ವಿದ್ಯಾರ್ಥಿ ವೇತನ ಪೋರ್ಟಲ್, ಪೋಷಕರು ಟೇಕರ್, ಟೀಚರು ಟಾರ್ಚರ್,

0
23

ರವಿಕುಮಾರ ಕಗ್ಗಣ್ಣವರ
ಧಾರವಾಡ:- ಇದು ಶಿಕ್ಷಕರ ನೋವಿನ ಮನದಾಳದ ಮಿಡಿತವಾಗಿದ್ದು ಇಂದು ಶಿಕ್ಷಕರ ಮೇಲೆ ಒತ್ತಡ ಹೇರುತ್ತ ಮಕ್ಕಳ ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುವ ಸ್ಥಿತಿಗೆ ಇಲಾಖೆ ತಲುಪುವಂತಾಗಿದೆ ಎಂದು ಪಾಲಕರು ಮಾತನಾಡುವಂತಾಗಿದೆ. ಮತ್ತೊಂದೆಡೆ ಮಕ್ಕಳಿಗೆ ಸಿಗಬೇಕಾದ ನಿಜವಾದ ಶಿಕ್ಷಣ ದೊರೆಯದೆ ಮಕ್ಕಳ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿದ್ದೇವೆಯೇ ಎಂಬ ಆತಂಕ ಶಿಕ್ಷಕರಲ್ಲಿ ಮೂಡಿ ಬರುತ್ತಿರುವುದು ಸಹಜವಾಗಿದೆ. ಮಕ್ಕಳ ವಿದ್ಯಾರ್ಥಿವೇತನಕ್ಕೂ ಶಿಕ್ಷಕರಿಗೂ ಏನು ಸಂಬಂಧ ಅನ್ನೋ ಪ್ರಶ್ನೆ ಕಾಡುತ್ತಿದೆಯೇ ? ಮಕ್ಕಳ ವಿದ್ಯಾರ್ಥಿವೇತನ ಮಾಡಿಸಲು ಶಿಕ್ಷಕರು ಕೇವಲ ಮಾರ್ಗದರ್ಶಕ ಅಷ್ಟೇ, ಆದರೆ ಅವರೇ ಪಾತ್ರಧಾರಿಗಳಾಗಬೇಕಾದ ಪರಿಸ್ಥಿತಿ ಬಂದೊಗಿದೆ. ಮಕ್ಕಳ ವಿದ್ಯಾರ್ಥಿವೇತನ (ಫಲಾನುಭವಿ) ಪಾಲಕರು ಮಾಡಬೇಕಾದ ಕೆಲಸವನ್ನು ಶಿಕ್ಷಕರೇ ಮಾಡಬೇಕು ಎಂಬ ಆದೇಶಕ್ಕೆ ಶಿಕ್ಷಕರು ತತ್ತರಿಸಿ ಹೋಗಿರುವುದು ಕಂಡು ಬರುತ್ತಿದೆ ಇದಕ್ಕೆ ಕಾರಣ ಏನು ಅಂತಿರಾ ಈ ಆಂಶಗಳನ್ನು ಗಮನಿಸಿ.
