ವಿವಾದದ ಸುಳಿಯಲ್ಲಿ ಬೆಳಗಾವಿ ಬಿಮ್ಸ್ ಇಬ್ಬರಿಗೆ ಅಕ್ರಮ ನೇಮಕಾತಿ – ಕಣ್ಣು ಮುಚ್ಚಿ ಕುಳಿತ ಸರಕಾರ

0
49

ಕನ್ನಡಮ್ಮ ವಿಶೇಷ
ಬೆಳಗಾವಿ: ರಾಜ್ಯದ ಎರಡನೇ ರಾಜಧಾನಿ, ಸ್ಮಾರ್ಟ್ಸಿಟಿ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಳಗಾವಿ ಬಿಮ್ಸ್ ಸದಾ ವಿವಾದದ ಸುದ್ದಿಯಲ್ಲೇ ಹೆಸರು ಮಾಡಿಕೊಂಡು ಬಂದಿದ್ದು, ಮತ್ತೊಂದು ಅಕ್ರಮ ನೇಮಕಾತಿ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಬೆಳಗಾವಿ ಬಿಮ್ಸ್ನಲ್ಲಿ ಬಹಳಷ್ಟು ಭ್ರಷ್ಟಾಚಾರ, ಅಕ್ರಮ ಚಟುವಟಿಗೆಗಳಿಗೆ ಹೆಸರುವಾಸಿಯಾಗಿದೆ. ಜ. ೧೦,೨೦೧೦ರಲ್ಲಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಜಾಹೀರಾತು ಕರೆದು ಡರ್ ಮೆಂಟಲೋಜಿ ವಿಭಾಗ, ಅಪ್ತಾಲೋಜಿ ವಿಭಾಗಕ್ಕೆ ತಲಾ ಒಂದೊAದು ಪ್ರೊಪೇಸರ್ ಹುದ್ದೆ ಕರೆಯಲಾಗಿತ್ತು.
ಇವೆರಡು ಹುದ್ದೆಗೆ ಅರ್ಜಿಸಲ್ಲಿಸಿದ ಡಾ. ವಿನಯ ಹಾಗೂ ಶಿಲ್ಪಾ ದಾಸ್ತಿಕೋಪ್ಪ ಅರ್ಜಿ ಸಲ್ಲಿಸಿ ಸಂದರ್ಶನದಲ್ಲಿ ಅರ್ಹತೆಯಲ್ಲಿ ವಿಫಲವಾದರೂ ಅವರಿಗೆ ಸಹಾಯಕ ಉಪನ್ಯಾಸಕರಾಗಿ ಹುದ್ದೆ ನೀಡಿ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯಮಾಡಿದರು.

ಅಕ್ರಮವಾಗಿ ದಾಸ್ತಿಕೋಪ್ಪ ದಂಪತಿಗಳಿಗೆ ನೇಮಕ ಮಾಡಿಕೊಂಡಿದ್ದಾರೆ. ಇವರಿಗೆ ಅಮಾನತ್ತು ಮಾಡಿ ಇವರ ಮೇಲೆ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿಸುತ್ತಿದ್ದಾರೆ.
ಬೆಳಗಾವಿ ಬಿಮ್ಸ್ ನಲ್ಲಿ ಡಾ.ಶಿಲ್ಪಾ ದಾಸ್ತಿಕೋಪ್ಪ, ಡಾ.ವಿನಯ ದಾಸ್ತಿಕೋಪ್ಪ ಅವರಿಗೆ ಅಕ್ರಮವಾಗಿ ೨೦೧೦ ರಲ್ಲಿ ನೇಮಕಾತಿ ಮಾಡಿಕೊಂಡು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಅಪ್ತಾಲೋಜಿ ಪ್ರೊಫೆಸರ್, ಡಮ್ರ‍್ಯಾಟೋಲೋಜಿ ಹುದ್ದೆಗೆ ಅರ್ಜಿ ಕರೆದು ಸಹಾಯಕ ಪ್ರೊಫೆಸರ್ ಹುದ್ದೆ ನೀಡಿದ್ದು ಯಾವ ಪುರುಷಾರ್ಥಕ್ಕಾಗಿ ಎನ್ನುವುದು ಯಕ್ಷಪ್ರಶ್ನೆಯಾಗಿದೆ.
ಡಾ.ಶಿಲ್ಪಾ ದಾಸ್ತಿಕೋಪ್ಪ ಸಂದರ್ಶನದಲ್ಲಿ ಅವರು ಈ ಹುದ್ದೆಗೆ ಅರ್ಹತೆಯಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅದರಂತೆ ಅವರ ಪತಿ ಡಾ.ವಿನಯ ದಾಸ್ತಿಕೋಪ್ಪ ಅವರಿಗೂ ಸಹ ಅರ್ಹತೆಯಿಲ್ಲ ಎಂದು ಸಂದರ್ಶನಕಾರರು ಸ್ಪಷ್ಟವಾಗಿ ತಿಳಿಸಿದರೂ ಅವರನ್ನು ಯಾವ ಆಧಾರದ ಮೇಲೆ ಹುದ್ದೆ ನೀಡಿದ್ದಾರೆ ಎಂಬುದು ಎಲ್ಲರನ್ನು ಕಾಡುತ್ತಿದೆ.
ಅಲ್ಲದೆ ಇವರ ಮೇಲೆ ಕೆಲ ವರ್ಷಗಳಿಂದ ಈ ಕುರಿತು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಸರಕಾರದ ಮೇಲೆ ಇಂಥವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ ಅಂದಿನ ವೈದ್ಯಕೀಯ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದರು.
ರೋಷ್ಟರ್ ಎನ್ನುವುದು ಒಂದು ನಿಯಮ ಆದರೆ ಇದರ ಪ್ರಕಾರ ಹುದ್ದೆ ನೇಮಕಾತಿಯಾಗಿಲ್ಲ. ಅರ್ಜಿ ಕರೆದಿರುವುದು ಪ್ರಾಧ್ಯಾಪಕ ಭರ್ತಿಯಾಗಿದ್ದು ಸಹಪ್ರಾಧ್ಯಾಪಕ. ಈ ಕುರಿತು ಕಳೆದ ಎರಡು ವರ್ಷಗಳಿಂದ ತನಿಖೆ ನಡೆಯುತ್ತಿದ್ದರೂ ಅವರ ಮೇಲೆ ಯಾವುದೇ ಪರಿಣಾ ಬೀರಿಲ್ಲ.
ಅಲ್ಲದೆ ಸರಕಾರಿ ಸಂಬಳ ಪಡೆದುಕೊಂಡು ಹಾಯಾಗಿ ಇದ್ದಾರೆ. ಇವರ ಬೆನ್ನಿಗೆ ಬೆಂಗಳೂರಿನ ಕೆಲವರು ಶಾಮಿಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ.

loading...