ವಿಶ್ವ ಏಡ್ಸ ದಿನಾಚರಣೆ

0
46

ಇಳಿಕೆಯಾದ  ಏಚ್ಐವಿ/ಏಡ್ಸ್ ಪ್ರಮಾಣ

                ಬಾಗಲಕೋಟೆ, 30–  ಹೆಚ್ಚಿನ ಏಚ್ಐವಿ/ಏಡ್ಸ್ ಸೊಂಕಿತರ ಸಂಖ್ಯೆಯಿಂದಾಗಿ 2003ರಲ್ಲಿ ದೇಶದಲ್ಲೇ 3ನೇ ಸ್ಥಾನದಲ್ಲಿದ್ದು ಸರಕಾರದ ರಾಷ್ಟ್ತ್ರ ಹಾಗೂ ಅಂತರಾಷ್ಟ್ತ್ರೀಯ ಸಂಘ-ಸಂಸ್ಥೆಗಳ ಗಮನ ಸೆಳೆದಿದ್ದ ಬಾಗಲಕೋಟೆ ಜಿಲ್ಲೆಯಲ್ಲಿಗ ಸೋಂಕಿತರ ಪ್ರಮಾಣ ತೀವ್ರವಾಗಿ ಇಳಿಕೆಯಾಗಿರುವುದು ಕಂಡು ಬಂದಿದೆ.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಗಳ  ಅಂಕಿ ಸಂಖ್ಯೆಗಳ ಪ್ರಕಾರ 2003 ರಲ್ಲಿ 2611 ಪತ್ತಿಕ್ಷೆಗೊಳಪಟ್ಟ ಜನರ ಪೈಕಿ 1069 ಜನರಿಗೆ  ಸೋಂಕು ತಗಲಿ ಶೇ 40.9 ರಷ್ಟು ಪ್ರಮಾಣ ದಾಖಲಾಗಿ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು. 2006 ರಲ್ಲಿ 5153 ಜನರ ಪೈಕಿ 2072 ಜನರು ಸೋಂಕಿತರಾಗಿದ್ದು, ಶೇಕಡಾ 38 ರಷ್ಟಾಗಿತ್ತು. 2008 ರಲ್ಲಿ 17181 ಜನರನ್ನು ಪರೀಕ್ಷಿಸಿ ಈ ಪೈಕಿ 4462 ಜನ ಸೋಂಕಿತರಿದ್ದು, 2011 ರಲ್ಲಿ 31047 ಪೈಕಿ 3867 ಜನರಿಗೆ ಸೋಂಕು ತಗಲಿ ಶೇ 12 ರಷ್ಟು ಪ್ರಮಾಣ ಇಳಿಕೆಯಾಗಿರುತ್ತದೆ. ಅಕ್ಟೌಬರ ವರೆಗೆ 36358 ಜನರನ್ನು ಪರೀಕ್ಷಿಸಿದಾಗ ಕೇವಲ ಶೇ 8 ರಷ್ಟು ಜನರಿಗೆ ಅಂದರೆ 2909 ಜನರಿಗೆ ಮಾತ್ರ ಸೋಂಕಿರುವುದು ಕಂಡು ಬಂದಿದೆ. ಗರ್ಭಿಣಿ ಸ್ತ್ತ್ರೀಯರಲ್ಲಿ ಶೇಕಡಾ 3 ರಷ್ಟಿದ್ದು ಪ್ರಮಾಣ ಈಗ 0.44 ಕ್ಕೆ ಇಳಿಕೆಯಾಗಿದೆ. 2003 ರಲ್ಲಿದ್ದ ಒಟ್ಟಾರೆ ಶೇಕಡಾ 3.13 ರಷ್ಟು ಸೋಂಕಿತರ ಪ್ರಮಾಣ ಈಗ 0.63 ಕ್ಕೆ ಇಳಿಕೆಯಾಗಿದೆ. ಈ ವರೆಗೆ 1.59 ಲಕ್ಷ ಜನರನ್ನು ಪರೀಕ್ಷಿಸಿ 31906 ಜನರು ಸೋಂಕಿತರಿದ್ದಾರೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 2008 ರಲ್ಲಿ ಜಿಲ್ಲಾ  ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕವನ್ನು  ಪ್ರಾರಂಭಿಸಲಾಯಿತು. ಇದರಡಿಯಲ್ಲಿ 17 ಸರಕಾರಿ ಆಸ್ಪತ್ರೆ  ಹಾಗೂ ಜಿಲ್ಲೆಯ ಎಲ್ಲ 43 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ 26 ಖಾಸಗಿ ಸಹಭಾಗಿತ್ವಗಳಲ್ಲಿ ಆಪ್ತಸಮಾಲೋಚನಾ ಹಾಗೂ ಪರೀಕ್ಷೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾ ಆಸ್ಪತ್ರೆ, ಮುಧೋಳ ಕೆ.ಇ.ಎಂ ಆಸ್ಪತ್ರೆ, ಜಮಖಂಡಿ ಉಪವಿಭಾಗೀಯ ಆಸ್ಪತ್ರೆ ಹಾಗೂ ಹುನಗುಂದ ಆಸ್ಪತ್ರೆಗಳಲ್ಲಿ ಏಚ್.ಐ.ವಿ ಪೀಡಿತರು ಸೂಕ್ತ ಚಿಕಿತ್ಸೆ ನೀಡಲು ಎ.ಆರ್.ಟಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬಾಗಲಕೋಟದಲ್ಲಿ 17125, ಮುಧೋಳದಲ್ಲಿ 3626, ಜಮಖಂಡಿಯಲ್ಲಿ 3610 ಹಾಗೂ ಹುನಗುಂದದಲ್ಲಿ 720 ಸೇರಿ ಒಟ್ಟು 25081 ಸೋಂಕಿತರು ಚಿಕಿತ್ಸೆಗಾಗಿ ಹೆಸರು ನೊಂದಾಯಿಸಿದ್ದು, ಒಟ್ಟು 15848 ಸೋಂಕಿತರು ಈಗಾಗಲೇ ಸಿ.ಡಿ 4 ಸಂಖ್ಯೆಯ ಆಧಾರದ ಮೇಲೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಂದೆ-ತಾಯಿಯಿಂದ ಮಗುವಿಗೆ ಏಚ್.ಐ.ವಿ ಹರಡುವುದನ್ನು ತಡೆಯಲು ಪಿ.ಪಿ.ಟಿ.ಸಿಟಿ ಸೇವೆಯಡಿ ಜಿಲ್ಲೆಯ ಎಲ್ಲ ಗರ್ಭಿಣಿ ಸ್ತ್ತ್ರೀಯರನ್ನು ಏಚ್.ಐ.ವಿ ಪರೀಕ್ಷೆಗೊಳಪಡಿಸಲಾಗುತ್ತಿದೆ. ಸೋಂಕಿತ ಗರ್ಭಿಣಿಗೆ ಹುಟ್ಟಿದ ಮಗುವಿಗೆ ಸೋಂಕನ್ನು ತಡೆಯಲು ಕಡ್ಡಾಯವಾಗಿ ನವಿರೋಪಿನ ದ್ರಾವಣವನ್ನು ನೀಡಲಾಗುತ್ತದೆ. ಜಿಲ್ಲೆಯಲ್ಲಿ ಈವರೆಗೆ 1217 ಸೋಮಕಿತ ಗರ್ಭಿಣಿ ಸ್ತ್ತ್ರೀಯರ ಹೆರಿಗೆಯಾಗಿದ್ದು, 1130 ಮಕ್ಕಳಿಗೆ ನೆರೋಪಿನ್ ಓಷಧಿ ನೀಡಲಾಗಿದೆ. 18 ತಿಂಗಳ ನಂತರ 377 ಮಕ್ಕಳನ್ನು ಪರೀಕ್ಷಿಸಿದಾಗ ಕೇವಲ 19 ಮಕ್ಕಳು ಸೋಂಕಿತರಾಗಿದ್ದಾರೆ.

