ವಿಶ್ವ ವಿಜೇತರಿಗೆ ತವರಿನಲ್ಲಿ ಹೃದಯಸ್ಪರ್ಶಿ ಸ್ವಾಗತ

0
20

ಪ್ಯಾರೀಸ್: ಫೀಪಾ ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೆ ಫ್ರೆಂಚ್ ಕಿಸ್ ನೀಡಿದ ಪ್ರಾನ್ಸ್ ತಂಡಕ್ಕೆ ತವರಿನಲ್ಲಿ ಅದ್ದೂರಿ ಸ್ವಾಗತಿ ದೊರೆತಿದೆ. ರಷ್ಯಾದಲ್ಲಿ ಇತಿಹಾಸ ನಿರ್ಮಿಸಿದ ಫ್ರಾನ್ಸ್ ಫುಟ್ಬಾಲ್ ತಂಡಕ್ಕೆ ತವರಿನಲ್ಲಿ ಭಾರೀ ವೆಲ್ ಕಮ್. ಸಾಗರದಂತೆ ಕಾಣುವ ಅಭಿಮಾನಿಗಳ ಸಮೂಹದಲ್ಲಿ ಫ್ರಾನ್ಸ್ ಬಾವುಟ, ಜೆರ್ಸಿ ತೊಟ್ಟ ಅಭಿಮಾನಿಗಳು, ಸಾಧಕರ ಬರುವಿಕೆಗಾಗಿ ಕಾದು ಕುಳಿತಿದ್ದರು.
ಅಲ್ಲದೆ ೨ ದಶಕಗಳಿಂದ ಮಾಯಾಜಿಂಕೆಯಂತೆ ಕಾಡಿದ ಫಿಫಾ ವಿಶ್ವಕಪ್ ನೋಡಿ, ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿಯಲು ಉತ್ಸುಕರಾಗಿದ್ದರು. ಎಲ್ಲಿ ನೋಡಿದ್ರೂ ಸಂಭ್ರಮ. ವಿಶ್ವ ವಿಜೇತರನ್ನು ನೋಡುವ ಪುಳಕ.ಭಾನುವಾರ ರಷ್ಯಾದ ಮಾಸ್ಕೋದಲ್ಲಿ ನಡೆದ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ೪-೨ ಗೋಲುಗಳಿಂದ ಕ್ರೊವೇಷಿಯಾ ತಂಡವನ್ನು ಮಣಿಸಿತ್ತು. ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಆಟಗಾರರ ಆಟ ಅಭಿಮಾನಿಗಳ ಮನ ಗೆದ್ದಿತ್ತು. ಸಾಧಕರ ಸಾಧನೆಯನ್ನು ಕೊಂಡಾಡಲು ಎಲ್ಲರೂ ಕಾಯುತ್ತಿದ್ದರು.
ರಷ್ಯಾಗೆ ತೆರಳುವಾಗ ಫ್ರಾನ್ಸ್ ಟೂರ್ನಿಯಲ್ಲಿ ಭಾಗವಹಿಸುವ ಒಂದು ತಂಡವಾಗಿತ್ತು. ಆದ್ರೆ, ರಷ್ಯಾದಿಂದ ವಾಪಸ್ ಬರುವಾಗ ವಿಶ್ವ ಚಾಂಪಿಯನ್ ಬಿರುದು ಜೊತೆಗಿತ್ತು.
ಚಾಂಪಿಯನ್ ತಂಡ ಫ್ರಾನ್ಸ್ಗೆ ಬರುತ್ತಿದ್ದಂತೆ, ಶೃಂಗಾರಗೊಂಡಿದ್ದ ತೆರೆದ ಬಸ್‌ನಲ್ಲಿ ಮೆರವಣಿಗೆ. ಸ್ಟಾರ್ ಪ್ಲೇಯರ್ಸ್ಗಳಿಗೂ ಸಂತಸ. ತಮ್ಮ ಸಾಧನೆಗೆ ಅಭಿಮಾನಿಗಳು ನೀಡಿದ ಸ್ವಾಗತ ಖುಷಿ ನೀಡಿತ್ತು. ಬರೀ ಅಭಿಮಾನಿಗಳು ಅಷ್ಟೇ ಅಲ್ಲಾ, ಆಟಗಾರರು ಸಹ ಸುಂದರ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದುಕೊಂಡ್ರು.

loading...