ಬೆಟಗೇರಿ 27: ವಿದ್ಯಾರ್ಥಿ ಜೀವನದಲ್ಲಿ ಸಾಧಿಸುವ ಛಲ, ಗುರಿ ಇದ್ದರೆ ಏನೆಲ್ಲಾ ಸಾಧನೆಗೈಯಲು ಸಾಧ್ಯವಾಗುವುದು, ವಿದ್ಯಾರ್ಥಿ ಜೀವನದ ಪ್ರತಿ ಕ್ಷಣವೂ ಅಮೂಲ್ಯವಾಗಿದೆ. ಎಂದು ಬೆಳಗಾವಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆಯ್.ವ್ಹಿ.ದೇಯಣ್ಣವರ ಹೇಳಿದರು.
ಇಲ್ಲಿಯ ಎಸ್.ವಾಯ್.ಸಿ ಶಿಕ್ಷಣ ಸಂಸ್ಥೆಯ ಶ್ರೀ.ಸದ್ಗುರು ಯಲ್ಲಾಲಿಂಗ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪಿ.ಯು.ಸಿ.ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುವ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭದ ಮುಖ್ಯ ಅಇಥಿಯಾಗಿ ಮಾತನಾಡಿ , ಇಂದಿನ ಯುವಕರು ದುಷ್ಚಟಗಳಿಗೆ ಬಲಿಯಾಗುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.
ಬೆಟಗೇರಿ ಹಳ್ಳಿಯ ಗಣ್ಯಮಾನ್ಯ ಶಿಕ್ಷಣ ಪ್ರೇಮಿಗಳು, ಅನುದಾನ ರಹಿತ ಸಂಸ್ಥೆಯ ತೆರೆದು ಹಳ್ಳಿಯ ಮಕಕಳಿಗೆ ಶೈಕಣಿಕ ಪ್ರೇರಣೆ ನೀಡುವುದನ್ನು ಶ್ಲಾಘಿಸಿದರು. ಜ್ಞಾನ, ಶಾರಿರಿಕ ಸಂಪತ್ತನ್ನು ಪ್ರತಿಯೊಬ್ಬ ವಿದ್ಯಾರ್ಥಿ ಸಂಪಾದಿಸಿಕೊಳ್ಳಬೇಕೆಂದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ರಾಜೇಂದ್ರ ಸಣ್ಣಕ್ಕಿ ಜ್ಯೋತಿ ಬೆಳಗಿಸಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪದವಿಪೂರ್ವ ಶಿಕ್ಷಣದ ನಂತರ ವಿದ್ಯಾರ್ಥಿಗಳು ತಮ್ಮ ಬದುಕಿನ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.
ಸ್ಥಳೀಯ ಸದ್ಗುರು ಶ್ರೀ.ಯಲ್ಲಾಲಿಂಗ ಆಶ್ರಮದ ಸೋಮೇಶ್ವರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸ್ಥಾನಿಕ ಎಸ್.ವಾಯ್.ಸಿ.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿದ್ದಪ್ಪ ವಡೇರ ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಸ್ಥಳೀಯ ವ್ಹಿ.ವ್ಹಿ.ಡಿ.ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಎಮ್.ಎಸ್.ಹಿರೇಮಠ ಅತಿಥಿಗಳಾಗಿ ಮಾತನಾಡಿದರು.
ಸ್ಥಳೀಯ ಎಸ್.ವಾಯ್.ಸಿ.ಶಿಕ್ಷಣ ಸಂಸ್ಥೆಯ ಸಾಧನೆಗೈದ ಕಾಲೇಜು ವಿದ್ಯಾರ್ಥಿಗಳನ್ನು, ಅತಿಥಿಮಹೋದಯರನ್ನು ನೆನಪಿನ ಕಾಣಿಕೆ ನೀಡಿ, ಶಾಲು ಹೊದಿಸಿ ಸತ್ಕರಿಸಲಾಯಿತು. ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಮನರಂಜನೆಯ ಕಾರ್ಯಕ್ರಮ ನಡೆದು, ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಆಯೋಜಿಸಲಾಗಿತ್ತು, ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಶಸ್ತಿ ನಿಡಲಾಯಿತು.
ಚಪಾತಿ ಪಾಂಡು ಖ್ಯಾತಿಯ ಹಾಸ್ಯಕಲಾವಿದ, ಚಲನಚಿತ್ರ ನಟ, ಎಸ್.ಪಿ.ಹೊಸಪೇಟ ಅವರಿಂದ ಹಾಸ್ಯಸಂಜೆ ಕಾರ್ಯಕ್ರಮ ಜರುಗಿತು.
ನ್ಯಾಯವಾದಿ ವಿಠ್ಠಲ ಚಂದರಗಿ, ಸ್ಥಳಿಯ ಗ್ರಾ.ಪಂ.ಸದಸ್ಯ ಲಕ್ಷ್ಮಣ ಚಂದರಗಿ, ಕನಕ ಶ್ರೀ ಸಂಘದ ಅದ್ಯಕ್ಷ ಹನುಮಂತ ವಡೇರ, ಸ್ಥಳೀಯ ಎಸ್.ವಾಯ್.ಸಿ.ಶಿಕ್ಷಣ ಸಂಸ್ಥೆಯ ಕಾರ್ಯಧ್ಯಕ್ಷ ಬಸವರಾಜ ಕುರುಬೇಟ, ನಿರ್ದೇಶಕ ಯಮನಪ್ಪ ಹೊರಟ್ಟಿ, ಮಾರುತಿ ಚಂದರಗಿ, ಮಹಾದೇವ ಹೊರಟ್ಟಿ, ಚಂದ್ರಶೇಖರ ಪುರಂದರೆ, ಶಂಕರ ಕೋಣಿ, ಶಿವನಪ್ಪ ಮಾಳೇದ, ಬಸನಪ್ಪ ದೇಯನ್ನವರ, ಸ್ಥಳಿಯ ಎಸ್.ವಾಯ್.ಸಿ.ಶಿಕ್ಷಣ ಸಂಸ್ಥೆಂiÀi ಆಡಳಿತ ಮಂಡಳಿ ಸದಸ್ಯರು, ಪದಾಧಿಕಾರಿಗಳು, ಕಾಲೇಜಿನ ಉಪನ್ಯಾಸಕರು, ಸಿಬ್ಬಂಧ್ಧಿವರ್ಗ, ಬೆಟಗೇರಿ ಸುತ್ತಮುತ್ತಲಿನ ಹಳ್ಳಿಗಳ ಗಣ್ಯ ವ್ಯಕ್ತಿಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಶಿಕಣ ಪ್ರೇಮಿಗಳು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ ಹೂಗಾರ ಸ್ವಾಗತಿಸಿದರು, ಜಿ.ಹೆಚ್.ಚಿಗದಿನ್ನಿ ಕಾರ್ಯಕ್ರಮ ನಿರೂಪಿಸಿದರು, ಆರ್.ವೈ.ಪುಜೇರಿ ವಂದಿಸಿದರು.
ವಿದ್ಯಾರ್ಥಿ ಜೀವನದ ಪ್ರತಿ ಕ್ಷಣವೂ ಅಮೂಲ್ಯ ; ದೇಯಣ್ಣವರ
loading...