ವಿಶ್ವಶಾಂತಿಗಾಗಿ ಸಾಮೂಹಿಕ ಪ್ರಾರ್ಥನೆ:ಇಕ್ಬಾಲ್ ಅನ್ಸಾರಿ

0
30

ಗಂಗಾವತಿ: ವಿಶ್ವಶಾಂತಿ ಮತ್ತು ನೆಮ್ಮದಿಗಾಗಿ ಮುಸ್ಲಿಂ ಸಮಾಜದವರು ಇಂದು ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದರು ಎಂದು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ತಿಳಿಸಿದರು.
ಜಯನಗರದ ಈದ್ಗಾ ಮೈದಾನದಲ್ಲಿ ಶನಿವಾರ ನಡೆದ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಂiÀiಲ್ಲಿ ಪಾಲ್ಗೊಂಡು ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ರಂಜಾನ್ ಹಬ್ಬ ಮುಸ್ಲಿಂರ ಪವಿತ್ರ ಆಚರಣೆಯಾಗಿದೆ. ಒಂದು ತಿಂಗಳು ಕಾಲ ಕಠಿಣ ಉಪವಾಸ ವೃತವನ್ನು ಕೈಗೊಂಡಿರುತ್ತಾರೆ. ಈ ಸಂದರ್ಭಲ್ಲಿ ಒಂದು ಹನಿ ನೀರನ್ನು ಸಹ ಅವರು ಕುಡಿಯುವದಿಲ್ಲ. ಮನಸ್ಸು ಸುದ್ದಿಗಾಗಿ, ವಂಚನೆ ಮತ್ತು ಕಪಟವನ್ನು ಈ ಸಂದರ್ಭದಲ್ಲಿ ವೃತಾಚರಣೆಯಿಂದ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ದೇಶದ ಎಲ್ಲ ವರ್ಗಗಳ ಜನರು ಶಾಂತಿ ಮತ್ತು ನೆಮ್ಮದಿಯಿಂದ ಇರಬೇಕು. ನಮ್ಮ ದೇಶದ ಸಂವಿಧಾನದ ಚೌಕಟ್ಟಿನಲ್ಲಿ ನಾವು ಸಾಗಬೇಕಾಗಿದೆ. ರಂಜಾನ್ ಮಾಸದ ಅಂಗವಾಗಿ ತಾವು ಸಹ ಉಪವಾಸ ವೃತ ಮಾಡಿದ್ದೆ. ಈ ಕಾರಣಕ್ಕೆ ತಾವು ಮಾಧ್ಯಮಗಳಿಂದ ದೂರ ಉಳಿದಿದ್ದೆ ಎಂದು ಸಮಜಾಯಿಸಿ ನೀಡಿದರು.
ವಿಧಾನಸಭಾ ಚುನಾವಣೆ ಫಲಿತಾಂಶಗೊಂಡ ಎರಡು ದಿನಗಳ ನಂತರ ರಂಜಾನ್ ಆರಂಭಗೊಂಡಿದೆ. ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿದ ಎಲ್ಲ ವರ್ಗದ ಮತದಾರರಿಗೆ ತಾವು ಕೃತಜ್ಞತೆಂiÀiನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು. ತಾವು ಸೋಲಿನಿಂದ ದೃತಿಗೆಟ್ಟಿಲ್ಲ. ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಇದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ತಿಳಿಸಿದರು.
ಇಂದಿನ ಸಾಮೂಹಿಕ ಪ್ರಾರ್ಥನೆಯಲ್ಲಿ ನಮ್ಮ ದೇಶ, ರಾಜ್ಯ ಮತ್ತು ಈ ಭತ್ತದ ಪಟ್ಟಣ ಶಾಂತಿ, ಸುಭಿಕ್ಷೆ, ಸಕಾಲಕ್ಕೆ ಮಳೆಯಾಗಬೇಕು, ರೈತರು ಸುಖವಾಗಿರಬೇಕು ಎಂದು ಪ್ರಾರ್ಥನೆಯನ್ನು ಸಲ್ಲಿಸಿದ್ದಾಗಿ ತಿಳಿಸಿದರು. ಈ ಸಂದಭದಲ್ಲಿ ನಗರಸಭೆ ಹಿರಿಯ ಸದಸ್ಯ ಶಾಮೀದ್ ಮನಿಯಾರ್, ಮನೋಹರಸ್ವಾಮಿ ಮುದೇನೂರು ಹಿರೇಮಠ, ಉಪಾಧ್ಯಕ್ಷ ಕಮ್ಲಿಬಾಬಾ ಪಾಲ್ಗೊಂಡಿದ್ದರು. ಮುಸ್ತಫಾ ಕಮಾಲ್ ನೇತ್ರತ್ವದಲ್ಲಿ ಪ್ರಾರ್ಥನೆ ನಡೆಯಿತು.

loading...