ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ

0
41

ಕುಕನೂರ ಜೂ-24, ಬೆಣಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿಶ್ವಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಆಚರಿಸಲಾಯಿತು. ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸರ್ವಸದಸ್ಯರು, ಎಸ್ಡಿಎಂಸಿ ಅಧ್ಯಕ್ಷರು ಮತ್ತು ಶಾಲಾ ಶಿಕ್ಷಕರು ಸಮುದಾಯ ಸಂಘಟಕರು, ಗ್ರಾ. ಪಂ. ಅಭಿವೃದ್ದಿ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯವರು, ಶಿಕ್ಷಣ ಪ್ರೇಮಿಗಳು ಎಲ್ಲರೂ ಸೇರಿಕೊಂಡು ಗ್ರಾಮದ ಪ್ರತಿ ಓಣಿಯಲ್ಲಿ ಜಾಥಾ ಮಾಡುವುದರ ಮೂಲಕ ಶಾಲೆಯಿಂದ ಹೊರಗಡೆ ಇರುವ ಮಕ್ಕಳನ್ನು ಮತ್ತೆ ಶಾಲೆಗೆ ಕಳಿಸಿಕೊಡಿ ಎಂದು ಘೋಷಣೆ ಕೂಗುತ್ತಾ ಜಾಥಾ ಕಾರ್ಯಕ್ರಮ ಮಾಡಲಾಯಿತು. ಕಾರ್ಯಕ್ರಮದ ಗ್ರಾ. ಪಂ. ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮವ್ವ ಪಟ್ಟೆದ ವಹಿಸಿಕೊಂಡಿದ್ದರು. ಎಸ್ಡಿಎಂಸಿ ಅಧ್ಯಕ್ಷರು ಶ್ರೀ ಹನುಮಪ್ಪ ಕಲ್ಲೂರ ಅತಿಥಿ ಸ್ಥಾನ ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಶ್ರೀ ಶಿವಯ್ಯ ಸಸಿಮಠ ಸಮುದಾಯ ಸಂಘಟಕರು ಮಾತನಾಡಿದರು. ಕಾರ್ಯಕ್ರಮ ಕುರಿತು ಬೆಣಕಲ್ ಶಾಲೆಯ ಮುಖ್ಯೌಪಾಧ್ಯಾಯರು ಶ್ರೀ ಪ್ರಭುಲಿಂಗ ಗುರಿಕಾರ ಶಾಲೆ ಬಿಟ್ಟ ಮಕ್ಕಳ ಬಗ್ಗೆ ಎಸ್ಡಿಎಂಸಿಯವರಿಗೆ ಕರೆತರುವಂತೆ ತಿಳಿಸುವುದರ ಮೂಲಕ ಮಾತನಾಡಿದರು ಹಾಗೂ ಬಾಲಾಕಿಯರ ಶಾಲಾ ಮುಖ್ಯೌಪಾಧ್ಯಾಯರು ಶ್ರೀ ಶರಣಪ್ಪ ಸಜ್ಜನ ಇವರು ಬಾಲಕಾರ್ಮಿಕತೆ ಬಗ್ಗೆ ಮಾತನಾಡುವುದರ ಮೂಲಕ ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಹೇಳಿದರು. ನಂತರ ಮಕ್ಕಳು ನಮ್ಮ ಗ್ರಾಮದ ಅಭಿವೃದ್ದಿಗೆ ಹಾಗೂ ರಾಷ್ಟ್ತ್ರದ ಅಭಿವೃದ್ದಿಗೆ ಶಿಕ್ಷಣ ಕೊಡಿಸಿ ಇಂದಿನ ಮಕ್ಕಳ ನಾಳಿನ ಪ್ರಜೆಗಳು ಎಂದು ಹೇಳಿದರು. ನಂತರ ರವೀಂದ್ರ ಸದರಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ವಂದನಾರ್ಪಣೆ ಮಾಡಿ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

loading...

LEAVE A REPLY

Please enter your comment!
Please enter your name here