ವಿವಿಧ ಸಾಂಸ್ಕ್ಕತಿಕ ಸ್ಪರ್ಧೆಗಳು

0
25

ಗೋಕಾಕ 17: ಪ್ರಸಕ್ತ ಸಾಲಿನ 12ನೇ ಸತೀಶ ಶುಗರ್ಸ ಅವಾರ್ಡ್ಸ ಅಂತಿಮ ಹಂತದ ಸಾಂಸ್ಕ್ಕತಿಕ ವಿವಿಧ ಸ್ಪರ್ಧೆಗಳು ವರ್ಣರಂಜಿತ ಭವ್ಯ ವೇದಿಕೆಯ ಮೇಲೆ ನಾಳೆ ದಿ: 17 ರಿಂದ 20 ರವರೆಗೆ ನಾಲ್ಕು ದಿನಗಳ ಕಾಲ ನಗರದ ಮಹರ್ಷಿ ವಾಲ್ಮಿಕಿ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಸ್ಪರ್ಧೆಗಳ ರೂವಾರಿ ಯಮಕನಮರ್ಡಿ ಶಾಸಕರು ಸತೀಶ ಜಾರಕಿಹೊಳಿ ಹೇಳಿದರು.

ನಗರದ ವಾಲ್ಮಿಕಿ ಕ್ರೀಡಾಂಗಣದಲ್ಲಿ ಬುಧವಾರದಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ನಾಲ್ಕು ದಿನಗಳವೆರೆಗೆ ನಡೆಯುವ ಅಂತಿಮ ಹಂತದ ಸ್ಪರ್ಧೆಯಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗದಿಂದ ಒಟ್ಟು 906 ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಭಾಷಣ, ಗಾಯನ, ಜಾನಪದ ಗಾಯನ, ಭಾವಗೀತೆ, ಹಾಸ್ಯಾಭಿನಯ, ಭರತನಾಟ್ಯ, ಜಾನಪದ ನಾಟ್ಯ, ಹಾಗೂ ಸಮೂಹ ನೃತ್ಯಗಳ ಸ್ಪರ್ಧೆಗಳು ನಡೆಯಲಿವೆ ಎಂದರು.

ಗೋಕಾಕ ತಾಲೂಕಾ ಮಟ್ಟದಲ್ಲಿ ಎಸ್ಎಸ್ಎಲ್ಸಿ, ಪಿಯುಸಿ, ಕಲಾ, ವಾಣಿಜ್ಯ, ವಿಜ್ಞಾನ ಹಾಗೂ ಯಾವುದೇ ಪದವಿಗಳ ಅಂತಿಮ ಹಂತದ ವಾರ್ಷಿಕ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ 10,000 ರೂ. ನಗದು ಹಣ ನೀಡಿ ಗೌರವಿಸಲಾಗುವುದು. ಈ ಬಾರಿ ಒಟ್ಟು 24 ವಿದ್ಯಾರ್ಥಿಗಳು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆಂದು ಸತೀಶ ತಿಳಿಸಿದರು.

ಬೆಳಗಾವಿ ಜಿಲ್ಲಾ ವಿಜ್ಞಾನ ವಸ್ತು ಪ್ರದರ್ಶನ ಪ್ರೌಢ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ದಿ:17 ರಿಂದ 19 ರವರೆಗೆ ನಗರದ ಸರಕಾರಿ ಕಿರಿಯ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ. ಈ ಅಂತಿಮ ಹಂತದ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಿಂದ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಒಟ್ಟು 10 ಸಾವಿರ ರೂಪಾಯಿಗಳ ನಗದು ಬಹುಮಾನದ ಜೊತೆಗೆ ಆಕರ್ಷಕ ಟ್ರಾಫಿಗಳನ್ನು ನೀಡಲಾಗುವುದು. ಈ ನಾಲ್ಕು ದಿನಗಳ ಸ್ಪರ್ಧೆಗಳಿಗಾಗಿ 60 ಜನ ನಿರ್ಣಾಯಕರು, 100 ಜನ ಸ್ವಯಂ ಸೇವಕರು, 60 ಜನ ಸಂಘಟಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ಸತೀಶ ಜಾರಕಿಹೊಳಿ ಹೇಳಿದರು.

ಸ್ಪರ್ಧಿಗಳು ಪ್ರತಿದಿನ ಸಂಜೆ 5 ಘಂಟೆಗೆ ಆರಂಭವಾಗಲಿದ್ದು, ಸ್ಪರ್ಧೆಗಳಿಗಾಗಿ ವಾಲ್ಮಿಕಿ ಕ್ರೀಡಾಂಗಣದಲ್ಲಿ ವರ್ಣರಂಜಿತ ವಿದ್ಯುತ್ ದೀಪಾಲಂಕಾರ, ಎಲ್.ಈ.ಡಿ. ಭವ್ಯ ಪರ್ದೆಯನ್ನು ಅಳವಡಿಸಲಾಗಿದ್ದು ಸುಮಾರು ಒಂದು ಲಕ್ಷ ಜನ ವೀಕ್ಷಿಸಲು ಸ್ಥಳಾವಕಾಶ ಮಾಡಲಾಗಿದೆ ಎಂದು ಸತೀಶ ಜಾರಕಿಹೊಳಿ ವಿವರಿಸಿದರು. ಈ ಸಂದರ್ಭದಲ್ಲಿ ಸಂಘಟಕರರಾದ ರಿಯಾಜ ಚೌಗಲಾ, ಎಸ್.ಎ.ರಾಮಗಾನಟ್ಟಿ ಸೇರಿದಂತೆ ಇನ್ನಿತರರು ಇದ್ದರು.

loading...

LEAVE A REPLY

Please enter your comment!
Please enter your name here