ವಿವಿಧೆಡೆ 70ನೇ ಗಣರಾಜ್ಯೋತ್ಸವ

0
1

ಕನ್ನಡಮ್ಮ ಸುದ್ದಿ-ನರೇಗಲ್ಲ: ಸ್ವಾತಂತ್ರ್ಯ ನಂತರ ಚದುರಿ ಹೋಗಿದ್ದ ರಾಜ್ಯಗಳನ್ನು ಒಟ್ಟುಗೂಡಿಸಲು ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಕೆ.ಎಂ. ಮುನ್ಷಿ ಅವರ ನೇತೃತ್ವದಲ್ಲಿ ರಚಿಸಿದ ಸಂವಿಧಾನದ ಕರಡು ಪ್ರತಿಯನ್ನು 1950 ಜ.26ರಂದು ಕಾರ್ಯರೂಪಕ್ಕೆ ತರಲಾಯಿತು ಎಂದು ಡಾ. ಅಭಿನವ ಅನ್ನದಾನ ಸ್ವಾಮೀಜಿ ಹೇಳಿದರು.
ಪಟ್ಟಣದ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ 70ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಎಸ್.ಜಿ.ಹಿರೇಮಠ, ಸೋಮಣ್ಣ ಹರ್ಲಾಪೂರ ಅಧ್ಯಕ್ಷತೆ ವಹಿಸಿದ್ದರು. ವೈ.ಸಿ.ಪಾಟೀಲ, ಎಂ. ಅನಸೂಯಾ, ಬಿ.ಜಿ.ಶಿರಶಿ, ಪ್ರವೀಣ ಜುಟ್ಲದ, ಎಸ್.ಬಸಪ್ಪ, ಬಿ.ಜಿ.ಕುಲಕರ್ಣಿ, ಎಚ್.ಎಸ್.ಅಬ್ಬಿಗೇರಿ, ವಿಜಯಲಕ್ಷ್ಮೀ ಪುರಾಣಿಕಮಠ ಇದ್ದರು.
ಪಟ್ಟಣ ಪಂಚಾಯಿತಿಯಲ್ಲಿ ನಡೆದ 70ನೇ ಗಣರಾಜ್ಯೋತ್ಸವ ಪ್ರಯುಕ್ತ ಪ.ಪಂ ಮುಖ್ಯಾಧಿಕಾರಿ ಎಸ್.ಎಸ್. ಹುಲ್ಲಮ್ಮನವರ ಧ್ವಜಾರೋಹಣ ನೆರವೇರಸಿದರು. ನೂತನವಾಗಿ ಪ.ಪಂ ಸದಸ್ಯರಾಗಿ ಆಯ್ಕೆಯಾದ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು. ಜಕ್ಕಲಿ ಗ್ರಾಮ ಪಂಚಾಯತಿಯಲ್ಲಿ 70ನೇ ಗಣರಾಜ್ಯೋತ್ಸವ ಆಚರಣೆ ಜಕ್ಕಲಿ ಗ್ರಾಮದ ಗ್ರಾಮ ಪಂಚಾಯತಿಯಲ್ಲಿ ಶನಿವಾರ 70ನೇ ಗಣರಾಜ್ಯೋತ್ಸವ ಪ್ರಯುಕ್ತ ಗ್ರಾ.ಪಂ ಅಧ್ಯಕ್ಷೆ ಯಲ್ಲವ್ವ ಜಾಲಣ್ಣವರ ಧ್ವಜಾರೋಹಣ ನೆರವೇರಸಿದರು.
ಪಿ.ವ್ಹಿ.ವಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪಂ ಉಪಾಧ್ಯಕ್ಷ ಎ.ವ್ಹಿ. ಯಾವಗಲ್ಲ, ಗ್ರಾ.ಪಂ ಸದಸ್ಯ ಪಿ.ಎಸ್. ತುರಾಯದ, ಎಸ್.ವ್ಹಿ.ಗಡಾದ, ಎಚ್.ಸಿ. ದೊಡ್ಡಮೇಟಿ, ಎಸ್.ವ್ಹಿ.ಪಾಟೀಲ, ಗ್ರಾ.ಪಂ ಸದಸ್ಯೆ ಎಚ್.ಎಸ್.ತಳವಾರ, ಎಂ.ಎಸ್.ತಳವಾರ, ಎಂ.ಜಿ.ಅನೇಸೂರ, ಎಸ್.ಬಿ.ಚಲವಾದಿ, ಬಿ.ಎ.ಹದ್ಲಿ, ಎ.ವ್ಹಿ.ಜಂಗಣ್ಣವರ, ಪಿಡಿಓ ಫಕ್ರುಧಿನ ನದಾಫ ಹಾಗೂ ಗ್ರಾಮದ ಮಹಿಳಾ ರೈತ ಸಂಘದ ಸರ್ವ ಸದಸ್ಯರು ಮತ್ತು ಗ್ರಾ.ಪಂ ಸಿಬ್ಬಂದಿ ಪಾಲ್ಗೋಂಡಿದ್ದರು. ಕಾರ್ಯದರ್ಶಿ ಎಸ್.ತಿಮ್ಮಿಶೆಟ್ಟಿ ನಿರ್ವಹಿಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 70ನೇ ಗಣರಾಜ್ಯೋತ್ಸವ ಆಚರಣೆ ನರೇಗಲ್ಲ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಶನಿವಾರ 70ನೇ ಗಣರಾಜ್ಯೋತ್ಸವ ಪ್ರಯುಕ್ತ ಎಸ್.ಡಿ.ಎಂ.ಸಿ ಅಧ್ಯಕ್ಷ ಸಣ್ಣವೀರಪ್ಪ ಮಣ್ಣೊಡ್ಡರ ಧ್ವಜಾರೋಹಣ ನೆರವೇರಸಿದರು. ಸಿಆರ್‍ಪಿ ಬಿ.ಬಿ.ಕುರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಶಿಕ್ಷಕ ಡಿ.ಎಚ್.ಪರಂಗಿ, ಶೇಖಪ್ಪ ಕಳಕಣ್ಣವರ, ಸುಶ್ಮಿತಾ ಶ್ರೀಗಿರಿ, ವಾಸಂತಿ ಬಾದನಟ್ಟಿ, ರೇಖಾ ಮಣ್ಣೊಡ್ಡರ, ವಿಜಯಲಕ್ಷೀ ಕೊಟಗಿ, ವೇದುಪ್ರಿಯಾ ಕುರಿ, ಶಿಕ್ಷಕ ಎಸ್.ಎಚ್.ಹಾದಿಮನಿ, ಜೆ.ಎ.ಪಾಟೀಲ, ಆರ್.ಡಿ ತೋಟಗಂಟಿ, ಎಸ್.ಎಂ ಕರಡಿ, ಟಿ.ಎ.ಜೋಶಿ, ಆರ್.ಎ.ಶ್ಯಾಮ, ಎನ್.ಎಲ್.ಚವ್ಹಾಣ ಇದ್ದರು.

loading...