ವೃತ್ತಿ ನೈಪುಣ್ಯತೆಗೆ ಪತ್ರಿಕೋದ್ಯಮ ವಿವಿ ಸ್ಥಾಪನೆ ಅಗತ್ಯ-ರಫಿ ಭಂಡಾರಿ

0
46

Patrikodyama vvi stapisi

ವಿಜಾಪುರ : 20 ವೃತ್ತಿ ನೈಪುಣ್ಯತೆಗೆ ಪತ್ರಿಕೋದ್ಯಮ ವಿಶ್ವವಿದ್ಯಾಲಯ ಸ್ಥಾಪನೆ ಇಂದಿನ ಅಗತ್ಯ ಎಂದು ಹಿರಿಯ ಪತ್ರಕರ್ತ ರಫಿ ಭಂಡಾರಿ ಹೇಳಿದರು.
ಅವರು ಇಂದಿಲ್ಲಿ ಡಾ|| ಬಿ.ಆರ್. ಅಂಬೇಡ್ಕರ ಕ್ರೀಡಾಂಗಣ ಸಭಾಭವನದಲ್ಲಿ ವಿಜಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಮಾಧ್ಯಮ ಪ್ರಶಸ್ತಿ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪತ್ರಿಕೋದ್ಯಮ ಬೆಳವಣಿಗೆಗೆ ಬಜೆಟ್ನಲ್ಲಿ ವಿಶೇಷ ಅನುದಾನ ಒದಗಿಸಬೇಕೆಂದು ಭಂಡಾರಿ ಪ್ರತಿಪಾದಿಸಿದರು.
ಮಾಧ್ಯಮ ಕ್ಷೇತ್ರ ಆಗಾದವಾಗಿ ಬೆಳೆದಿದೆ. ಆದರೆ ಈ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅನನುಭವಿಗಳ ಪ್ರವೇಶದಿಂದಾಗಿ ನಾನಾ ರಾದ್ದಾಂತಗಳಿಗೆ ಕಾರಣವಾಗುತ್ತಿದೆ. ಈ ಸಂದರ್ಭದಲ್ಲಿ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳಲು ವಿಶೇಷ ಕಾರ್ಯಾಗಾರ ತರಬೇತಿ ಶಿಬಿರಗಳು ಪತ್ರಕರ್ತರ ಸಂಘದಿಂದ ನಿರಂತರವಾಗಿ ನಡೆಯುವಂತಾಗಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಜಿ.ಎನ್. ದೇಶಪಾಂಡೆ ಅವರು ಮಾತನಾಡಿ ಸಮಾಜದ ಏಳ್ಗೆಗಾಗಿ ಶ್ರಮಿಸುತ್ತಿರುವ ಪತ್ರಕರ್ತರಿಗೆ ಸರಕಾರ ಹಲವಾರು ಸೌಲಭ್ಯಗಳನ್ನು ಕಲ್ಪಿಸುವುದು ತೀರ ಅಗತ್ಯವಾಗಿದೆ ಎಂದರು.
ಪತ್ರಿಕಾ ದಿನಾಚರಣೆ, ಕಾರ್ಯಾಗಾರ ಕಾರ್ಯಕ್ರಮಗಳಿಗಾಗಿ ವಾರ್ತಾ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅನುದಾನ ಒದಗಿಸಿಕೊಡಬೇಕೆಂದು ದೇಶಪಾಂಡೆ ಆಗ್ರಹಿಸಿದರು.
ಮುಖ್ಯ ಅತಿಥಿಗಳಾಗಿ ಅನಿಲ ಹೊಸಮನಿ ಅವರು ಮಾತನಾಡಿ ಪತ್ರಕರ್ತರಲ್ಲಿ ಬರವಣಿಗೆ ಕಡಿಮೆಯಾಗಿದೆ. ಈ ಕುರಿತು ಪತ್ರಕರ್ತರು ಅಧ್ಯಯನಶೀಲರಾಗಿ ಉತ್ತಮ ಬರವಣಿಗೆಗೆ ಮುಂದಾಗಬೇಕೆಂದರು.
ಸಂಘದ ಹಿರಿಯ ಉಪಾಧ್ಯಕ್ಷರಾದ ಜಿ.ಸಿ. ಮುತ್ತಲದಿನ್ನಿ, ಟಿ.ಕೆ. ಮಲಗೊಂಡ ಮಾತನಾಡಿದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸೀತಾರಾಮ ಕುಲಕರ್ಣಿ ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ವಾಸುದೇವ ಹೇರಕಲ ಮಾತನಾಡಿ ಜಿಲ್ಲೆಯ ಪತ್ರಕರ್ತರಿಗೆ ಸೂರು, ಪತ್ರಿಕಾ ಭವನ ಉದ್ಘಾಟನೆ ಅಗತ್ಯತೆ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರ ಬಳಿ ನಿಯೋಗ ಕೊಂಡಯ್ದು ಒತ್ತಾಯಿಸಲಾಗುವುದೆಂದರು.
ಆರಂಭದಲ್ಲಿ ಜಿಲ್ಲಾಧ್ಯಕ್ಷ ರಾಜು ಎನ್. ಕೊಂಡಗೂಳಿ ಸ್ವಾಗತಿಸಿದರು. ಪ್ರಕಾಶ ಕುಂಬಾರ, ಸಂಗಮೇಶ ರೂಡಗಿ ನಿರೂಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎ. ನಾವಿ ವಂದಿಸಿದರು.

loading...

LEAVE A REPLY

Please enter your comment!
Please enter your name here