ಜಿಲ್ಲೆಯ ಮುಧೋಳ ಹಾಗೂ ಜಮಖಂಡಿಯಲ್ಲಿ ಹೆಚ್ಚಿನ ಸೋಂಕಿತರಿದ್ದಾರೆ. ಏಚ್.ಐ.ವಿ ಯನ್ನು ತಡೆಯಲು ಮನೆ ಮನೆ ಮಾಹಿತಿ ಕಾರ್ಯಕ್ರಮ ಯಶಸ್ವಿಯಾಯಿತು. ಆರೋಗ್ಯ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳು ಏಚ್.ಐ.ವಿ ತಡೆಯಲು ಜಾಗೃತಿ ಹಾಗೂ ಅರಿವು ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡಿವೆ.

ಒಟ್ಟು 5000 ಸಾವಿರ ಹೆಣ್ಣು ಲೈಂಗಿಕ  ಕಾರ್ಯಕರ್ತೆಯರಿದ್ದು ಇವರ ಆರ್ಥಿಕಕ ಅಭಿವೃದ್ದಿಗೆ ಚೈತನ್ಯ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ. ರಾಜ್ಯದಲ್ಲೇ ಪ್ರಥಮ ಬಾರಿಗೆ ಈ ಕಾರ್ಯಕರ್ತೆಯರ ಸಹಕಾರಿ ಬ್ಯಾಂಕ್ ಆರಂಭಿಸಿ ಪುನರ್ವಸತಿಗಾಗಿ ವಿವಿಧ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. 900 ಪುರುಷ ಸಲಿಂಗ ಕಾಮಿಗಳಿದ್ದು ಇವರಲ್ಲಿ ಅರಿವು ಮೂಡಿಸಲು ಮಿಲನ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ. ಏಚ್.ಐ.ವಿ ಹಾಗೂ ಏಡ್ಸ್ ಸೋಂಕಿತರ ಅಭಿವೃದ್ದಿಗೆ ಜೀವನ ಜ್ಯೌತಿ ಸಂಸ್ಥೆಯು ಹಾಗೂ ವಲಸೆಗಾರರಲ್ಲಿ ಜಾಗೃತಿ ಮೂಡಿಸಲು ಬರ್ಡ್ಸ ಸಂಸ್ಥೆಯು ನಿರಂತರವಾಗಿ ಶ್ರಮಿಸುತ್ತಿವೆ. ಅಂತೂ 2003 ರಲ್ಲಿ ದೇಶದ ಗಮನ ಸೆಳೆದಿದ್ದು ಬಾಗಲಕೋಟೆಯಲ್ಲಿಗ ಸೋಂಕಿತರ ಪ್ರಮಾಣ ತೀವ್ರವಾಗಿ ಕಡಿಮೆಯಾಗಿದ್ದರೂ ಸಹ ಹಾಗೃತಿ ಅರಿವು ಕಾರ್ಯಕ್ರಮಗಳು ನಿರಂತರವಾಗಿಸುವ ಅನಿವಾರ್ಯವಿದೆ.

loading...

LEAVE A REPLY

Please enter your comment!
Please enter your name here