ಇಂಟರನೆಟ್ ಸೌಲಭ್ಯವೂ ಇಲ್ಲ :- ಶಾಲೆಗಳಲ್ಲಿ ಕಂಪ್ಯೂಟರ್ ಆಗಲಿ ಇಂಟರ್‍ನೇಟ್ ವ್ಯವಸ್ಥೆಯಾಗಲಿ ಇಲ್ಲಾ ಹಾಗಾದರೆ ಆನ್‍ಲೈನ್ ಮೂಲಕ ಭರ್ತಿ ಮಾಡುವದಾದರೂ ಹೇಗೆ. ಏಕೋಪಾಧ್ಯಾಯ ಶಿಕ್ಷಕರು ಇರುವ ಹಲವು ಶಾಲೆಗಳಿದ್ದು ಪಾಲಕರ ಕೆಲಸವನ್ನು ಶಿಕ್ಷಕರೇ ಹೇಗೆ ಮತ್ತು ಯಾವಾಗ ಮಾಡಬೇಕು. ಶಾಲೆಗಳಲ್ಲಿ ಯಾವುದೇ ಗುಮಾಸ್ತರು ಇಲ್ಲ ಮೇಲಾಗಿ ಶಿಕ್ಷಕರ ನೂರೆಂಟು ಕಾರ್ಯಗಳು ಹೀಗಿರುವಾಗ ವಿದ್ಯಾರ್ಥಿವೇತನ ಕೆಲಸ ಮಾಡುವುದಾದರೂ ಯಾವಾಗ ? ಮಲೆನಾಡಿನ ಹಲವು ಭಾಗಗಳಲ್ಲಿ ಮತ್ತು ಕುಗ್ರಾಮಗಳಲ್ಲಿ ಇಂಟರನೆಟ್ ಸೌಲಭ್ಯವೂ ಇಲ್ಲ ಶಿಕ್ಷಕರ ಮೊಬೈಲ್‍ಗೂ ಕನೆಕ್ಟ ಆಗಲ್ಲ ಹೀಗಾಗಿ ಇದೇ ಕೆಲಸಕ್ಕೆ ಶಾಲೆ ಬಿಟ್ಟು ಶಹರಕ್ಕೆ ಬಂದು ವಿದ್ಯಾರ್ಥಿವೇತನ ಕೆಲಸ ಮಾಡುವ ಸ್ಥಿತಿ ಬಂದೊದಗಿದೆ. ಎಲ್ಲಾ ಶಿಕ್ಷಕರ ಹತ್ತಿರ ಸ್ಮಾರ್ಟ್ ಫೋನ್ ಇರುವುದಿಲ್ಲ ಇದ್ದರೂ ನೆಟವರ್ಕ ಸಮಸ್ಯೆ ಅಷ್ಟೇ ಯಾಕೆ ನೆಟ್‍ಪ್ಯಾಕ್ ಕೂಡ ಇರುವುದಿಲ್ಲ ಹೀಗಿದ್ದಾಗ ಶಿಕ್ಷಕರು ತಮ್ಮ ಕೈಯಿಂದ ಹಣ ಖರ್ಚು ಮಾಡಿ ಮಕ್ಕಳಿಗೆ ಶಿಷ್ಯವೇತನ ಕೊಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪರೀಕ್ಷೆ ಸಮೀಪದಲ್ಲಿದ್ದು ಇಂತಹ ಸಮಯದಲ್ಲಿ ಶಿಷ್ಯವೇತನವನ್ನು ಮಾಡಿಸಬೇಕೋ ಅಥವಾ ವಿದ್ಯಾಭ್ಯಾಸ ಮಾಡಿಸಬೇಕೋ ಇದೊಂದು ಶಿಕ್ಷಕರಿಗೆ ನುಂಗಲಾರದ ತುಪ್ಪವಾಗಿದೆ. ಪೋಷಕರಿಗಿದ್ದ ಜವಾಬ್ದಾರಿ ಶಿಕ್ಷಕರ ಹೆಗಲಿಗೆ ಹಾಕಿ ಒತ್ತಡ ಹೇರಿದ ಕಾರಣ ಶಿಕ್ಷಕ ತತ್ತರಿಸಿ ಹೋಗುವಂತಾಗಿದೆ.