ವಿಶ್ವ ಪರಿಸರ ದಿನಾಚರಣೆ

0
47

ಕಲಘಟಗಿ : ತಾಲೂಕಿನ ಮಡಕಿಹೋನ್ನಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಾಮಾಜಿಕ ಅರಣ್ಯ ಇಲಾಖೆ, ಹಾಗೂ ಬಿಡಿ ಎಸ್ ಎಸ್ ಸಮಾಜ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮಡಕಿಹೊನ್ನಳ್ಳಿ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪರಿಸರ ಉಳವಿಗೆ ಮಕ್ಕಳ ಪಾತ್ರ ಮುಖ್ಯ ಇತ್ತೀಚಿನ ದಿನಗಳಲ್ಲಿ ಪರಿಸರದ ಸಮತೋಲನವು ಹಾಳಾಗುತ್ತದೆ ವಿಶೇಷವಾಗಿ ಮಕ್ಕಳು ಜಾಗೃತರಾಗಿ ಪರಿಸರ ಸಂರಕ್ಷಸುವದು ಅವಶ್ಯವಾಗಿದೆ ಎಂದು ಸಸಿ ನೆಡುವದರ ಮೂಖಾಂತರ ಕರ್ಯಕ್ರಮ ಉದ್ಘಾಟಿಸಿ ತಾಲೂಕಾ ಪಂಚಾಯತ್ ಮಾಜಿ ಅದ್ಯಕ್ಷ ಮಲ್ಲೇಶ ಜಾವೂರು ಹೇಳಿದರು.
ತಾಲೂಕಿನ ಸಾಮಾಜಿಕ ಅರಣ್ಯ ಇಲಾಖೆಯ ಪ್ರಭಾರಿ ಅಧಿಕಾರಿಗಳಾದ ರಮೇಶ ಕಡೆಮನಿ ಮಾತನಾಡಿ ಪರಿಸರ ಸಂರಕ್ಷಸುವದು ಪ್ರತಿಯೊಬ್ಬ ವ್ಯೆಕ್ತಿಯ ಜವಬ್ದಾರಿಯಾಗಿದೆ ಸಸಿಗಳನ್ನು ನೆಡುವದಲ್ಲದೇ ಸಂರಕ್ಷಸುವದು ಅಷ್ಟೇ ಮುಖ್ಯವಾಗಿದೆ ಎಂದರು.
ಮಾನವನ ಅತಿ ಆಶೆಯೇ ಪರಿಸರ ಕೆಡಲು ಕಾರಣ ಪರಿಸರವಿಲ್ಲದೇ ನಮಗೆ ಬದುಕೇ ಇಲ್ಲ ಎಂಬ ಸತ್ಯವನ್ನ ಅರ್ಥಮಾಡಿಕೊಳ್ಳಬೇಕು. ಎಂದು ಶಾಲೆಯ ಪ್ರಧಾನ ಗುರುಗಳಾದ ವಾಯ್.ಜಿ ಭಗವತಿ ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಬಸವರಾಜ ಇಂದೂರ, ಗ್ರಾ ಪಂ ಸದಸ್ಯರುಗಳಾದ ನಾಗಪ್ಪ ಜಾವೂರು, ಕಲ್ಲಯ್ಯ ಹಿರೇಮಠ, ಹಿರಿಯರಾದ ಶಿವಪುತ್ರಪ್ಪ ಆಲದಕಟ್ಟಿ, ಶಿದ್ದರಾಮಯ್ಯ ಹಿರೇಮಠ, ಕಲ್ಲಪ್ಪ ಪರವಾಪೂರ, ಶಿವಾನಂದ ಇಂದೂರ, ಕಲ್ಮೇಶ ಇನಾಮತಿ, ಸ್ವ ಸಹಾಯ ಸಂಘದ ಸದಸ್ಯರು.ಶಾಲಾ ಮಕ್ಕಳು ಉಪಸ್ಥಿತರಿದ್ದರು. ಒಟ್ಟು 55 ಜನ ಭಾಗವಹಿಸಿದ್ದರು,

loading...

LEAVE A REPLY

Please enter your comment!
Please enter your name here