವಂದಿಸಿದರು. ಕಾರ್ಯಕ್ರಮದಲ್ಲಿ ಸುಮಾರು ೨೦೦ ಕ್ಕೂ ಅಧಿಕ ವೈದ್ಯಕೀಯ ಹಾಗೂ ವೈದ್ಯಕೀಯೇತರರು ಭಾಗವಹಿಸಿದ್ದರು.
೦೪

loading...