ವಿದ್ಯುತ್ ಅವಘಡ ಕಾರ್ಮಿಕ ಸಾವು

0
47

ವಿದ್ಯುತ್ ಅವಘಡ ಕಾರ್ಮಿಕ ಸಾವು

ಕನ್ನಡಮ್ಮ ಸುದ್ದಿ -ಸಂಕೇಶ್ವರ: ವಿದ್ಯೂತ ತಂತಿ ತಗುಲಿ ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುತ್ತಿದ್ದ  ಕಾರ್ಮಿಕ ಸ್ಥಳದಲ್ಲಿ ಸಾವನೊಪ್ಪಿದ ಘಟನೆ ತಾಲೂಕಿನ ಹತ್ತರಗಿ ಗ್ರಾಮ ಹರಿ ಮಂದಿರದ ಬಳಿ ಗುರುವಾರ ನಡೆದಿದೆ .

ಹತ್ತರಗಿ ಗ್ರಾಮದ ಹರಿ ಮಂದಿರದ ಬಳಿ ವಿದ್ಯುತ್ ಕಂಬದ ಕೆಲಸ ನಿರ್ವಹಣೆ ವೇಳೆ ಏಕಾಏಕಿ ವಿದ್ಯುತ್ ಪ್ರಸಾರಣವಾಗಿ ಅವಘಡ ಸಂಭವಿಸಿದೆ.ಮೃತ ವ್ಯಕ್ತಿ ತಾಲೂಕಿನ ಜಾಬಾಪುರ ನಿವಾಸಿ ಅಶೋಕ ಗಸ್ತಿ (೩೨) ಎಂದು ತಿಳಿದು ಬಂದಿದೆ .
ಹೊಸ ಸಂಪರ್ಕದ ತಂತಿ ಜೊಡಣೆ ವೇಳೆ ಏಕಾಏಕಿ ವಿದ್ಯುತ್ ಹರಿದು ವ್ಯಕ್ತಿ ಸಾವನೊಪ್ಪಿದ್ದು ,ಏಕಾಏಕಿ ವಿದ್ಯುತ್ ಪ್ರಸರಣಕ್ಕೆ ಕಾರಣ ತಿಳಿದು ಬಂದಿಲ್ಲ

ಏಕಾಏಕಿ ವಿದ್ಯುತ್ ಪ್ರಸಾರವಾದ ಹಿನ್ನೆಲೆ ಕಂಬದ ಮೇಲೆ ಅಶೋಕ ಗಸ್ತಿ ಪ್ರಾಣ ಬಿಟ್ಟಿದ್ದು ,
ಯಮಕನಮರಡಿ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ .

loading...