ವಿದ್ಯಾರ್ಥಿ ಜೀವನದಲ್ಲಿ ಪಾಲಕರ, ಶಿಕ್ಷಕರ ಪಾತ್ರ ಮುಖ್ಯ: ಪ್ರೊ. ಸಂಗೀತಾ

0
51

ಕನ್ನಡಮ್ಮ ಸುದ್ದಿ-ಬೆಳಗಾವಿ: ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಕರ ಹಾಗೂ ಪಾಲಕರ ಪಾತ್ರವು ಅತ್ಯಂತ ಮಹತ್ವದ್ದಾಗಿರುತ್ತದೆ ಎಂದು ಅಂಗಡಿ ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರೊ. ಸಂಗೀತಾ ದೇಸಾಯಿ ಹೇಳಿದರು.

ನಗರದ ಅಂಗಡಿ ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ೨೦೧೮-೧೯ನೇ ಶೈಕ್ಷಣಿಕ ಸಾಲಿನ ಪಾಲಕರ ಸಭೆಯಲ್ಲಿ ಅವರು ಮಾತನಾಡಿದರು. ಪಾಲಕರು ಯಾವಗಲು ಮಕ್ಕಳ ಬಗ್ಗೆ ಕಾಳಜಿಯನ್ನು ಹೊಂದಬೇಕು. ಮಕ್ಕಳು ತಂದೆ ತಾಯಿ ಮೇಲೆ ಗೌರವ ಹೊಂದಿ ಅವರ ಆಸೆಯನ್ನು ಈಡೇರಿಸಬೇಕು ಎಂದರು.
ಈ ಸಂದರ್ಭದಲ್ಲಿ ೨೦೧೭-೧೮ನೇ ಸಾಲಿನ ದ್ವಿತಿಯ ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕಾಲೇಜಿನ ವಿದ್ಯಾರ್ಥಿನಿ ಸೋನಾಲಿ ಸಾಯನಾಕ ಅವರನ್ನು ಸನ್ಮಾನಿಸಲಾಯಿತು. ಪಾಲಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತಾಧಿಕಾರಿ ರಾಜು ಜೋಶಿ, ಪ್ರೊ. ವಿಜಯಲಕ್ಷಿö್ಮ ಯಲಿಗಾರ, ಡಾ. ರವಿಂದ್ರ ಸತ್ತಿಗೇರಿ, ಪ್ರೊ.ಶಿವಾ ಮೋದಗಿ, ಪ್ರೊ.ಶಿವಪ್ರಸಾದ ಭಗವಂತನವರ, ನಮಿತಾ, ಪೂಜಾ ಕಾಲೇಜಿನ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ, ಪಾಲಕರು ಉಪಸ್ಥಿತರಿದ್ದರು.
ಪ್ರೊ. ಉಮೇಶ ಕಾಳೆ ಸ್ವಾಗತಿಸಿದರು, ಡಾ. ಷಣ್ಮಖ ಕುಚಬಾಳ ವಂದಿಸಿದರು. ಸ್ವಿಟಿ ಪಾಠಕ ನಿರೂಪಿಸಿದರು.

loading...