- ಶಹರ ವಲಯ ವ್ಯಾಪ್ತಿಯಲ್ಲಿ ಸ್ಕಾಲರ್ಶಿಪ್ ಪೋರ್ಟಲನಲ್ಲಿ ಇನ್ನೂ ಹಲವು ಶಾಲೆಗಳು ಕಾರ್ಯಗತವಾಗಬೇಕಿದೆ. ಪ್ರಧಾನ ಗುರುಗಳು ಕಾರ್ಯ ಪ್ರವೃತ್ತರಾಗುವಂತೆ ಆದೇಶವನ್ನೂ ನೀಡಿದ್ದು ಮೇಲಾಧಿಕಾರಿಗಳ ಸೂಚನೆಯನ್ವಯ ಸೆಪ್ಟಂಬರ್ 30 ರೊಳಗಾಗಿ ಮುಖ್ಯಶಿಕ್ಷಕರು, ಶಿಕ್ಷಕರು ಸಿಬ್ಬಂದಿಗಳು ಕಡ್ಡಾಯವಾಗಿ ವಿದ್ಯಾರ್ಥಿವೇತನ ಪೋರ್ಟಲನಲ್ಲಿ ಅರ್ಜಿ ಸಲ್ಲಿಸಲೇಬೇಕಿದೆ. ಕೊಂಚ ಒತ್ತಡವಿದ್ದರೂ ಶಿಕ್ಷಕರು ಸಹಿಸಿಕೊಂಡು ಬಡಕುಟುಂಬಸ್ಥರ ಮಕ್ಕಳಿಗೆ ಸಹಾಯ ಸಹಕಾರ ನೀಡುವುದು ಅನಿವಾರ್ಯವಿದೆ. ಸರಕಾರಿ ಶಾಲೆಗೆ ಆಗಮಿಸುವ ಬಡಕುಟುಂಬಸ್ಥರ, ಕೂಲಿ ಕಾರ್ಮಿಕರ ಮಕ್ಕಳಿಗೆ ಸರ್ಕಾರದ ಅನುದಾನ ಹಾಗೂ ವಿವಿಧ ಯೋಜನೆಗಳ ಲಾಭ ಪಡೆಯಲು ಅನುಕೂಲವಾಗಲೆಂದು ಪಾಲಕರಿಗೆ ಸಹಾಯ ಮಾಡುವ ಕಾರ್ಯವಿದು. ಪಾಲಕರು ತಮ್ಮ ಕೂಲಿ ಕೆಲಸವನ್ನು ಬಿಟ್ಟು ಮಕ್ಕಳ ವಿದ್ಯಾರ್ಥಿವೇತನ ಪೋರ್ಟಲ ಅರ್ಜಿ ಭರ್ತಿ ಮಾಡಲು ಪರದಾಡುವಂತಾಗಬಾರದು ಎಂದು ಇಲಾಖೆ ನಿರ್ಧಾರ ಮಾಡಿದೆ. ಮಕ್ಕಳಿಗೆ ಹಾಗೂ ಪಾಲಕರಿಗೆ ಶಿಕ್ಷಕರು ಮಾಡುವ ಚಿಕ್ಕ ಸಹಾಯವಾಗಿದ್ದು ಶಿಕ್ಷಕರು ಶಾಲಾ ಸಮಯದಲ್ಲಿ ಕೆಲಸ ಮಾಡಲು ಸ್ವಲ್ಪ ಹೊರೆಯಾಗಬಹುದು ಆದರೆ ಅನಿವಾರ್ಯ ಮಾಡಲೇಬೇಕಿದೆ. ವಿದ್ಯಾರ್ಥಿವೇತನ ಪೋರ್ಟಲನಲ್ಲಿ ಮೊದಲ ಸಲ ಅರ್ಜಿ ಸಲ್ಲಿಸುವಾಗ ಮಾತ್ರ ನೆಟ್‍ವರ್ಕ ಹಾಗೂ ಸರ್ವರ್ ಸಲುವಾಗಿ ಸ್ವಲ್ಪ ತಡ ಹಾಗೂ ಅನಾನೂಕಲವಾಗಬಹುದು. ಬೆಳಗಿನ ಅವಧಿಯಲ್ಲಿ ಈ ಕೆಲಸವನ್ನು ಮಾಡಿದರೆ ನೆಟ್‍ವರ್ಕ ಹಾಗೂ ಸರ್ವರ್ ಸಮಸ್ಯೆ ಬರುವುದು ಕಡಿಮೆ ಹೀಗಾಗಿ ಶಾಲಾ ಅವಧಿ ಸಮಯದಲ್ಲಿ ಬೆಳಗ್ಗೆ ಕಾರ್ಯಗತರಾಗಬೇಕಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಪೋರ್ಟಲ ಮೂಲಕ ರಿನಿವಲ್ ಮಾಡಿದರೆ ಸಾಕು ಮುಂದಿನ ವರ್ಷ ಇಂಥಹ ತೊಂದರೆಯಾಗಲು ಸಾಧ್ಯವಿಲ್ಲ. ಎ.ಎ.ಖಾಜಿ, ಕ್ಷೇತ್ರ ಶಿಕ್ಷಣಾಧಿಕಾರಿ.

loading...